ಕರ್ನಾಟಕ

karnataka

ETV Bharat / bharat

ಟೊಮೆಟೊ ಬಾಕ್ಸ್​ನಲ್ಲಿ ಈರುಳ್ಳಿ ಕಳ್ಳಸಾಗಣೆ: 82.93 ಮೆಟ್ರಿಕ್ ಟನ್ ಉಳ್ಳಾಗಡ್ಡಿ ವಶಪಡಿಸಿಕೊಂಡ ಕಸ್ಟಮ್ಸ್​

Illegal Onion Export: ಭಾರತೀಯ ಈರುಳ್ಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಭಾರತ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದೆ. ಇದರಿಂದಾಗಿ ಭಾರತದಿಂದ ಈರುಳ್ಳಿ ಕಳ್ಳಸಾಗಣೆ ಯತ್ನ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಈ ಮೂಲಕ ನಾಗ್ಪುರ ಕಸ್ಟಮ್ಸ್ ಇಲಾಖೆ ಟೊಮೆಟೊ ಬಾಕ್ಸ್​ಗಳಿಂದ ಈರುಳ್ಳಿ ಕಳ್ಳಸಾಗಣೆ ತಡೆಯುವಲ್ಲಿ ಯಶಸ್ವಿಯಾಗಿದೆ.

Onion export  tomato boxes  customs department seiz  ಟೊಮೆಟೊ ಬಾಕ್ಸ್​ ಈರುಳ್ಳಿ ಕಳ್ಳಸಾಗಣೆ
ಟೊಮೆಟೊ ಬಾಕ್ಸ್​ನಲ್ಲಿ ಈರುಳ್ಳಿ ಕಳ್ಳಸಾಗಣೆ

By ETV Bharat Karnataka Team

Published : Feb 17, 2024, 12:53 PM IST

ನಾಗ್ಪುರ, ಮಹಾರಾಷ್ಟ್ರ:ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಅನ್ನು ನಿಷೇಧಿಸಿದೆ. ಈರುಳ್ಳಿ ರಫ್ತು ನಿಷೇಧ ಮಾರ್ಚ್ 31ರವರೆಗೆ ಮುಂದುವರಿಯಲಿದೆ. ಈರುಳ್ಳಿ ರಫ್ತಿನ ಮೇಲೆ ಭಾರತ ಸರ್ಕಾರದ ನಿರ್ಬಂಧದಿಂದಾಗಿ ಹಲವು ದೇಶಗಳಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇದರಿಂದಾಗಿ ಭಾರತದಿಂದ ಈರುಳ್ಳಿ ಕಳ್ಳಸಾಗಣೆ ಯತ್ನ ಭರದಿಂದ ಆರಂಭವಾಗಿದೆ.

ಈರುಳ್ಳಿ ಕಳ್ಳಸಾಗಣೆ

ಇನ್ನು ನಾಗ್ಪುರ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಟೊಮೆಟೊ ಬಾಕ್ಸ್‌ಗಳಿಂದ ಈರುಳ್ಳಿ ಕಳ್ಳಸಾಗಣೆ ತಡೆಯುವಲ್ಲಿ ಮಹತ್ತರವಾದ ಯಶಸ್ಸನ್ನು ಸಾಧಿಸಿದ್ದಾರೆ. ರಹಸ್ಯ ಮಾಹಿತಿಯ ಆಧಾರದ ಮೇಲೆ ಕಸ್ಟಮ್ಸ್ ಇಲಾಖೆ ಈ ಕ್ರಮ ಕೈಗೊಂಡಿದ್ದು, 82.93 ಮೆಟ್ರಿಕ್ ಟನ್ ಈರುಳ್ಳಿಯನ್ನು ಅಕ್ರಮವಾಗಿ ರಫ್ತು ಮಾಡುವ ಯತ್ನ ನಡೆದಿದೆ ಎಂದು ವರದಿಯಾಗಿದೆ.

82.93 ಮೆಟ್ರಿಕ್ ಟನ್ ಈರುಳ್ಳಿ ವಶ:ನಾಗ್ಪುರ ಕಸ್ಟಮ್ಸ್ ಕಮಿಷನರೇಟ್ ನೀಡಿದ ಮಾಹಿತಿಯ ಪ್ರಕಾರ, ನಾಸಿಕ್ ಮೂಲದ ಇಬ್ಬರು ರಫ್ತುದಾರರು ನಾಗ್ಪುರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಈರುಳ್ಳಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಇಲಾಖೆಗೆ ಗೌಪ್ಯ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಪಡೆದ ಕಸ್ಟಮ್ಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡಿದೆ. ನಾಗ್ಪುರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಎರಡು ಕಂಟೈನರ್ ಪೂರ್ಣ ಟೊಮೆಟೊ ರಫ್ತು ಮಾಡಲಾಗುವುದು. ಆದರೆ, ಆ ಟೊಮೆಟೊ ಪೆಟ್ಟಿಗೆಯೊಳಗೆ ಕಡಿಮೆ ಟೊಮೆಟೊ ಮತ್ತು ಹೆಚ್ಚು ಈರುಳ್ಳಿ ಇರುವುದು ಪತ್ತೆಯಾಗಿದೆ.

ಇನ್ನು ಈ ಮಾಹಿತಿ ಆಧರಿಸಿ ಕಸ್ಟಮ್ಸ್ ಇಲಾಖೆ ತಂಡ ಕಂಟೈನರ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದರಲ್ಲಿ ನೂರಾರು ಬಾಕ್ಸ್ ಗಳಲ್ಲಿ ಈರುಳ್ಳಿ ಇಟ್ಟಿರುವುದು ಪತ್ತೆಯಾಗಿದೆ. ಮೇಲಿನ ಭಾಗದಲ್ಲಿ 5 ಅಡಿಗಳವರೆಗೆ ಟೊಮೆಟೊ ಬಾಕ್ಸ್‌ಗಳು ಕಂಡುಬಂದರೆ, ಅದರ ಕೆಳಗಿದ್ದ ಎಲ್ಲ ಬಾಕ್ಸ್‌ಗಳಲ್ಲಿ ಈರುಳ್ಳಿಯ ಚೀಲಗಳು ಪತ್ತೆಯಾಗಿವೆ. ಕಂಟೈನರ್​ನಲ್ಲಿದ್ದ ಈ ಎಲ್ಲ ಬಾಕ್ಸ್ ಗಳನ್ನು ವಶಪಡಿಸಿಕೊಂಡು ಈರುಳ್ಳಿ ತೂಕ ಮಾಡಲಾಗಿತ್ತು. ಆಗ ಚೀಲದಲ್ಲಿ 82.93 ಮೆಟ್ರಿಕ್ ಟನ್ ಈರುಳ್ಳಿ ಪತ್ತೆಯಾಗಿದೆ. ನಮ್ಮ ತಂಡವು ಮುಂಬೈನಲ್ಲಿ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿರುವ ರಫ್ತುದಾರರು ಮತ್ತು ದಲ್ಲಾಳಿಗಳ ಅನೇಕ ಸ್ಥಳಗಳನ್ನು ಶೋಧಿಸಿದೆ ಎಂದು ಅಧಿಕಾರಿ ತಿಳಿಸಿದರು.

ಭಾರತೀಯ ಈರುಳ್ಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ:ಭಾರತೀಯ ಈರುಳ್ಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದ್ದು, ಭಾರತೀಯ ಈರುಳ್ಳಿ ಹಲವು ದೇಶಗಳಿಗೆ ರಫ್ತಾಗುತ್ತದೆ. ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಮುಖ ಈರುಳ್ಳಿ ಆಮದುದಾರರು. ಆದರೆ, ಸರಕಾರ ದಿಢೀರ್ ರಫ್ತು ನಿಷೇಧದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವುದು ಕಂಡು ಬರುತ್ತಿದೆ. ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ 2024ರ ಮಾರ್ಚ್ 31ರವರೆಗೆ ನಿಷೇಧಿಸಿದೆ. ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ರಫ್ತು ನಿಷೇಧಿಸಲು ನಿರ್ಧರಿಸಿದೆ.

ಓದಿ:ಹೊರ ದೇಶಕ್ಕೆ ಈರುಳ್ಳಿ ರಫ್ತು ನಿಲ್ಲಿಸಿದ ಸರ್ಕಾರ.. ಕುಸಿದ ಈರುಳ್ಳಿ ಬೆಲೆ: ಕಂಗಾಲಾದ ಬೆಣ್ಣೆ ನಗರಿ ರೈತರು

ABOUT THE AUTHOR

...view details