ಭುಜ್ (ಗುಜರಾತ್): ಈ ತಿಂಗಳ ಆರಂಭದಲ್ಲಿ ಕಚ್ ಜಿಲ್ಲೆಯಲ್ಲಿ ನಡೆದ ನಕಲಿ ಜಾರಿ ನಿರ್ದೇಶನಾಲಯದ ದಾಳಿಯ ಮಾಸ್ಟರ್‌ಮೈಂಡ್ ಆರೋಪಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಾಗಿದ್ದನು ಎಂದು ಗುಜರಾತ್ ಪೊಲೀಸರು ಶನಿವಾರ ಆರೋಪಿಸಿದ್ದಾರೆ. ಅಲ್ಲದೇ, ಈ ರೀತಿಯಾಗಿ ಅಕ್ರಮವಾಗಿ ಗಳಿಸಿದ ಹಣದಿಂದ ಪಕ್ಷದ ಚಟುವಟಿಕೆಗಳಿಗೆ ಹಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಗುಜರಾತ್ನ ಎಎಪಿ ನಾಯಕ ಗೋಪಾಲ್ ಇಟಾಲಿಯಾ ಮಾತ್ರ ಇದನ್ನು ನಿರಾಕರಿಸಿದ್ದು, ಪೊಲೀಸರು ಬಿಜೆಪಿ ನಿಯಂತ್ರಣದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಏನಿದು ಘಟನೆ: ಡಿಸೆಂಬರ್ 4ರಂದು ಗುಜರಾತ್ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇತರಲ್ಲಿ ಅಬ್ದುಲ್ ಸತ್ತಾರ್ ಮಜೊತಿ ಎಂಬ ವ್ಯಕ್ತಿ ಸಿನಿಮೀಯ ರೀತಿಯಲ್ಲಿ ನಕಲಿ ಇಡಿ ಕಾರ್ಡ್ ಹೊಂದಿದ್ದು, ಡಿಸೆಂಬರ್ 2ರಂದು ಗಾಂಧಿಧಾಮದಲ್ಲಿ ದಾಳಿ ನಡೆಸಿ, 22.25 ಲಕ್ಷ ಮೌಲ್ಯದ ಆಭರಣವನ್ನು ಕಳವು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಚ್ (ಪೂರ್ವ) ಎಸ್ಪಿ ಸಾಗರ್ ಬಗ್ಮಾರ್ ಮಾತನಾಡಿ, ಮಜೊತಿಯನ್ನು ಪೊಲೀಸ್ ತನಿಖೆಗೆ ಒಳಪಡಿಸಿದಾಗ ಆತ ಕಳೆದ ಕಲೆವು ತಿಂಗಳ ಹಿಂದೆ ಗುಜರಾತ್ನ ಹಿರಿಯ ಎಎಪಿ ನಾಯಕ ಇಟಾಲಿಯಾ ಮತ್ತು ಭುಜ್ನಲ್ಲಿ ಮನೋಜ್ ಸೊರಥಿಯಾ ಅವರನ್ನು ಭೇಟಿಯಾಗಿದ್ದ. ಮಜೊತಿಯನ್ನು ಆರ್ಥಿಕ ತನಿಖೆಗೆ ಒಳಪಡಿಸಿದಾಗ, ಆತ ಕಳೆದ ಕೆಲವು ದಿನಗಳ ಹಿಂದೆ ರಾಧಿಕಾ ಜ್ಯುವೆಲರ್ಸ್‌ನಲ್ಲಿ ನಡೆಸಿದ ನಕಲಿ ಇಡಿ ದಾಳಿಯ ಮಾಸ್ಟರ್‌ಮೈಂಡ್ ಅಬ್ದುಲ್ ಸತ್ತಾರ್ ಮಜೋತಿ ಎಂಬುದು ಬಯಲಾಗಿದೆ. ಅಲ್ಲದೇ ಈತ ಅಕ್ರಮ ಹಣವನ್ನು ಪಕ್ಷದ ಚಟುವಟಿಕೆ ಬಳಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಮಜೊತಿ ಅಪರಾಧ ಇತಿಹಾಸವಿದ್ದು, ಜಾಮ್ನಗರ್ ಮತ್ತು ಭುಜ್ನಲ್ಲಿ ಕೊಲೆ ಯತ್ನ ನಡೆಸಿದ ಪ್ರಕರಣವು ಆತನ ಮೇಲಿದೆ.
ಆದರೆ, ಎಎಪಿ ನಾಯಕ ಇಟಾಲಿಯಾ ಮಾತ್ರ ಇದು ಆಧಾರಿತ ರಹಿತರ ಆರೋಪ. ಪೊಲೀಸರನ್ನು ಎಷ್ಟು ನಂಬಬೇಕು ಎಂಬುದು ನಿಮಗೆಲ್ಲ ಗೊತ್ತಿದೆ. ಪೊಲೀಸರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ತಮ್ಮ ಹೇಳಿಕೆಯನ್ನು ಸಾಬೀತುಪಡಿಸಲು ಸರಿಯಾದ ವಿವರ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಅಮಿತ್ ಶಾಗೆ ಕೇಜ್ರಿವಾಲ್ ಪತ್ರ