ಕರ್ನಾಟಕ

karnataka

ETV Bharat / bharat

ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್: ಜುಲೈ 31 ರಿಂದ ಆಗಸ್ಟ್​​ 4ರ ವರೆಗೆ ನೋಂದಣಿಗೆ ಅವಕಾಶ - NEET UG Counselling - NEET UG COUNSELLING

ರಾಷ್ಟ್ರೀಯ ವೈದ್ಯಕೀಯ ಆಯೋಗವು ನೀಟ್​ ಕೌನ್ಸೆಲಿಂಗ್​ ದಿನಾಂಕವನ್ನು ಪ್ರಕಟಿಸಿದೆ. ಜೊತೆಗೆ 16 ಸಂಸ್ಥೆಗಳನ್ನು ಗುರುತಿಸಿದ್ದು, ಪ್ರಮಾಣಪತ್ರಗಳನ್ನು ಅಲ್ಲಿಂದಲೇ ಪಡೆಯಲು ಸೂಚಿಸಿದೆ.

ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್
ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ (ETV Bharat)

By ETV Bharat Karnataka Team

Published : Jul 31, 2024, 4:13 PM IST

ನವದೆಹಲಿ:ಅಖಿಲ ಭಾರತ ಕೋಟಾದ ಶೇಕಡಾ 15 ರಷ್ಟು ಸೀಟುಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ (NEET-UG) 2024ರ ಕೌನ್ಸೆಲಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗಲಿದೆ. ಜುಲೈ 31 ರಿಂದ ಆಗಸ್ಟ್​ 4 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಕೌನ್ಸೆಲಿಂಗ್​ ವೇಳಾಪಟ್ಟಿಯನ್ನು ಶೀಘ್ರವೇ mcc.nic ನಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತಿಳಿಸಿದೆ.

ಈ ಬಗ್ಗೆ ಜುಲೈ 30 ರಂದು ಎಂಸಿಸಿ ಅಧಿಸೂಚನೆ ಹೊರಡಿಸಿದ್ದು, ದಿವ್ಯಾಂಗ (ದೈಹಿಕ ಅಂಗವಿಕಲರು) ಮತ್ತು ಸಿಡಬ್ಲ್ಯೂ (ಮಕ್ಕಳು ಮತ್ತು ಸಶಸ್ತ್ರ ಪಡೆಯ ವಿಧವೆಯರು) ವರ್ಗದ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಪೋರ್ಟಲ್​ನಲ್ಲಿ ಅವಕಾಶ ನೀಡಲಾಗಿದೆ.

ಸಿಡಬ್ಲ್ಯೂ ವಿಭಾಗದ ನೀಟ್​ ಕೌನ್ಸೆಲಿಂಗ್‌ಗಾಗಿ ದೆಹಲಿ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ವಿಭಾಗದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಮಾಡಬೇಕಾಗಿದೆ. ಇದು ಜುಲೈ 31 ರಿಂದ ಆಗಸ್ಟ್ 4ರ ವರೆಗೆ ಇರುತ್ತದೆ ಎಂದು ಕೆರಿಯರ್​​ ಕೌನ್ಸೆಲಿಂಗ್​ ಪ್ರೈವೇಟ್​ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಪಾರಿಜಾತ್ ಮಿಶ್ರಾ ತಿಳಿಸಿದ್ದಾರೆ.

ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅಂತೆಯೇ, ಪಿಡಬ್ಲ್ಯೂಡಿ (ದಿವ್ಯಾಂಗ) ಅಭ್ಯರ್ಥಿಗಳು ಆಯ್ಕೆಯಾದ 16 ಅಧಿಸೂಚಿತ ವೈದ್ಯಕೀಯ ಸಂಸ್ಥೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಪ್ರಮಾಣಪತ್ರವನ್ನು ಪಡೆಯಬೇಕು. ರಾಷ್ಟ್ರೀಯ ವೈದ್ಯಕೀಯ ಆಯೋಗ ಸೂಚಿಸಿದ 16 ವೈದ್ಯಕೀಯ ಸಂಸ್ಥೆಗಳು ನೀಡಿದ ಪ್ರಮಾಣಪತ್ರಗಳು ಮಾತ್ರ ಕೌನ್ಸೆಲಿಂಗ್​​ಗೆ ಮಾನ್ಯವಾಗಿರುತ್ತವೆ. ಹೀಗಾಗಿ, ಅಭ್ಯರ್ಥಿಗಳು ಹತ್ತಿರದ 16 ಅಧಿಸೂಚಿತ ಸಂಸ್ಥೆಗಳಲ್ಲಿ ತಮ್ಮ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು.

ಎಂಸಿಸಿ ಸೂಚಿಸಿದ ಸಂಸ್ಥೆಗಳು ಇವು

  • ವರ್ಧಮಾನ್ ವೈದ್ಯಕೀಯ ಕಾಲೇಜು ಮತ್ತು ಸಫ್ದರ್​​ಜಂಗ್ ಆಸ್ಪತ್ರೆ ನವದೆಹಲಿ.
  • ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಫಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಶನ್ ಮುಂಬೈ.
  • ಇನ್​ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಕೋಲ್ಕತ್ತಾ.
  • ಮದ್ರಾಸ್ ವೈದ್ಯಕೀಯ ಕಾಲೇಜು, ಚೆನ್ನೈ.
  • ಅನುದಾನ ಸರ್ಕಾರಿ ವೈದ್ಯಕೀಯ ಕಾಲೇಜು, ಮುಂಬೈ.
  • ಗೋವಾ ವೈದ್ಯಕೀಯ ಕಾಲೇಜು, ಗೋವಾ.
  • ಸರ್ಕಾರಿ ವೈದ್ಯಕೀಯ ಕಾಲೇಜು, ತಿರುವನಂತಪುರಂ.
  • ಸವಾಯಿ ಮಾನ್ ಸಿಂಗ್ ವೈದ್ಯಕೀಯ ಕಾಲೇಜು, ಜೈಪುರ.
  • ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಚಂಡೀಗಢ.
  • ಸರ್ಕಾರಿ ವೈದ್ಯಕೀಯ ಕಾಲೇಜು, ಅಗರ್ತಲಾ.
  • ಇನ್​​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಾರಣಾಸಿ.
  • ಅಲಿ ಯಾರ್ ಜಮ್ಮು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸಾಬಿಲಿಟೀಸ್ ಮುಂಬೈ.
  • ಏಮ್ಸ್ ನಾಗಪುರ.
  • ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆರ್​​ಎಂಎಲ್​ ಆಸ್ಪತ್ರೆ, ನವದೆಹಲಿ.
  • ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ಮತ್ತು ಅಸೋಸಿಯೇಟ್ಸ್ ಆಸ್ಪತ್ರೆ ನವದೆಹಲಿ.
  • ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರು.

ಎನ್​ಟಿಎ ಬಿಡುಗಡೆ ಮಾಡಿದ ಪರಿಷ್ಕೃತ ಕಟ್ ಆಫ್‌ ಅಂಕ ಹೀಗಿದೆ

  • ಸಾಮಾನ್ಯ ವರ್ಗ: 720 - 162
  • ಒಬಿಸಿ: 161-127
  • ಎಸ್​ಸಿ: 161-127
  • ಎಸ್​​ಟಿ: 161-127

ನೀಟ್-ಯುಜಿ ಪರೀಕ್ಷೆ ಸಾಕಷ್ಟು ವಿವಾದಕ್ಕೆ ಸಿಲುಕಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅಕ್ರಮಗಳು ನಡೆದಿದೆ ಎಂದು ಆರೋಪಿಸಿದ ಅರ್ಜಿಗಳು ಸುಪ್ರೀಂ ಕೋರ್ಟ್​ಗೆ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಲೇವಾರಿ ಮಾಡಿದ ನಂತರ ಅಂತಿಮ ಪರಿಷ್ಕೃತ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜುಲೈ 20 ರಂದು ಪ್ರಕಟಿಸಿತ್ತು.

ಇದನ್ನೂ ಓದಿ:ನೀಟ್​ ಪರಿಷ್ಕೃತ ಫಲಿತಾಂಶ: ಟಾಪರ್​ ಆಗಿದ್ದ ರಾಜ್ಯದ ಮೂವರ ಸ್ಥಾನದಲ್ಲಿ ಭಾರಿ ಕುಸಿತ, ಪದ್ಮನಾಭ್​ ಮೆನನ್​ಗೆ 21ನೇ ರ್‍ಯಾಂಕ್​ - NEET UG revised results

ABOUT THE AUTHOR

...view details