- ಡಬ್ಬಾವಾಲಾಗಳಿಗೆ ಸಿಕ್ತು ಮಹಾನ್ ಗೌರವ: ಕೇರಳ ಶಾಲೆಯ ಪಠ್ಯಕ್ರಮವಾಯ್ತು ಡಬ್ಬಾವಾಲಾಗಳ ಶ್ರಮಜೀವನ
ಮುಂಬೈ:ಕೋಟ್ಯಂತರ ಮುಂಬೈಗರ ಹಸಿವನ್ನು ಸಮಯಕ್ಕೆ ತಣಿಸುವ ಖ್ಯಾತಿ ಮುಂಬೈನ ಡಬ್ಬಾವಾಲಾಗಳಿಗೆ ಸಿಗುತ್ತಿದೆ. ಈಗಾಗಲೇ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಇವರ ನಿಖರ ಸೇವೆ, ಸಮಯ ಪಾಲನೆ ಹಾಗೂ ಪ್ರಾಮಾಣಿಕತೆ ಎಲ್ಲರನ್ನೂ ಅಚ್ಚರಿಗೊಳಿಸಿರುವುದಂತೂ ಸತ್ಯ. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಕೇರಳ ಸರ್ಕಾರ, ಮುಂಬೈ ಡಬ್ಬಾವಾಲಾಗಳ ಖ್ಯಾತಿಯನ್ನು ಶೀಘ್ರದಲ್ಲೇ ಕೇರಳದ ಮನೆಗಳನ್ನು ತಲುಪಿಸಲು ನಿರ್ಧರಿಸಿದೆ.
ಕೇರಳದ ಶಾಲಾ ಪಠ್ಯಕ್ರಮದಲ್ಲಿ ಮುಂಬೈನಲ್ಲಿರುವ ಡಬ್ಬಾವಾಲಾಗಳ ಮಾಹಿತಿ ಸೇರ್ಪಡೆ ಮಾಡಲು ಅಲ್ಲಿನ ಶಿಕ್ಷಣ ಇಲಾಖೆ ನಿರ್ಧರಿಸಿದೆ. 9ನೇ ತರಗತಿಯ ಇಂಗ್ಲಿಷ್ ಪಠ್ಯಕ್ರಮದಲ್ಲಿ ಡಬ್ಬಾವಾಲಾಗಳ ಶ್ರಮಜೀವನದ ಬಗ್ಗೆ ಸೇರಿಸಲಾಗಿದೆ. "ದಿ ಸಾಗಾ ಆಫ್ ದಿ ಟಿಫಿನ್ ಕ್ಯಾರಿಯರ್" ಎಂಬ ಶೀರ್ಷಿಕೆಯ ಅಡಿ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
ಏಳು ಸಮುದ್ರ ದಾಟಿ ಪಸರಿಸಿದ ಕೀರ್ತಿ: 130 ವರ್ಷಗಳಷ್ಟು ಹಳೆಯದಾದ ಡಬ್ಬಾವಾಲಾಗಳ ವ್ಯಾಪಾರವು 1890 ರ ದಶಕದಲ್ಲಿ ಪ್ರಾರಂಭವಾಯಿತು. ಅಂದಿನಿಂದ, ಮುಂಬೈನ ಈ ಡಬ್ಬಾವಾಲಾಗಳು ಮುಂಬೈನಲ್ಲಿರುವ ಕಚೇರಿ ಕೆಲಸಗಾರರಿಗೆ ಸಮಯಕ್ಕೆ ಸರಿಯಾಗಿ ಆಹಾರದ ಡಬ್ಬಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂಬೈನಲ್ಲಿ ಐದು ಸಾವಿರಕ್ಕೂ ಹೆಚ್ಚು ಬಿನ್ ಕ್ಯಾರಿಯರ್ಗಳಿದ್ದು, ಅವು ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಬಿನ್ಗಳನ್ನು ತಲುಪಿಸುತ್ತವೆ. ಡಬ್ಬಿಗಳ ನಿರ್ವಹಣೆ ಮತ್ತು ವಿತರಣಾ ವ್ಯವಸ್ಥೆಯು ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಮೆಚ್ಚುಗೆ ಗಳಿಸಿದೆ.
ವೇಷ ಭೂಷಣವೇ ಇವರ ಟ್ರೇಡ್ ಮಾರ್ಕ್:ಬಿಳಿ ಕುರ್ತಾ-ಪೈಜಾಮಾ ಡಬ್ಬಾವಾಲಾಗಳ ವಿಶೇಷ ಸಮವಸ್ತ್ರವಾಗಿದೆ. ತಲೆಯ ಮೇಲೊಂದು ಗಾಂಧಿ ಟೋಪಿ, ಕಾಲಲ್ಲಿ ಕೊಲ್ಹಾಪುರಿ ಚಪ್ಪಲ್ಗಳು ಇವರ ಡ್ರೇಟ್ ಮಾರ್ಕ್ ಆಗಿವೆ. ಒಂದೇ ಒಂದು ಊಟದ ಡಬ್ಬಿಯೂ ಅದಲು ಬದಲಿಲ್ಲದಂತೆ ತಲುಪಬೇಕಾದವರಿಗೆ ಸಮಯಕ್ಕೆ ಸರಿಯಾಗಿ, ನಿಗದಿತ ವ್ಯಕ್ತಿಗೆ ಮುಟ್ಟುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಡಬ್ಬಾವಾಲಾಗಳ ಈ ಕರಾರುವಕ್ಕ ಕೆಲಸ ನಿಕ್ಕಸ ನಿಬ್ಬೆರಗಾಗುವಂತೆ ಮಾಡಿದೆ.
ಡಬ್ಬಾವಾಲಾಗಳ ಜೀವನೋಪಾಯ ನಿರ್ವಹಣೆ ಹೇಗೆ?: ಕೇರಳ ಸ್ಟೇಟ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎಸ್ಸಿಇಆರ್ಟಿ) 2024 ರ ಹೊಸ ಪಠ್ಯಕ್ರಮದ ಭಾಗವಾಗಿ ಡಬ್ಬಾವಾಲಾಗಳ ಸ್ಫೂರ್ತಿಯುತ ಮಾಹಿತಿಯನ್ನು ಅಳವಡಿಸಿಕೊಂಡಿದೆ. ಡಬ್ಬೇವಾಲಾಗಳ ಸಂಪೂರ್ಣ ಇತಿಹಾಸ, ಅವರ ಉಡುಗೆ, ಸೇವೆ, ನಿರ್ವಹಣೆ ಮತ್ತು ವಿತರಣಾ ವ್ಯವಸ್ಥೆಯ ಬಗ್ಗೆ ಪಠ್ಯದಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಡಬ್ಬಾವಾಲಾಗಳ ಸಂಪೂರ್ಣ ನಿರ್ವಹಣೆ ಮತ್ತು ಅವರ ಜೀವನದ ಪರಿಸ್ಥಿತಿಗಳನ್ನು ಈ ಅಧ್ಯಾಯದಲ್ಲಿ ಹೈಲೈಟ್ಸ್ ಮಾಡಲಾಗಿದೆ.