ಕರ್ನಾಟಕ

karnataka

ETV Bharat / bharat

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೂ.13ರಂದು ಪ್ರಧಾನಿ ಮೋದಿ ಇಟಲಿಗೆ - G7 Summit - G7 SUMMIT

ಜೂನ್ 13 ರಿಂದ 15 ರವರೆಗೆ ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಗುರುವಾರ ಇಟಲಿಗೆ ಪ್ರಯಾಣಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ (IANS)

By ETV Bharat Karnataka Team

Published : Jun 12, 2024, 5:31 PM IST

ನವದೆಹಲಿ: ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ನೂತನ ಅವಧಿಯ ಪ್ರಥಮ ವಿದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ. ಜೂನ್ 13ರಿಂದ 15 ರವರೆಗೆ ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಗುರುವಾರ ಇಟಲಿಗೆ ಪ್ರಯಾಣಿಸಲಿದ್ದಾರೆ.

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಶುಕ್ರವಾರ ಜಿ7 ಶೃಂಗಸಭೆಯ ಔಟ್ ರೀಚ್ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ.

"ಈ ಭೇಟಿಯು ಜಿ7 ಶೃಂಗಸಭೆಯಲ್ಲಿ ಉಪಸ್ಥಿತರಿರುವ ಇತರ ವಿಶ್ವ ನಾಯಕರೊಂದಿಗೆ ಭಾರತಕ್ಕೆ ಮತ್ತು ಜಗತ್ತಿನ ದಕ್ಷಿಣ ದೇಶಗಳೊಂದಿಗೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರಿಗೆ ಅವಕಾಶ ನೀಡಲಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದರು.

"ಜಿ7 ಶೃಂಗಸಭೆಯಲ್ಲಿ ಭಾರತದ ನಿಯಮಿತ ಭಾಗವಹಿಸುವಿಕೆಯು ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಜಾಗತಿಕ ಸವಾಲುಗಳನ್ನು ಪರಿಹರಿಸುವ ಪ್ರಯತ್ನದಲ್ಲಿ ಭಾರತದ ನಿರಂತರ ಪ್ರಯತ್ನಗಳಿಗೆ ಹೆಚ್ಚುತ್ತಿರುವ ಮಾನ್ಯತೆ ಮತ್ತು ಕೊಡುಗೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ" ಎಂದು ಕ್ವಾತ್ರಾ ತಿಳಿಸಿದರು.

ಜಿ7 ಶೃಂಗಸಭೆಯಲ್ಲಿ ಭಾರತ ಭಾಗವಹಿಸುತ್ತಿರುವುದು ಇದು 11ನೇ ಬಾರಿ ಮತ್ತು ಪ್ರಧಾನಿ ಮೋದಿ ಸತತ ಐದನೇ ಬಾರಿಗೆ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇತರ ಆಹ್ವಾನಿತ ದೇಶಗಳ ನಾಯಕರೊಂದಿಗೆ ಪಿಎಂ ಮೋದಿ ಭಾಗವಹಿಸಲಿರುವ ಔಟ್ ರೀಚ್ ಸೆಷನ್​ಗಳಲ್ಲಿ ಮುಖ್ಯವಾಗಿ ಕೃತಕ ಬುದ್ಧಿಮತ್ತೆ, ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ವಿಷಯಗಳ ಮೇಲೆ ಚರ್ಚೆಗಳು ನಡೆಯುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶ್ವದ ಹಲವಾರು ನಾಯಕರೊಂದಿಗೆ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.

ಈ ವಾರದ ಕೊನೆಯಲ್ಲಿ ಸ್ವಿಟ್ಜರ್ಲೆಂಡ್​ನಲ್ಲಿ ನಡೆಯಲಿರುವ ಉಕ್ರೇನ್ 'ಶಾಂತಿ ಶೃಂಗಸಭೆ'ಯಲ್ಲಿ ಭಾರತವೂ ಭಾಗವಹಿಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.

"ಭಾರತವು ಸೂಕ್ತ ಸಮಯದಲ್ಲಿ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಲಿದೆ. ಈ ಶಾಂತಿ ಶೃಂಗ ಸಭೆಯಲ್ಲಿ ಭಾರತದಿಂದ ಯಾರನ್ನು ಪ್ರತಿನಿಧಿಯಾಗಿ ಕಳುಹಿಸಬೇಕೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ನಂತರ ಮಾಹಿತಿಗಳನ್ನು ಬಹಿರಂಗಪಡಿಸಲಾಗುವುದು" ಎಂದು ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ ತಿಳಿಸಿದರು.

ಇದನ್ನೂ ಓದಿ: ರಾಮ ನಗರಿ ಅಯೋಧ್ಯೆಯಲ್ಲಿ ಎನ್​ಎಸ್​ಜಿ ಕೇಂದ್ರ ಆರಂಭಕ್ಕೆ ಸಿದ್ಧತೆ - Ayodhya

ABOUT THE AUTHOR

...view details