ಜಮ್ಮು (ಜಮ್ಮು ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ 2ನೇ ಹಂತದ 26 ಸ್ಥಾನಗಳಿಗೆ ಇಂದು ಅಧಿಸೂಚನೆ ಹೊರಡಿಸಲಾಗುವುದು. ಈ ಹಂತದಲ್ಲಿ ಸೆ. 5 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮತ್ತು ಸೆ. 6ರಂದು ನಾಮಪತ್ರಗಳ ಪರಿಶೀಲನೆ ಮತ್ತು ಹಿಂಪಡೆಯುವಿಕೆ ನಡೆಯಲಿದೆ. ಸೆಪ್ಟೆಂಬರ್ 9 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಈ ಹಂತದ ಮತದಾನವು ಸೆಪ್ಟೆಂಬರ್ 25 ರಂದು ನಡೆಯಲಿದೆ.
ಗಂದರ್‌ಬಲ್ (ಕಂಗನ್ ಮತ್ತು ಗಂದರ್‌ಬಾಲ್) ಸೇರಿದಂತೆ ಶ್ರೀನಗರ (ಹಜರತ್‌ಬುಲ್, ಖನ್ಯಾರ್, ಹಬ್ಬಕ್ದಾಲ್, ಲಾಲ್ಚೌಕ್, ಛನ್ಪುರ, ಜಡಿವಾಲ್, ಈದ್ಗಾ, ಶಿಲ್ಟೆಂಗ್), ಬುದ್ಗಾಮ್ (ಖಾನ್ ಸಾಹಿಬ್, ಚರಾರ್-ಎ-ಷರೀಫ್, ಬುಡ್ಗಮ್, ವೀರೂರ್ ಚದುರಾ, ಪೂಂಚ್). ಸುರಾನ್‌ಕೋಟ್, ಪೂಂಚ್ ಹವೇಲಿ ಮತ್ತು ಮೆಂಧರ್, ರಿಯಾಸಿ (ಗುಲಾಬ್ಗಡ್, ಮಾತಾ ವಿಷ್ಣು ದೇವಿ ಮತ್ತು ರಿಯಾಸಿ), ರಾಜೌರಿ (ನೌಶೇರಾ, ರಾಜೌರಿ, ಬುಧಾಲ್, ಥಾನಮಂಡಿ ಮತ್ತು ಸುಂದರ್ಬನಿಯಲ್ಲಿ ಎರಡನೇ ಹಂತದ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಯ ಸಿದ್ಧತೆಗಳು ಭರದಿಂದ ಸಾಗಿವೆ.
ಇದರ ಮಧ್ಯೆ, ಮುಂಬರುವ ಮೊದಲ ಹಂತದ ಚುನಾವಣೆಗೆ ಜಮ್ಮು ಮತ್ತು ಕಾಶ್ಮೀರದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೂ 279 ನಾಮಪತ್ರಗಳು ಸಲ್ಲಿಕೆಯಾಗಿವೆ. 244 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. 36 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿಗಳ ಪ್ರಕಾರ, ತಿರಸ್ಕೃತಗೊಂಡ ಪತ್ರಗಳಲ್ಲಿ 14 ಸ್ವತಂತ್ರ ಅಭ್ಯರ್ಥಿಗಳು ಮತ್ತು 20 ಇತರ ಸ್ಪರ್ಧಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.