ಮಂದಸೌರ್ (ಮಧ್ಯಪ್ರದೇಶ): ತಾಯಿಯ ಕಷ್ಟಕಾಲದಲ್ಲಿ ಆಸರೆ ಆಗದ ಮಗನನ್ನು ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡದೇ, ಹೆಣ್ಣು ಮಕ್ಕಳೇ ಸೇರಿ ಅಂತಿಮ ವಿಧಿವಿಧಾನ ಪೂರೈಸಿರುವ ಘಟನೆ ಮಧ್ಯಪ್ರದೇಶದ ಸೀತಾಮೌನಲ್ಲಿ ನಡೆದಿದೆ. 90 ವರ್ಷತ ತಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಿದ ಮಕ್ಕಳು, ಮಗನನ್ನು ಆಕೆಯ ದೇಹವನ್ನೂ ಸ್ಪರ್ಶಿಸದಂತೆ ನೋಡಿಕೊಂಡಿದ್ದಾರೆ
ಅಂತ್ಯ ಕ್ರಿಯೆ ನಡೆಸಿದ ಹೆಣ್ಣು ಮಕ್ಕಳು: ಸೀತಾಮೌದ ಖಾತಿ ಮೊಹಲ್ಲಾದ ನಿವಾಸಿ ಸಾಲಿಯಾ ಬಾಯಿ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದ್ದರು. 90 ವರ್ಷದ ಸಾಲಿಯಾಗೆ ಒಬ್ಬ ಮಗ, ಏಳು ಹೆಣ್ಣು ಮಕ್ಕಳಿದ್ದರು. ಮಗ ಅನೇಕ ವರ್ಷಗಳಿಂದ ತಾಯಿಯಿಂದ ದೂರಾಗಿದ್ದು, ಆಕೆಯ ಕೊನೆಗಾಲದಲ್ಲಿ ಜೊತೆಗೆ ಇರಲಿಲ್ಲ. ಇದರಿಂದಾಗಿ ಮನನೊಂದಿದ್ದ ಹೆಣ್ಣು ಮಕ್ಕಳು ತಾವೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದರು.
ಸಾಲಿಯಾ ಬಾಯಿಯ 7 ಹೆಣ್ಣುಮಕ್ಕಳಲ್ಲಿ, ನಾಲ್ವರು ಸಿತಾಮೌ ನಗರದಲ್ಲಿಯೇ ಮದುವೆಯಾಗಿ ವಾಸವಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳನ್ನು ಶಾಮ್‌ಗಢದಲ್ಲಿ ಮತ್ತು ಓರ್ವ ಮಗಳನ್ನು ನೀಮುಚ್ ಜಿಲ್ಲೆಯಲ್ಲಿ ವಿವಾಹವಾಗಿದ್ದಾರೆ. ಹೆಣ್ಣು ಮಕ್ಕಳೇ ಜೊತೆಯಾಗಿ ತಮ್ಮ ವಯಸ್ಸಾದ ತಾಯಿಯನ್ನು ದೀರ್ಘಕಾಲ ನೋಡಿಕೊಳ್ಳುತ್ತಿದ್ದರು ಕೂಡಾ.
ದೇಹ ಸ್ಪರ್ಶಕ್ಕೂ ಮಗನಿಗೆ ನೀಡಲಿಲ್ಲ ಅವಕಾಶ: ತಾಯಿ ಪೋಷಣೆಯ ಜವಾಬ್ದಾರಿ ಹೊತ್ತ ಹೆಣ್ಣು ಮಕ್ಕಳು ಕಡೇಗಾಲದಲ್ಲಿ ಆಕೆಯ ಅಂತ್ಯಕ್ರಿಯೆಯನ್ನು ತಾವೇ ಮಾಡುವುದಾಗಿ ನಿರ್ಧರಿಸಿದ್ದರು. ಈ ಕುರಿತು ಖಾತಿ ಪಟೇಲ್ ಪಂಚಾಯತ್ನಿಂದ ಕೂಡ ಅನುಮತಿ ಪಡೆದರು. ಮೃತ ಮಹಿಳೆಯ ಹಿರಿಯ ಮಗಳು ಲೀಲಾಬಾಯಿ ಶವಸಂಸ್ಕಾರಕ್ಕಾಗಿ ಮಡಕೆಯನ್ನು ಎತ್ತಿಕೊಂಡರು ಮತ್ತು ಉಳಿದ ಹೆಣ್ಣುಮಕ್ಕಳು ತಮ್ಮ ತಾಯಿಯನ್ನು ಸ್ಮಶಾನಕ್ಕೆ ಹೊತ್ತು ಸಾಗಿದರು.
ಈ ವೇಳೆ ಅವರು ಮಗನಿಗೆ ತಾಯಿಯ ಯಾವುದೆ ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಿಲ್ಲ. ಜೊತೆಗೆ ಆಕೆಯ ದೇಶ ಸ್ಪರ್ಶಕ್ಕೂ ಕೂಡ ಅವಕಾಶ ಕೊಡಲಿಲ್ಲ.
ಸಮಾನ ಹಕ್ಕುದಾರರು:ಈ ಕುರಿತು ಮಾತನಾಡಿದ ಖಾತಿ ಪಟೇಲ್ ಪಂಚಾಯತ್ ಅಧ್ಯಕ್ಷ ಘನಶ್ಯಾಮ್ ಸಿಂಗ್ ಕೆರ್ವಾ, ಮಗ ತನ್ನ ತಾಯಿಯನ್ನು ಬಹಳ ದಿನಗಳಿಂದ ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಕಳೆದ 10 ವರ್ಷಗಳಿಂದ ಆತನ 7 ಹೆಣ್ಣು ಮಕ್ಕಳೇ ವೃದ್ಧ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ಇಂದು ಮಹಿಳೆ ಸಾವನ್ನಪ್ಪಿದಾಗ ಆಕೆಯ ವಿಧಿ ವಿಧಾನವನ್ನು ಹೆಣ್ಣು ಮಕ್ಕಳು ಮಾಡಲು ಬಯಸಿದರು. ಪುತ್ರ ಮತ್ತು ಪುತ್ರಿಯರಿಗೆ ಸಮಾನ ಹಕ್ಕು ಇರುವ ಹಿನ್ನಲೆ ಅವಿರೋಧವಾಗಿ ಅನುಮತಿ ನೀಡಲಾಯಿತು ಎಂದರು.
ಇದನ್ನೂ ಓದಿ: ಶೀಘ್ರದಲ್ಲೇ ಮನೆ ಮನೆಗೆ ತೆರಳಿ ಸಮೀಕ್ಷೆ - ಕುಟುಂಬದವರಿಗೆ 60 ಪ್ರಶ್ನೆಗಳು!