ಕರ್ನಾಟಕ

karnataka

ETV Bharat / bharat

ಪಾಪ ಮಾಡಿದವರು ಮಾತ್ರ ಮಹಾ ಕುಂಭ ಮೇಳಕ್ಕೆ ಹೋಗ್ತಾರೆ: ಸಂಸದ ಚಂದ್ರಶೇಖರ್​ ಆಜಾದ್​ ರಾವಣ - CHANDRASHEKHAR AZAD

ಜನವರಿ 13ರಿಂದ ಫೆಬ್ರುವರಿ 26ರವರೆಗೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಮಹಾ ಕುಂಭ ಮೇಳ ನಡೆಯಲಿದ್ದು, ಲಕ್ಷಾಂತರ ಯಾತ್ರಿಕರು ಆಗಮಿಸಲಿದ್ದಾರೆ. ಈ ಕುರಿತು ಸಂಸದ ಚಂದ್ರಶೇಖರ್​ ಅಜಾದ್ ಅಲಿಯಾಸ್ ರಾವಣ​ ವಿವಾದಿತ ಹೇಳಿಕೆ ನೀಡಿದ್ದಾರೆ.

only-those-whove-sinned-will-attend-maha-kumbh-mp-chandrashekhar-azad
ಸಂಸದ ಚಂದ್ರಶೇಖರ್​ ಅಜಾದ್​ ಅಲಿಯಾಸ್ ರಾವಣ (ANI)

By PTI

Published : 9 hours ago

Updated : 9 hours ago

ಶಹರಾನ್ಪುರ್(ಉತ್ತರ ಪ್ರದೇಶ): ಪಾಪ ಮಾಡಿದವರು ಮಾತ್ರ ಮಹಾ ಕುಂಭ ಮೇಳದಲ್ಲಿ ಭಾಗಿಯಾಗುತ್ತಾರೆ ಎಂದು ಆಜಾದ್​ ಸಮಾಜ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ನಾಗಿನ ಕ್ಷೇತ್ರದ ಸಂಸದ ಚಂದ್ರಶೇಖರ್​ ಆಜಾದ್​ ರಾವಣ ಟೀಕಿಸಿದ್ದಾರೆ.

ಗುರುವಾರ ಶಹರಾನ್ಪುರ್​ ಎಂಪಿ-ಎಂಎಲ್​ಎ ನ್ಯಾಯಾಲಯಕ್ಕೆ ಹಾಜರಾದ ಆಜಾದ್​, ಕೇವಲ ಪಾಪ ಮಾಡಿದವರು ಮಾತ್ರ ಮಹಾ ಕುಂಭ ಮೇಳಕ್ಕೆ ಬರುತ್ತಾರೆ. ಪಾಪ ಮಾಡಿದವರು ಮಾತ್ರ ಅಲ್ಲಿಗೆ ಹೋಗಬೇಕು. ಆದರೆ, ಯಾರೇ ಆದ್ರೂ ತಾವು ಪಾಪ ಮಾಡಿರುವುದಾಗಿ ಹೇಳುತ್ತಾರೆಯೇ? ಎಂದರು.

ತಮ್ಮ ಮೇಲಿನ ದಾಳಿ ಪ್ರಕರಣದ ವಿಚಾರಣೆಗಾಗಿ ಅಜಾದ್​ ಅವರು ಕೋರ್ಟ್​​ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಮಾತನಾಡಿ, ಆಜಾದ್​ ಸಮಾಜ್​ ಪಕ್ಷ ಸಮಾಜದ ಬಡ ಮತ್ತು ದುರ್ಬಲ ವರ್ಗದವರ ಹಕ್ಕು ಮತ್ತು ಗೌರವಗಳಿಗಾಗಿ ಹೋರಾಡುತ್ತಿದೆ. ಇವರು ಧರ್ಮ ಮತ್ತು ಸಮುದಾಯದ ಹೆಸರಿನಲ್ಲಿ ಹಲವು ವರ್ಷಗಳಿಂದ ತಾರತಮ್ಯಕ್ಕೆ ಒಳಗಾಗಿದ್ದಾರೆ. ಇಂದೂ ಕೂಡ ಮಾಧ್ಯಮ, ಪೊಲೀಸ್​, ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ಆಗಾಗ್ಗೆ ದುರ್ಬಲರ ವಿರುದ್ಧ ನಿಲ್ಲುವುದನ್ನು ಕಾಣಬಹುದು ಎಂದರು.

ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ವಾಗ್ದಾಳಿ ನಡೆಸಿ, ಉತ್ತರ ಭಾರತದಲ್ಲಿನ ಪರಿಸ್ಥಿತಿ ಕೆಟ್ಟದಾಗಿದ್ದು, ಇಲ್ಲಿ ಜಂಗಲ್​ ರಾಜ್​ ಇದೆ. ಮುಖ್ಯಮಂತ್ರಿಗಳು ನಿರಂಕುಶ ವರ್ತನೆಯನ್ನು ಅಳವಡಿಸಿಕೊಂಡಿದ್ದಾರೆ. ಅವರಿಗೆ ಬೇಕಾದ್ದನ್ನು ಅವರು ಮಾಡುತ್ತಾರೆ. ಇದರಿಂದ ಕೆಲವರು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಚಿಂತಿಸುವುದಲ್ಲ. ನನ್ನನ್ನು ಕೊಲೆ ಮಾಡುವ ಯತ್ನವೂ ನಡೆಯಿತು ಎಂದು ದೂರಿದರು.

ರಾಜಕೀಯ ಮೈತ್ರಿ ಕುರಿತು ಪ್ರಶ್ನೆಗೆ ಉತ್ತರಿಸಿ, ಒಳ್ಳೆಯ ಜನರು ಒಗ್ಗೂಡಿ ಮೈತ್ರಿ ಮಾಡಿದರೆ ಬಡವರ ಪರಿಸ್ಥಿತಿಯನ್ನು ಬಲಪಡಿಸಬಹುದು. ಬಿಜೆಪಿಯನ್ನು ಸೋಲಿಸಬಹುದು ಎಂದರು.

ಮುಂಬರುವ ಮಿಲ್ಕಿಪುರ ವಿಧಾನಸಭಾ ಉಪ ಚುನಾವಣಾ ಕ್ಷೇತ್ರಕ್ಕೆ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಇದೇ ವೇಳೆ ಆಜಾದ್​ ತಿಳಿಸಿದರು.

ಇದನ್ನೂ ಓದಿ: ಕುಂಭಮೇಳದಲ್ಲಿ 'ಮಿಯಾವಾಕಿ' ತಂತ್ರ: ಲಕ್ಷಾಂತರ ಭಕ್ತರಿಗೆ ಶುದ್ಧ ಗಾಳಿ, ಆರೋಗ್ಯಕರ ವಾತಾವರಣ ಒದಗಿಸುವ ಅರಣ್ಯ ನಿರ್ಮಾಣ

Last Updated : 9 hours ago

ABOUT THE AUTHOR

...view details