ಹೈದರಾಬಾದ್(ತೆಲಂಗಾಣ):ದೇಶದಪ್ರಮುಖ ಚಿಟ್ ಫಂಡ್ ಕಂಪನಿಯಾಗಿರುವ ಮಾರ್ಗದರ್ಶಿ ಚಿಟ್‌ಫಂಡ್ಸ್ ಪ್ರೈವೇಟ್ ಲಿಮಿಟೆಡ್ ಶುಕ್ರವಾರ ಎರಡು ಹೊಸ ಶಾಖೆಗಳನ್ನು ತೆಲಂಗಾಣ ರಾಜ್ಯದ ಜಗಿತ್ಯಾಲ ಮತ್ತು ಸೂರ್ಯಪೇಟ್ ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭಿಸಿದೆ.
ಜಗಿತ್ಯಾಲದಲ್ಲಿ 112ನೇ ಶಾಖೆ ಆರಂಭ: ಜಗಿತ್ಯಾಲ ಜಿಲ್ಲಾ ಕೇಂದ್ರದ ಬಸ್ ಡಿಪೋ ಎದುರು 112ನೇ ಶಾಖೆಯನ್ನು ಸಂಸ್ಥೆಯ ಎಂಡಿ ಸಿ.ಎಚ್.ಕಿರಣ್, ಸಂಸ್ಥೆಯ ಉಪಾಧ್ಯಕ್ಷರಾದ ಪಿ.ರಾಜಾಜಿ ಉದ್ಘಾಟಿಸಿದರು. ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಎಂಡಿ ಕಿರಣ್, ನೂತನ ಕಚೇರಿ ಸಿಬ್ಬಂದಿಯನ್ನು ಅಭಿನಂದಿಸಿದರು. ಜಗಿತ್ಯಾಲದ ಮಾರ್ಗದರ್ಶಿ ಶಾಖೆಯು ಗ್ರಾಹಕರ ಸೇವೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಸಾಧಿಸಲಿ ಎಂದು ಆಶಿಸಿದರು.
ಜಗಿತ್ಯಾಲ ಶಾಖೆಯು ತೆಲಂಗಾಣದ 36ನೇ ಶಾಖೆಯಾಗಿದೆ. ಆರು ದಶಕಗಳಲ್ಲಿ ಲಕ್ಷಾಂತರ ಜನರು ಮಾರ್ಗದರ್ಶಿಯನ್ನು ನಂಬಿದ್ದಾರೆ. ಯಾವುದೇ ಅಗತ್ಯಕ್ಕೂ ಮಾರ್ಗಸೂಚಿ ಇರುತ್ತದೆ ಎಂಬ ವಿಶ್ವಾಸ ಗ್ರಾಹಕರಲ್ಲಿದೆ. ಇದು ಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣ. ಆಧುನಿಕ ತಂತ್ರಜ್ಞಾನದೊಂದಿಗೆ ನಾವು ಗ್ರಾಹಕರನ್ನು ತಲುಪುತ್ತಿದ್ದೇವೆ. ಅವರ ಅಗತ್ಯಗಳಿಗೆ ಅನುಗುಣವಾಗಿ ಎಲ್ಲರಿಗೂ ಸೇವೆ ಲಭ್ಯವಿದೆ ಎಂದು ಹೇಳಿದರು.