ಕರ್ನಾಟಕ

karnataka

ETV Bharat / bharat

ಜಾರ್ಖಂಡ್​ ವಿಧಾನಸಭೆ ಚುನಾವಣೆ: ಇಂದು ಪ್ರಧಾನಿ ಮೋದಿ ಮತಪ್ರಚಾರ - MODI ELECTION RALLIES

ಪ್ರಧಾನಿ ಮೋದಿ ಅವರು ಬಿಹಾರದ ಗಯಾ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 11 ಗಂಟೆಗೆ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಜಾರ್ಖಂಡ್‌ನ ಗರ್ಹ್ವಾಗೆ ತೆರಳುವರು. ಇಲ್ಲಿ ಮತಪ್ರಚಾರದ ನಂತರ ಮಧ್ಯಾಹ್ನ 2.30ಕ್ಕೆ ಚೈಬಾಸಾಗೆ ಆಗಮಿಸಲಿದ್ದಾರೆ.

modi-is-scheduled-to-address-two-rallies-in-poll-bound-jharkhand
ಪ್ರಧಾನಿ ನರೇಂದ್ರ ಮೋದಿ (ANI)

By ANI

Published : Nov 4, 2024, 11:20 AM IST

ನವದೆಹಲಿ: ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಜಾರ್ಖಂಡ್​ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮತ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಚೈಬಾಸಾ ಮತ್ತು ಗರ್ಹ್ವಾ ಕ್ಷೇತ್ರದಲ್ಲಿ ಇಂದು ಬೃಹತ್ ಪ್ರಚಾರ ಸಭೆ ಉದ್ದೇಶಿಸಿ ಅವರು ಮತಯಾಚಿಸುವರು.

ಪ್ರಧಾನಿ ಆಗಮನಕ್ಕೆ ಮುನ್ನಾದಿನ(ಭಾನುವಾರ) ರಾಜ್ಯದಲ್ಲಿ ಪ್ರಚಾರ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬಿಜೆಪಿ ಪ್ರಣಾಳಿಕೆಯಾದ ಸಂಕಲ್ಪ ಪತ್ರವನ್ನು ರಾಂಚಿಯಲ್ಲಿ ಬಿಡುಗಡೆ ಮಾಡಿದ್ದರು.

ಪ್ರಣಾಳಿಕೆಯಲ್ಲಿ ಏಕರೂಪ ನೀತಿ ಸಂಹಿತೆ(ಯುಸಿಸಿ) ಜಾರಿಗೆ ತರುವುದು, ಬಾಂಗ್ಲಾದೇಶದ ಅಕ್ರಮ ಒಳನುಸುಳುಕೋರರನ್ನು ಹೊರಹಾಕುವ ಭರವಸೆಯನ್ನು ಅವರು ನೀಡಿದ್ದಾರೆ. ಇದರ ಜೊತೆಗೆ ನುಸುಳುಕೋರರು ಆಕ್ರಮಿಸಿಕೊಂಡಿರುವ ಎಲ್ಲ ಭೂಮಿಯನ್ನು ಬುಡಕಟ್ಟು ಸಮುದಾಯದವರಿಗೆ ಮರಳಿ ನೀಡುವುದು ಮತ್ತು 21 ಲಕ್ಷ ಕುಟುಂಬಗಳಿಗೆ ಕಾಂಕ್ರಿಟ್ ಮನೆ, ನೀರಿನ ಸಂಪರ್ಕ ನೀಡುವುದಾಗಿಯೂ ಹೇಳಿದ್ದಾರೆ.

ಇದಲ್ಲದೇ, 2,87,000 ಸರ್ಕಾರಿ ಉದ್ಯೋಗ ಸೃಷ್ಟಿ, 5,00,000 ಸ್ವಯಂ ಉದ್ಯೋಗಾವಕಾಶ, ಲಕ್ಷ್ಮಿ ಜೋಹರ್​ ಯೋಜನೆಯಡಿ 500 ರೂ.ಗೆ ಗ್ಯಾಸ್ ಸಿಲಿಂಡರ್​​, ವರ್ಷಕ್ಕೆ ಎರಡು ಉಚಿತ ಗ್ಯಾಸ್​ ಸಿಲಿಂಡರ್​ ನೀಡುವುದಾಗಿ ಘೋಷಿಸಿದ್ದಾರೆ.

ಉದ್ಯೋಗ ಆರಂಭಿಸಲು ಸವಾಲು ಎದುರಿಸುತ್ತಿರುವ ಎಲ್ಲಾ ಪದವೀಧರರಿಗೆ ಮಾಸಿಕ 2000 ರೂ ಸ್ಟೈಫೆಂಡ್​ ಅನ್ನು ಎರಡು ವರ್ಷಗಳ ಕಾಲ ನೀಡಲಾಗುವುದು. ಬಾಲಕಿಯರಿಗೆ ಕಿಂಡರ್​ಗಾರ್ಟೆನ್‌​ನಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ.

ಕೃಷಿ ಸಮುದಾಯದವರಿಗೆ ಆಸರೆ ನೀಡುವ ನಿಟ್ಟಿನಲ್ಲಿ ಪ್ರತಿ ಕ್ವಿಂಟಲ್​ ಭತ್ತವನ್ನು 3,100 ರೂ.ಗೆ ಖರೀದಿಸಲಾಗುವುದು. ಈ ದಾಸ್ತಾನು ಖರೀದಿ ಪ್ರಕ್ರಿಯೆ ನಡೆದ 24 ಗಂಟೆಯೊಳಗೆ ರೈತರ ಬ್ಯಾಂಕ್​ ಖಾತೆಗೆ ಹಣ ಹಾಕಲಾಗುವುದು. 2030ರ ಹೊತ್ತಿಗೆ ರಾಜ್ಯದಲ್ಲಿ ನೀರಾವರಿ ಪ್ರದೇಶವನ್ನು ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.

ಚುನಾವಣೆ ಯಾವಾಗ?: ನವೆಂಬರ್​ 13 ಮತ್ತು 20ರಂದು ಎರಡು ಹಂತದಲ್ಲಿ ಜಾರ್ಖಂಡ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವೆಂಬರ್​ 23ರಂದು ಮತಎಣಿಕೆ ನಡೆದು ಫಲಿತಾಂಶ ಹೊರಬರಲಿದೆ. ಇದೇ ಮೊದಲ ಬಾರಿಗೆ 11.84 ಯುವಜನರು ಮತ ಚಲಾಯಿಸಲಿದ್ದಾರೆ.

ಇದನ್ನೂ ಓದಿ:6 ವರ್ಷಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ ವಿಧಾನಸಭೆ ಅಧಿವೇಶನ

ABOUT THE AUTHOR

...view details