ತಿರುವನಂತಪುರಂ:ಕೇರಳದ ಬಹು ನಿರೀಕ್ಷಿತ ತಿರುವೋಣಂ ಬಂಪರ್ ಲಾಟರಿ ಡ್ರಾ ಬುಧವಾರ ಮಧ್ಯಾಹ್ನ ನಡೆದಿದೆ. ಒಟ್ಟಾರೆ 500 ಮೌಲ್ಯದ ಟಿಕೆಟ್ಗಳಲ್ಲಿ ಅತ್ಯಧಿಕ ಮೊತ್ತದ ಬಹುಮಾನ 25 ಕೋಟಿ ರೂ. ಆಗಿದೆ. ಇನ್ನು ಎರಡನೇ ಬಹುಮಾನದ ರೂಪವಾಗಿ ತಲಾ 20 ಮಂದಿಗೆ 2 ಕೋಟಿ ಬಹುಮಾನ ನೀಡಲಾಗುತ್ತಿದೆ. ಮೂರನೇ ಬಹುಮಾನ ತಲಾ 20 ಮಂದಿಗೆ 50 ಲಕ್ಷ ನಗದು ಬಹುಮಾನವನ್ನು ಹೊಂದಿದೆ.
ಬುಧವಾರ ಮಧ್ಯಾಹ್ನ ನಡೆದ ಲಕ್ಕಿ ಡ್ರಾ:ರಾಜ್ಯದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಬುಧವಾರ ಮಧ್ಯಾಹ್ನ 2 ಗಂಟೆಗೆ ಈ ಡ್ರಾ ನಡೆಸಿ, ಪ್ರಥಮ ಬಹುಮಾನ ವಿಜೇತರನ್ನು ಘೋಷಣೆ ಮಾಡಿದರು. ಎರಡನೇ ಬಹುಮಾನ ವಿಜೇತರನ್ನು ಶಾಸಕ ವಿಕೆ ಪ್ರಶಾಂತ್ ಆಯ್ಕೆ ಮಾಡಿದರು. ಒಟ್ಟಾರೆ ಬಹುಮಾನದ ಮೊತ್ತ 125.54 ಕೋಟಿಯಾಗಿದೆ. ತಿರುವೋಣಂ ಬಂಪರ್ ಲಾಟರಿಯಲ್ಲಿ ಒಟ್ಟು 8 ಮಿಲಿಯನ್ ಟಿಕೆಟ್ ಗಳನ್ನು ಮುದ್ರಣ ಮಾಡಲಾಗಿತ್ತು. ಮಂಗಳವಾರ ಸಂಜೆವರೆಗೆ 7,135,938 ಟಿಕೆಟ್‌ಗಳು ಮಾರಾಟವಾಗಿದ್ದವು.
ಪಾಲಕ್ಕಾಡ್ನಲ್ಲಿ ಅತಿ ಹೆಚ್ಚು ಟಿಕೆಟ್ಗಳ ಮಾರಾಟ:ರಾಜ್ಯದಲ್ಲಿ ಅತಿ ಹೆಚ್ಚು ಟಿಕೆಟ್ ಪಾಲಕ್ಕಾಡ್ ಜಿಲ್ಲೆಯಲ್ಲಿ ಮಾರಾಟವಾಗಿತ್ತು. ಇಲ್ಲಿ 13,02,680 ಟಿಕೆಟ್ ಮಾರಾಟ ಮಾಡಲಾಗಿತ್ತು. ತಿರುವನಂತಪುರಂನಲ್ಲಿ 9,46,260 ಟಿಕೆಟ್ ಮತ್ತು ತ್ರಿಸ್ಸೂರ್ನಲ್ಲಿ 8,61,000 ಟಿಕೆಟ್ ಮಾರಾಟವಾಗಿದ್ದವು. ಟಿಕೆಟ್ ಡ್ರಾ ಆಗುವ ಕೆಲವು ನಿಮಿಷಗಳ ವರೆಗೂ ಈ ಟಿಕೆಟ್ಗಳ ಮಾರಾಟ ನಡೆದಿತ್ತು.