ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ ವಾಣಿಜ್ಯ ಸಿಲಿಂಡರ್ ಮತ್ತು 5 ಕೆ.ಜಿ ಎಫ್‌ಟಿಎಲ್ (Free Trade LPG) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿವೆ ಎಂದು ಮೂಲಗಳು ತಿಳಿಸಿವೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗೆ 30.50 ರೂಪಾಯಿ ಇಳಿಕೆಯಾಗಿದ್ದು, 5 ಕೆ.ಜಿ ಎಫ್‌ಟಿಎಲ್ ಸಿಲಿಂಡರ್ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಪರಿಷ್ಕೃತ ದರಗಳು ಇಂದಿನಿಂದ (ಏಪ್ರಿಲ್ 1ರಿಂದ) ಅನ್ವಯವಾಗಲಿದೆ. ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 1764.50 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಗೃಹಬಳಕೆಯ (14 ಕೆಜಿ) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 30.50 ರೂಪಾಯಿ, ಮುಂಬೈನಲ್ಲಿ 31.50 ರೂಪಾಯಿ, ಚೆನ್ನೈನಲ್ಲಿ 30.50 ರೂಪಾಯಿ ಮತ್ತು ಕೋಲ್ಕತ್ತಾದಲ್ಲಿ 32 ರೂಪಾಯಿ ಕಡಿಮೆ ಆಗಿದೆ. ಬೆಲೆ ಇಳಿಕೆ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1764.50 ರೂಪಾಯಿಗಳಿಗೆ ಲಭ್ಯವಾಗಲಿದೆ. ಇನ್ನು ಮುಂಬೈನಲ್ಲಿ ಅದೇ ಸಿಲಿಂಡರ್ 1717.50 ರೂಪಾಯಿಗೆ, ಕೋಲ್ಕತ್ತಾದಲ್ಲಿ 1879 ರೂಪಾಯಿಗೆ, ಚೆನ್ನೈನಲ್ಲಿ 1930 ರೂಪಾಯಿಗೆ ಲಭ್ಯವಾದರೆ ಬೆಂಗಳೂರಿನಲ್ಲಿ 1830 ರೂಪಾಯಿ ಇಳಿಕೆ ಕಂಡಿದೆ.