ರಾಯ್‌ಬರೇಲಿ (ಉತ್ತರ ಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಂಪೂರ್ಣ ಸಂಪತ್ತನ್ನು ನಾಲ್ಕೈದು ಶ್ರೀಮಂತರಿಗೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ದೂರಿದ್ದಾರೆ. ತಮ್ಮ ಸಹೋದರ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರ ಪರ ಭಾನುವಾರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಿಂದ ನರೇಂದ್ರ ಮೋದಿ ವಾರಣಾಸಿಯ ಸಂಸದರಾಗಿದ್ದಾರೆ. ಆದರೆ ಅವರು ಯಾವುದೇ ಗ್ರಾಮಕ್ಕೆ ಭೇಟಿ ನೀಡಿಲ್ಲ ಮತ್ತು ಹೇಗೆ ಬದುಕುತ್ತಿದ್ದಾರೆ ಎಂದು ರೈತರನ್ನು ವಿಚಾರಿಸಿಲ್ಲ. ಖಾಸಗೀಕರಣವು ಕೆಟ್ಟದ್ದಲ್ಲ, ಆದರೆ ಪ್ರಧಾನಿಯವರು ದೇಶದ ಸಂಪೂರ್ಣ ಸಂಪತ್ತನ್ನು ನಾಲ್ಕೈದು ಶ್ರೀಮಂತರಿಗೆ ನೀಡಿದರೆ ಅದು ಸರಿಯಲ್ಲ. ಇಂದು ದೇಶದ ಕಲ್ಲಿದ್ದಲು, ವಿದ್ಯುತ್, ಬಂದರು ಮತ್ತು ವಿಮಾನ ನಿಲ್ದಾಣಗಳೆಲ್ಲವೂ ಪ್ರಧಾನಿಯವರ ಸ್ನೇಹಿತರ ಬಳಿಯೇ ಇವೆ ಎಂದು ಟೀಕಿಸಿದರು.