ಹೈದರಾಬಾದ್: ಹವಾಮಾನ ಬದಲಾವಣೆಯಿಂದಾಗಿ 2002ರಿಂದ 2021ರವರೆಗೆ 450 ಕ್ಯೂಬಿಕ್ ಕಿ.ಮೀ ಅಂತರ್ಜಲ ನಷ್ಟವಾಗಿದೆ. ಅಲ್ಲದೇ ಇದು ಸವಕಳಿಗೂ ಕಾರಣವಾಗಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಗಮನಿಸಿ, ಸ್ಯಾಟಲೈಟ್ ದತ್ತಾಂಶ ಮತ್ತು ಮಾದರಿಗಳ ಮೂಲಕ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ವೇಳೆ 1951ರಿಂದ 2021ರವರೆಗೆ ಮಳೆಗಾಲ (ಜೂನ್- ಸೆಪ್ಟೆಂಬರ್)ನಲ್ಲಿ ಉತ್ತರ ಭಾರತದಲ್ಲಿ ಮಳೆ ಶೇ 8.5ರಷ್ಟು ಕ್ಷೀಣಿಸಿರುವುದು ಕಂಡುಬಂದಿದೆ. ಅಲ್ಲದೇ, ಈ ಪ್ರದೇಶಗಳಲ್ಲಿ ಚಳಿಗಾಲದ ಅವಧಿ ಕೂಡ 0.3 ಡಿಗ್ರಿ ಸೆಲ್ಸಿಯಸ್ ಬೆಚ್ಚಗಿರುವುದು ದಾಖಲಾಗಿದೆ ಎಂದಿದ್ದಾರೆ.
ಹೈದರಾಬಾದ್ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸುಟಿಟ್ಯೂಟ್ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಮಳೆಗಾಲದಲ್ಲಿನ ಕಡಿಮೆ ಮಳೆ ಮತ್ತು ಚಳಿಗಾಲದ ಬೆಚ್ಚಗಿನ ವಾತವಾರಣವೂ ನೀರಾವರಿ ನೀರಿಗೆ ಬೇಡಿಕೆ ಹೆಚ್ಚಿಸುತ್ತದೆ. ಹಾಗೆಯೇ ಇದು ಅಂತರ್ಜಲ ತುಂಬಿಸುವ ಕಾರ್ಯವನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಉತ್ತರ ಭಾರತದಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದನ್ನು ಸಂಶೋಧಕರ ತಂಡ ಒತ್ತಿ ಹೇಳಿದೆ.
ಒಣ ಮಳೆಗಾಲದಿಂದ ಮಳೆಗಾಲದ ಅವಧಿಯಲ್ಲಿ ಮಳೆ ಕೊರತೆಯಿಂದ ಬೆಳೆಗಳ ಸುಸ್ಥಿರತೆ ಕಾಪಾಡಲು ಅಂತರ್ಜಲದ ಮೇಲೆ ಅವಲಂಬಿಸುವಂತೆ ಆಗುತ್ತದೆ. ಜೊತೆಗೆ, ಬೆಚ್ಚಗಿನ ಚಳಿಗಾಲವೂ ಮಣ್ಣನ್ನು ಒಣಗಿಸುವ ಮೂಲಕ ನೀರಾವರಿ ಬೇಡಿಕೆ ಹೆಚ್ಚಿಸುತ್ತದೆ. ಈ ನಡುವೆ 2022 ಸಾಮಾನ್ಯವಾಗಿ ಅತಿ ಬೆಚ್ಚಗಿನ ಚಳಿಗಾಲವಾಗಿದೆ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ. 1901ರಿಂದ ದಾಖಲಾದ ಅತಿ ಹೆಚ್ಚು ಬೆಚ್ಚಿನ ಐದನೇ ಚಳಿಗಾಲ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.