ಕರ್ನಾಟಕ

karnataka

ETV Bharat / bharat

ಅಪಘಾತಕ್ಕೀಡಾದ ಮಹಾಕುಂಭಕ್ಕೆ ಆಗಮಿಸುತ್ತಿದ್ದ ನೇಪಾಳಿ ಯಾತ್ರಿಕರಿದ್ದ ಬಸ್​ ; 40 ಮಂದಿಗೆ ಗಾಯ - NEPALESE PILGRIMS WERE INJURED

ಮಹಾಕುಂಭದ ಪವಿತ್ರ ಸ್ನಾನದಲ್ಲಿ ಭಾಗಿಯಾಗಲು ನೇಪಾಳಿ ಪ್ರವಾಸಿಗರು ಆಗಮಿಸುವಾಗ ಬಸ್​ ಅಪಘಾತಕ್ಕೀಡಾಗಿದೆ.

Nepalese pilgrims were injured when a bus heading towards Prayagraj
ಅಪಘಾತಕ್ಕೀಡಾದ ಮಹಾಕುಂಭಕ್ಕೆ ಆಗಮಿಸುತ್ತಿದ್ದ ನೇಪಾಳಿ ಯಾತ್ರಿಕರಿದ್ದ ಬಸ್ (ಐಎಎನ್​ಎಸ್​ - ಸಾಂದರ್ಭಿಕ ಚಿತ್ರ)

By ETV Bharat Karnataka Team

Published : Feb 10, 2025, 10:05 AM IST

ಕಠ್ಮಂಡು, ನೇಪಾಳ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಬೇಕು ಎಂದು ನೇಪಾಳದಿಂದ ಆಗಮಿಸುತ್ತಿದ್ದ ಯಾತ್ರಿಗಳಿದ್ದ ಬಸ್​ ಅಪಘಾತಕ್ಕೆ ಒಳಗಾಗಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಕಠ್ಮಂಡು ಸುರ್ಖೇತ್ ಜಿಲ್ಲೆಯ ಭೇರಿಗಂಗಾ ಪುರಸಭೆಯ ಬಾಬೈ ಪ್ರದೇಶದಲ್ಲಿ ಸಂಜೆ 5.30 ಕ್ಕೆ ಅಪಘಾತ ಸಂಭವಿಸಿದೆ. ಈ ಘಟನೆ ಮಾಹಿತಿ ನೀಡಿರುವ ಪೊಲೀಸರು, ಮಹಾ ಕುಂಭ ಮೇಳದಲ್ಲಿ ಭಾಗಿಯಾಗಲು 40 ಮಂದಿ ಯಾತ್ರಿಕರು ಕರ್ನಾಲಿ ಪ್ರಾಂತ್ಯದ ಸುರ್ಖೇತ್‌ನಿಂದ ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ನೇಪಾಳ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರು ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯವನ್ನು ಕೈಗೊಂಡರು ಮತ್ತು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕೊಹಲ್‌ಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ 6 ಜನರ ಪರಿಸ್ಥಿತಿ ಗಂಭೀರವಾಗಿದ್ದು, ಅಪಘಾತಕ್ಕೆ ಕಾರಣ ಏನು ಎಂಬ ಕುರಿತು ತನಿಖೆ ಸಾಗುತ್ತಿದೆ ಎಂದಿದ್ದಾರೆ. (ಪಿಟಿಐ)

ಇದನ್ನೂ ಓದಿ: ಮಹಾಕುಂಭ ವೈಭವ: ಪ್ರಯಾಗರಾಜ್​​​ಗೆ ಭಕ್ತರ ಪ್ರವಾಹ, ಟ್ರಾಪಿಕ್​ ಜಾಮ್​ - ರೈಲು ನಿಲ್ದಾಣವೇ ಬಂದ್

ಇದನ್ನೂ ಓದಿ:ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭೂತಾನ್​ ದೊರೆ

ABOUT THE AUTHOR

...view details