ಕಾಜಿರಂಗ (ಅಸ್ಸೋಂ) :ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾರ್ಚ್ 8 ) ರಾತ್ರಿಯನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕೊಹೊರಾದಲ್ಲಿರುವ ಪೊಲೀಸ್ ಅತಿಥಿ ಗೃಹದಲ್ಲಿ ಕಳೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಇದರಿಂದಾಗಿ ಮೋದಿ ಅವರು ಕಾಜಿರಂಗಕ್ಕೆ ಬಂದಿಳಿದ ಮೂರನೇ ಪ್ರಧಾನಿಯಾಗಲಿದ್ದಾರೆ. ಜವಾಹರಲಾಲ್ ನೆಹರೂ ನಂತರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ದೇಶದ ಎರಡನೇ ಪ್ರಧಾನಿಯಾಗಲಿದ್ದಾರೆ. 2018-19ರಲ್ಲಿ ಕಾಜಿರಂಗದ ಕೊಹೊರಾದಲ್ಲಿ ಹಲವು ಟೀಕಾ ಪ್ರಹಾರಗಳ ನಡುವೆ ಆಗ ಅಲ್ಲಿ ಅತಿಥಿ ಗೃಹವನ್ನು ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕರಾಗಿರುವ ಗೋಲಘಟ್ಟದ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಮನಬೇಂದ್ರ ಡೆಬ್ರಾಯ್ ಅವರು ಆ ಸಮಯದಲ್ಲಿ ಅನೇಕ ಸವಾಲುಗಳ ನಡುವೆ ಈ ಅತಿಥಿ ಗೃಹವನ್ನು ನಿರ್ಮಾಣ ಮಾಡಿದ್ದರು.
ಆ ಸಮಯದಲ್ಲಿ ಎಸ್ಪಿ ಡೆಬ್ರಾಯ್ ನೇತೃತ್ವದಲ್ಲಿ ಗೋಲಾಘಾಟ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೋಕಾಖಾಟ್ನ ಉಪವಿಭಾಗದ ಪೊಲೀಸ್ ಅಧಿಕಾರಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದರು. ಸುಮಾರು ಒಂದೂವರೆ ವರ್ಷಗಳ ಕಾಲ ಎಸ್ಪಿ ಮನ್ವೇಂದ್ರ ಡೆಬ್ರಾಯ್ ಅವರ ದೈನಂದಿನ ತಪಾಸಣೆಯ ನಂತರ ಇಲ್ಲಿನ ಪೊಲೀಸ್ ಅತಿಥಿ ಗೃಹವನ್ನು ನಿರ್ಮಿಸಲಾಗಿದೆ.
ಅಸ್ಸೋಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರ ಆಡಳಿತದ ಅವಧಿಯಲ್ಲಿ ಅವರು ಕಾಜಿರಂಗಕ್ಕೆ ಬಂದಾಗಲೆಲ್ಲಾ ಈ ಅತಿಥಿ ಗೃಹಕ್ಕೆ ಆಗಮಿಸಿ, ಆಗಾಗ ಇಲ್ಲಿ ತಂಗುತ್ತಿದ್ದರು. ನೈಸರ್ಗಿಕ ಪರಿಸರದಲ್ಲಿ ನಿರ್ಮಿಸಲಾದ ಈ ಅತಿಥಿ ಗೃಹವು ಈಗಾಗಲೇ ವಿಭಿನ್ನ ಮಜಲುಗಳನ್ನು ಹೊಂದಿದೆ. ಇದು ಒಂದು ಕಡೆ ಹತ್ತಿಕುಳಿ ಚಹಾ ತೋಟವಾಗಿದ್ದರೆ ಮತ್ತೆ ಕರ್ಬಿ ಬೆಟ್ಟಗಳ ರಮಣೀಯ ಸೌಂದರ್ಯವು ಸೈಟ್ನ ಪ್ರಶಾಂತತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.