ನವದೆಹಲಿ:ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 18 ತಿಂಗಳ ನಂತರ ಇಂದು ತಿಹಾರ್ ಜೈಲಿನಿಂದ ಹೊರಬಂದರು. ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
"ನಾನು ಜೈಲಿನಲ್ಲಿದ್ದಾಗ ದೆಹಲಿಯ ಜನರು ಮತ್ತು ದೇಶದ ಜನರು ಭಾವನಾತ್ಮಕವಾಗಿ ನನ್ನೊಂದಿಗಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಸರ್ವಾಧಿಕಾರಕ್ಕೆ ಹೊಡೆತ. ಇದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಜನರ ಪ್ರೀತಿ, ದೇವರ ಆಶೀರ್ವಾದ, ಸತ್ಯದ ಶಕ್ತಿ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸಂವಿಧಾನದ ಶಕ್ತಿಯಿಂದ ಹೊರಬಂದಿದ್ದೇನೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಬೆಂಬಲಿಗರನ್ನು ಉದ್ದೇಶಿಸಿ ಮನೀಶ್ ಸಿಸೋಡಿಯಾ ಭಾವನಾತ್ಮಕವಾಗಿ ಮಾತನಾಡಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಶಕ್ತಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಿಡುಗಡೆಗೂ ದಾರಿ ಮಾಡಿಕೊಡಲಿದೆ ಎಂದರು.