ಕರ್ನಾಟಕ

karnataka

ETV Bharat / bharat

ನ್ಯಾಷನಲ್​ ಕಾನ್ಫ್​​ರೆನ್ಸ್​ ಎನ್​ಡಿಎ ಸೇರುವ ವದಂತಿ: ಪಕ್ಷದ ಸ್ಪಷ್ಟನೆ ಹೀಗಿದೆ - NATIONAL CONFERENCE

ಜಮ್ಮು- ಕಾಶ್ಮೀರದ ಎನ್​ಸಿ ಪಕ್ಷವು ಎನ್​ಡಿಎ ಸೇರಲಿದೆ ಎಂಬ ವದಂತಿ ಹಬ್ಬಿದೆ. ಆದರೆ, ಇದನ್ನು ಪಕ್ಷವು ನಿರಾಕರಿಸಿದೆ.

ಎನ್​ಸಿ ಧ್ವಜದೊಂದಿಗೆ ಜಮ್ಮು- ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ
ಎನ್​ಸಿ ಧ್ವಜದೊಂದಿಗೆ ಜಮ್ಮು- ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ (ETV Bharat)

By PTI

Published : Dec 22, 2024, 10:56 PM IST

ಶ್ರೀನಗರ :ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬಗ್ಗೆ ಆಕ್ಷೇಪ ಎತ್ತುತ್ತಿರುವ ಕಾಂಗ್ರೆಸ್​ ವಿರುದ್ಧ ಟೀಕಿಸಿದ್ದ ಅದರ ಮಿತ್ರಪಕ್ಷ ಜಮ್ಮು- ಕಾಶ್ಮೀರದ ನ್ಯಾಷನಲ್​ ಕಾನ್ಫ್​​ರೆನ್ಸ್​​ (ಎನ್​ಸಿ) ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಮತ್ತೆ ಸೇರಲಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಇದು ಸುಳ್ಳು ಎಂದು ಪಕ್ಷವು ಅಧಿಕೃತವಾಗಿ ಹೇಳಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವನ್ನು ಸೇರುವ ಸುದ್ದಿಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಭಾನುವಾರ ತಳ್ಳಿಹಾಕಿದೆ. ಈ ಸಂಬಂಧ ಮಾಧ್ಯಮ ವರದಿಗಳು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

ಮಾಧ್ಯಮಗಳಿಂದ ಸುಳ್ಳು ಸುದ್ದಿ;ಜಮ್ಮು ಮತ್ತು ಕಾಶ್ಮೀರದ ಜನರನ್ನು ದಾರಿತಪ್ಪಿಸುವ ದುರುದ್ದೇಶದಿಂದ ಕೆಲವು ಮಾಧ್ಯಮಗಳು ಸುಳ್ಳು ಮಾಹಿತಿ ಬಿತ್ತರಿಸುತ್ತಿವೆ. ಇಂಡಿಯಾ ಕೂಟದಲ್ಲಿರುವ ಎನ್​ಸಿ ಪಕ್ಷವು ಎನ್​ಡಿಎ ಸೇರುವ ಪ್ರಮೇಯವೇ ಇಲ್ಲ ಎಂದು ಪಕ್ಷದ ಮುಖ್ಯ ವಕ್ತಾರ ತನ್ವೀರ್ ಸಾದಿಕ್ ಸ್ಪಷ್ಟಪಡಿಸಿದ್ದಾರೆ.

ಕೆಲ ಮಾಧ್ಯಮಗಳು ಆಧಾರರಹಿತವಾಗಿ ಮಾಹಿತಿಯನ್ನು ಹರಡುತ್ತಿವೆ. ವದಂತಿ ಹಬ್ಬಿಸುತ್ತಿರುವುದು ಬೇಜವಾಬ್ದಾರಿಯಿಂದ ಕೂಡಿದೆ. ಒಂದು ವೇಳೆ ತಾವು ಪ್ರಕಟಿಸುತ್ತಿರುವುದು ನಿಜವಾಗಿದ್ದಲ್ಲಿ, ಈ ಬಗ್ಗೆ ಆಧಾರಗಳನ್ನು ನೀಡಬೇಕು. ಇಲ್ಲವಾದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷದ ವಿರುದ್ಧ ಬಿತ್ತರಿಸುತ್ತಿರುವ ಸುದ್ದಿಗಳಿಗೆ ಸೂಕ್ತ ಆಧಾರಗಳನ್ನು ನೀಡಬೇಕು. ಪಕ್ಷಕ್ಕೆ ಧಕ್ಕೆ ತರುವ ಇಂತಹ ಪ್ರಕಟಣೆಗಳನ್ನು ಸಹಿಸುವುದಿಲ್ಲ. ಜನರ ಮುಂದೆ ಪುರಾವೆ ಕೊಡಬೇಕು. ಇಲ್ಲವಾದಲ್ಲಿ ತಾವು ಹೇಳಿದ್ದು, ಸುಳ್ಳು ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಮಿತ್​ ಶಾ ಭೇಟಿ ಬಳಿಕ ಊಹಾಪೋಹ:ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಸಭೆಯೊಂದರಲ್ಲಿ ಭೇಟಿ ಮಾಡಿದ್ದರು. ಇದು ಎನ್​​ಸಿ ಪಕ್ಷವು ಎನ್​ಡಿಎ ಸೇರುವ ಸೂಚನೆ ಎಂಬ ವದಂತಿ ಹಬ್ಬಲು ಕಾರಣವಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿನ ಭಯೋತ್ಪಾದನೆ ಕುರಿತಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಸಭೆ ನಡೆಸಿತ್ತು. ಇದರಲ್ಲಿ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ:ದೆಹಲಿಯಲ್ಲಿ 175 ಬಾಂಗ್ಲಾದ ಅಕ್ರಮ ವಲಸಿಗರು ಪತ್ತೆ: ರಾಷ್ಟ್ರ ರಾಜಧಾನಿಯಲ್ಲಿ 1500 ಮಂದಿ ನೆಲೆಸಿರುವ ಶಂಕೆ

ABOUT THE AUTHOR

...view details