ಕಣ್ಣೂರು: ವರ್ಷವಾದರೂ ಸೂಕ್ತ ವಧು ಹುಡುಕಿ ಕೊಡುವಲ್ಲಿ ವಿಫಲವಾಗಿರುವ ಮ್ಯಾರೇಜ್ ಬ್ಯೂರೋ ಒಂದಕ್ಕೆ ಕಣ್ಣೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿದೆ.
ತಮ್ಮ ಸೇವಾ ಭರವಸೆಯನ್ನು ಈಡೇರಿಸಲು ವಿಫಲವಾದ ಸ್ಥಳೀಯ ಮ್ಯಾರೇಜ್ ಬ್ಯೂರೋ ವಿರುದ್ಧ ಯುವಕನೊಬ್ಬ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಣ್ಣೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದೂರುದಾರ ಯುವಕನಿಗೆ 7,000 ರೂ. ಪರಿಹಾರ ನೀಡುವಂತೆ ಮ್ಯಾರೇಜ್ ಬ್ಯೂರೋಗೆ ಆದೇಶಿಸಿದೆ.
ಯುವಕ ನೀಡಿರುವ ದೂರಿನ ಪ್ರಕಾರ, ಮ್ಯಾರೇಜ್ ಬ್ಯೂರೋಗೆ ಯುವಕ 4,900 ರೂ. ನೋಂದಣಿ ಶುಲ್ಕ ಪಾವತಿಸಿದ್ದು, ಶುಲ್ಕ ಪಾವತಿಸಿದ ಎರಡು ತಿಂಗಳೊಳಗೆ ಸೂಕ್ತ ವಧುವನ್ನು ಹುಡುಕಿ ಕೊಡುವುದಾಗಿ ಬ್ಯೂರೋ, ಯುವಕನಿಗೆ ಭರವಸೆ ನೀಡಿತ್ತು. ಆದರೆ ಯುವಕ ನಿರಂತರವಾಗಿ ಫಾಲೋ ಅಪ್ ಮಾಡಿದ ಹೊರತಾಗಿಯೂ ಬ್ಯೂರೋ ಹೇಳಿದಂತೆ ಸೂಕ್ತ ವಧುವನ್ನು ಹುಡುಕಿ ಕೊಟ್ಟಿಲ್ಲ.
5,000 ರೂ, ಪರಿಹಾರವಾಗಿ ಹಾಗೂ ಹೆಚ್ಚುವರಿ 2,000 ರೂ.ಗಳನ್ನು ನ್ಯಾಯಾಲಯದ ವೆಚ್ಚ ಭರಿಸಲು ಒಟ್ಟು 7,000 ರೂ ನೀಡುವಂತೆ ಬ್ಯೂರೋಗೆ ಗ್ರಾಹಕರ ವೇದಿಕೆ ಆದೇಶಿಸಿದೆ.
ಇದನ್ನೂ ಓದಿ:ಪೊಲೀಸರು ವಶಕ್ಕೆ ಪಡೆದ ಹಣ ಬಿಡುಗಡೆಗೆ ಕೋರಿ ಅರ್ಜಿ: ಆರೋಪಿ ತಂದೆಗೆ 10 ಸಾವಿರ ದಂಡ ವಿಧಿಸಿದ ಹೈಕೋರ್ಟ್