ನವದೆಹಲಿ:ಗಂದರ್‌ಬಾಲ್ ಜಿಲ್ಲೆಯ ಶ್ರೀನಾಗಾ - ಲೇಹ್ ರಾಷ್ಟ್ರೀಯ ಹೆದ್ದಾರಿಯ ಸುರಂಗ ನಿರ್ಮಾಣ ಸ್ಥಳ ಗಗಾಂಗೀರ್ನಲ್ಲಿ ಭಾನುವಾರ ಸಂಜೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯ ತನಿಖೆಗಾಗಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಶ್ಮೀರಕ್ಕೆ ಆಗಮಿಸಿದೆ. ಭಯೋತ್ಪಾದಕರು ನಡೆಸಿದ ಈ ಗುಂಡಿನ ದಾಳಿಯಲ್ಲಿ ವೈದ್ಯರು ಸೇರಿದಂತೆ 7 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು.
ಕೇಂದ್ರಾಡಳಿತ ಪ್ರದೇಶದಲ್ಲಿರುವ ಏಜೆನ್ಸಿಯ ಪ್ರಾದೇಶಿಕ ಶಾಖೆಯಿಂದ ಪೊಲೀಸ್ ಸೂಪರಿಟೆಂಡೆಂಟ್ ದರ್ಜೆಯ ಅಧಿಕಾರಿ ಎನ್ಐಎ ತಂಡದ ನೇತೃತ್ವವಹಿಸಿದ್ದು, ಅವರು ಇಂದು ಮಧ್ಯಾಹ್ನದೊಳಗೆ ಘಟನಾ ಸ್ಥಳಕ್ಕೆ ಆಗಮಿಸಲಿದ್ದಾರೆ.
ದಾಳಿ ಸ್ಥಳದ ದೃಶ್ಯ (ಈಟಿವಿ ಭಾರತ್) ಗಂದೇರ್ಬಾಲ್ ಜಿಲ್ಲೆಯ ಶ್ರೀನಗರ ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಸ್ಥಳದಿಂದ ಕಾರ್ಮಿಕರು ಮತ್ತು ಇತರ ಸಿಬ್ಬಂದಿಗಳು ಕಾರ್ಯ ಮುಗಿಸಿ ಸಂಜೆ ಗಂದರ್‌ಬಾಲ್‌ನ ಗುಂಡ್‌ನಲ್ಲಿರುವ ತಮ್ಮ ಶಿಬಿರಕ್ಕೆ ಹಿಂತಿರುಗುವಾಗ ಅಪರಿಚಿತ ಭಯೋತ್ಪಾದಕರ ತಂಡ ಈ ದಾಳಿ ನಡೆಸಿದೆ.
ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ:ಇದು ಭಯೋತ್ಪಾದಕರ ದಾಳಿಯು ತೀವ್ರ ಕಳವಳವನ್ನುಂಟು ಮಾಡಿದೆ. ಸ್ಥಳೀಯರು ಮತ್ತು ಸ್ಥಳೀಯರಲ್ಲದ ಕಾರ್ಮಿಕರ ಗುಂಪಿನ ಮೇಲೆ ಇಬ್ಬರು ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮೂವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಕನಿಷ್ಠ ಇಬ್ಬರು ಎಂದು ನಂಬಲಾದ ಭಯೋತ್ಪಾದಕರು ಸ್ಥಳೀಯ ಮತ್ತು ಸ್ಥಳೀಯರಲ್ಲದ ಜನರನ್ನು ಒಳಗೊಂಡ ಕಾರ್ಮಿಕರ ಗುಂಪಿನ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇಬ್ಬರು ಕಾರ್ಮಿಕರು ತಕ್ಷಣವೇ ಸಾವನ್ನಪ್ಪಿದರೆ, ಮೂವರು ಮತ್ತು ವೈದ್ಯರು ನಂತರ ಗಾಯಗೊಂಡರು. ಐವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಐವರು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮಿತ್ ಶಾ ಟ್ವೀಟ್:ಘಟನೆ ಬೆನ್ನಲ್ಲೇ ಖಂಡನೆ ವ್ಯಕ್ತಪಡಿಸಿ, ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದೊಂದು ಹೇಡಿ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೇಯ ಕೃತ್ಯದಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ. ನಮ್ಮ ಭದ್ರತಾ ಪಡೆ ಇದರ ವಿರುದ್ಧ ಕಠಿಣ ಕ್ರಮ ನಡೆಸಲಿದೆ. ಇದು ದುಃಖದ ಸಮಯವಾಗಿದ್ದು, ಮೃತರ ಕುಟುಂಬಕ್ಕೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ, ಹಾಗೇ ಗಾಯಗೊಂಡವರ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಘಟನೆ ಖಂಡಿಸಿದ್ದು, ಭೀಕರ ಮತ್ತು ಹೇಡಿ ಕೃತ್ಯವಾಗಿದೆ ಎಂದಿದ್ದಾರೆ. ಸೋನ್ಮಾರ್ಗ್ ಪ್ರದೇಶದಲ್ಲಿನ ಗಗಾಂಗೀರ್ನಲ್ಲಿ ಸ್ಥಳೀಯೇತರ ಕಾರ್ಮಿಕರ ಮೇಲೆ ನಡೆಸಿರುವ ಈ ಕೃತ್ಯ ಹೇಡಿತನದಿಂದ ಕೂಡಿದೆ. ಇಲ್ಲಿನ ಪ್ರದೇಶದಲ್ಲಿ ಪ್ರಮುಖ ಮೂಲ ಸೌಕರ್ಯಕ್ಕಾಗಿ ಜನರು ಕಾರ್ಯ ನಿರ್ವಹಿಸುತ್ತಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 2-3 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಬಲವಾಗಿ ಖಂಡಿಸಿದ್ದು, ಸಾವನ್ನಪ್ಪಿದವರಿಗೆ ನನ್ನ ಸಂತಾಪಗಳು ಎಂದು ಎಕ್ಸ್ ತಾಣದಲ್ಲಿ ಭಾನುವಾರ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಡಾಕ್ಟರ್ ಸೇರಿ 7 ಮಂದಿ ಸಾವು; ಹತ್ತಕ್ಕೂ ಹೆಚ್ಚು ಜನರಿಗೆ ಗಾಯ