ಹೈದರಾಬಾದ್:ದೇಶದ ಮುಖ್ಯ ಚೌಕಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಲೆಜೆಂಡ್ಸ್ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸುವುದು ತುಂಬಾ ಸಾಮಾನ್ಯವಾಗಿದೆ. ಈ ಮೂಲಕ ಮುಂದಿನ ಯುವಪೀಳಿಗೆಗೆ ಗಾಂಧೀಜಿ ದೇಶಕ್ಕೆ ಸಲ್ಲಿಸಿದ ಸೇವೆಗಳನ್ನು ನೆನಪು ಮಾಡಿಕೊಡುವ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ.
ವಾರಂಗಲ್ ಜಿಲ್ಲೆಯ ಚೆನ್ನರಾವ್ ಪೇಟೆ ಮಂಡಲದ ತಿಮ್ಮರೈನಿ ಪಹಾಡ್ ಗ್ರಾಮದ ನಿವಾಸಿ ನಾಗೋತು ಬಾಲಾಜೋಜಿ ಅವರು 30 ಸಾವಿರ ರೂಪಾಯಿ ವೆಚ್ಚದಲ್ಲಿ ಗಾಂಧಿ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಮಾದರಿಯಾಗಿದ್ದಾರೆ.
ಮಹಾತ್ಮ ಗಾಂಧೀಜಿ ಮೂರ್ತಿ ಸ್ಥಾಪಿಸಿದವರ ಮಾತು:''60 ವರ್ಷಗಳ ಹಿಂದೆ ನನ್ನ ತಂದೆ ರಾಯಣ್ಣ ಮನೆಯಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿದ್ದರು. ನನ್ನ ತಂದೆ ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗ ಮತ್ತು ದೇಶಪ್ರೇಮದ ಬಗ್ಗೆ ಹೇಳುತ್ತಿದ್ದರು. ಅದರೊಂದಿಗೆ ಮಹಾತ್ಮರ ಮೇಲಿನ ಅಭಿಮಾನ ಮತ್ತಷ್ಟು ದುಪ್ಪಟ್ಟಾಯಿತು'' ಎಂದ ಅವರು, ''ಹಳೆ ಮನೆ ಪಾಳು ಬಿದ್ದಿದ್ದರಿಂದ ಅದನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಮನೆ ಕಟ್ಟಿದ್ದೇವೆ. ಮನೆ ಮುಂದೆ ದೊಡ್ಡ ಗಾಂಧಿ ಮೂರ್ತಿಯನ್ನು ಸ್ಥಾಪಿಸಿದ್ದೇವೆ. ಪ್ರತಿ ವರ್ಷ ಆಗಸ್ಟ್ 15 ಮತ್ತು ಅಕ್ಟೋಬರ್ 2 ರಂದು ಪ್ರತಿಮೆಗೆ ಸಮಾರಂಭಗಳು ನಡೆಯುತ್ತವೆ ಎಂದು ಬಾಲಜೋಜಿ ಹೇಳಿದರು.
ಇದನ್ನೂ ಓದಿ:ಬಕ್ರೀದ್ ಹಬ್ಬದ ಹಿನ್ನೆಲೆ ತಾಜ್ ಮಹಲ್ಗೆ ಮೂರು ಗಂಟೆಗಳವರೆಗೆ ಉಚಿತ ಪ್ರವೇಶ, ಯೋಗ ದಿನದಂದು ಎಲ್ಲ ಸ್ಮಾರಕಗಳಿಗೆ ಫ್ರೀ ಎಂಟ್ರಿ - Taj Mahal Entry free today