ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ದೇಶದಲ್ಲಿ ಇಂತಹುದೇ ಅನೇಕ ಘಟನೆಗಳು ನಡೆದಿದ್ದವು. ಅದರಲ್ಲಿ ಕೆಲವು ಘಟನೆಗಳ ವಿವರ ಹೀಗಿದೆ.
ಅಕ್ಟೋಬರ್ 13, 2013: ಮಧ್ಯಪ್ರದೇಶದ ದಾತಿಯಾದ ರತನ್‌ಗಢ ಹಿಂದೂ ದೇವಾಲಯದ ಬಳಿ ಕಾಲ್ತುಳಿತದಲ್ಲಿ ಬರೋಬ್ಬರಿ 89 ಜನರು ಸಾವನ್ನಪ್ಪಿದ್ದರು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರತನ್‌ಗಢ್‌ನಲ್ಲಿ ದೇವಸ್ಥಾನಕ್ಕೆ ಹೋಗುವ ಸಿಂಧ್ ನದಿಯ ಸೇತುವೆಯ ಮೇಲಿನ ಕಾಲ್ತುಳಿತದಲ್ಲಿ ಈ ದುರ್ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲಿ ಲಕ್ಷಾಂತರ ಭಕ್ತರು ಜಮಾಯಿಸಿದ್ದರು.
14.01.2011:ಕೇರಳದ ಶಬರಿಮಲೆ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬರೋಬ್ಬರಿ 106 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು; 100ಕ್ಕೂ ಹೆಚ್ಚು ಮಂದಿ ಈ ಘಟನೆಯಲ್ಲಿ ಗಾಯಗೊಂಡಿದ್ದರು. ಕೇರಳದ ಇಡುಕ್ಕಿ ಜಿಲ್ಲೆಯ ಪುಲ್ಮೇಡು ಎಂಬಲ್ಲಿ ಮನೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಜೀಪ್ ಡಿಕ್ಕಿ ಹೊಡೆದಿದ್ದರಿಂದ ಈ ಕಾಲ್ತುಳಿತ ಸಂಭವಿಸಿತ್ತು. ಯಾತ್ರಾರ್ಥಿಗಳು ಬಸ್ ಹಿಡಿಯಲು ಬರುತ್ತಿದ್ದಾಗ ಪುಲ್ಮೇಡುವಿನಲ್ಲಿ ಈ ಕಾಲ್ತುಳಿತವಾಗಿತ್ತು. ಇದರಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
04.03.2010: ಉತ್ತರ ಪ್ರದೇಶದ ಪ್ರತಾಪಗಢದ ರಾಮ್ ಜಾಂಕಿ ದೇವಸ್ಥಾನದಲ್ಲಿ ಸ್ವಯಂ ಘೋಷಿತ ದೇವಮಾನವನಿಂದ ಉಚಿತ ಬಟ್ಟೆ ಮತ್ತು ಆಹಾರವನ್ನು ಪಡೆಯಲು ಜನರು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿ 63 ಜನರು ಸಾವನ್ನಪ್ಪಿದರು. ಸುಮಾರು 5,000 ಭಕ್ತರು ಕೃಪಾಲು ಮಹಾರಾಜ್ ಆಯೋಜಿಸಿದ್ದ ಭಂಡಾರ (ಸಮುದಾಯ ಭೋಜನ) ಗಾಗಿ ಜಮಾಯಿಸಿದ್ದರು. ಆರಂಭಿಕ ವರದಿಗಳ ಪ್ರಕಾರ, ಸೈಟ್‌ನಲ್ಲಿನ ಒಂದು ಮುಖ್ಯ ದ್ವಾರವು ಕುಸಿದು ಬಿದ್ದ ಪರಿಣಾಮ ಈ ಘಟನೆ ನಡೆದಿದ್ದರಿಂದ ಭಕ್ತರು ನೂಕುನುಗ್ಗಲು ಏರ್ಪಟ್ಟಿತ್ತು.