ಕಣ್ಣೂರು (ಕೇರಳ) :ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ಕೊಂದ ಆರೋಪದ ಮೇಲೆ ಕಣ್ಣೂರಿನ ತಳಿಪರಂಬ ನಿವಾಸಿ ಥಾಮಸ್ ಎಂಬಾತನನ್ನು ಬಂಧಿಸಲಾಗಿದೆ. ದೈಹಿಕ ವಿಕಲಚೇತನರಾಗಿರುವ ಥಾಮಸ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ನಂತರ ಪ್ರಸ್ತುತ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.
ಕಾಲಿಗೆ ಸ್ವಲ್ಪ ಗಾಯವಾಗಿದ್ದ ನವಿಲು ಬದುಕುಳಿಯುವುದಿಲ್ಲ ಎಂದು ತಿಳಿದು ಕರಿ ಮಾಡುವುದಕ್ಕಾಗಿ ಅದನ್ನು ಕೊಂದೆ ಎಂದು ಥಾಮಸ್ ಹೇಳಿದ್ದಾರೆ. ಮರದ ಕೋಲಿನಿಂದ ನವಿಲಿಗೆ ಹೊಡೆದು ಸಾಯಿಸಿದ್ದಾರೆ. ನಂತರ ಅದರ ಅವಶೇಷಗಳನ್ನ ಹತ್ತಿರದ ಬಳಕೆಯಾಗದ ಬಾವಿಗೆ ಎಸೆದಿರುವುದಾಗಿ ತಿಳಿಸಿದ್ದಾರೆ.
ತಳಿಪರಂಬ ರೇಂಜ್ ಆಫೀಸರ್ ಪಿ. ರತೀಶ್ ಮತ್ತು ಅವರ ತಂಡ ಥಾಮಸ್ ಅವರ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತಿಲ್ಲ. ಘಟನೆಗೆ ಸಂಭವಿಸಿದಂತೆ ಜನಸಂದಣಿ ಕಡಿಮೆ ಇರುವ ಪ್ರದೇಶವನ್ನು ಗಮನಿಸಿದರೆ ನವಿಲು ಬಲೆಗೆ ಬೀಳುವ ಸಾಧ್ಯತೆಯ ಬಗ್ಗೆ ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಅದರ ಅವಶೇಷಗಳನ್ನು ಸಾರ್ವಜನಿಕರು ಪ್ರವೇಶಿಸಲು ಸಾಧ್ಯವಾಗದ ಬಾವಿಗೆ ಎಸೆದಿರುವುದು ಸಿಬ್ಬಂದಿಯ ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ತನಿಖೆ ಮುಂದುವರೆದಿದ್ದು, ಮಾಹಿತಿ ಲಭ್ಯವಾಗುತ್ತಿದ್ದಂತೆ ಅಧಿಕಾರಿ ರತೀಶ್ ಹೆಚ್ಚಿನ ವಿವರ ನೀಡಲಿದ್ದಾರೆ. ನವಿಲು ಕೊಂದಿರುವುದು ಗಂಭೀರ ಅಪರಾಧವಾಗಿದ್ದು, ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ :ರಾಷ್ಟ್ರಪಕ್ಷಿ ನವಿಲು ಬೇಟೆ.. ಇಬ್ಬರ ಬಂಧನ