ಕರ್ನಾಟಕ

karnataka

ETV Bharat / bharat

ಸರ್ವಾಧಿಕಾರ, ನಿರುದ್ಯೋಗದ ವಿರುದ್ಧ ನನ್ನ ಮತ: ದೆಹಲಿ ಸಿಎಂ ಕೇಜ್ರಿವಾಲ್​ - delhi cm kejriwal

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಪತ್ನಿ ಸುನಿತಾ ಅವರ ಜೊತೆಗೂಡಿ ಮತದಾನ ಮಾಡಿದರು.

ದೆಹಲಿ ಸಿಎಂ ಕೇಜ್ರಿವಾಲ್​ ಕುಟುಂಬದಿಂದ ಮತದಾನ
ದೆಹಲಿ ಸಿಎಂ ಕೇಜ್ರಿವಾಲ್​ ಕುಟುಂಬದಿಂದ ಮತದಾನ (Video Grab)

By ANI

Published : May 25, 2024, 1:29 PM IST

ನವದೆಹಲಿ:ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಚಾಂದಿನಿ ಚೌಕ್​ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಕುಟುಂಬ ಸಮೇತ ಅವರು ಬೂತ್​ಗೆ ಬಂದು ಮತದಾನ ಮಾಡಿದರು.

ಬಳಿಕ ಪ್ರತಿಕ್ರಿಯಿಸಿದ ಅವರು, ಸರ್ವಾಧಿಕಾರ, ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಮತ ಚಲಾಯಿಸಿದ್ದೇನೆ. ನನ್ನ ತಂದೆ, ಪತ್ನಿ, ಮಕ್ಕಳು ಮತ ಹಾಕಿದ್ದಾರೆ. ತಾಯಿಗೆ ಅನಾರೋಗ್ಯ ಕಾರಣ ಮತ ಹಾಕಲು ಬಂದಿಲ್ಲ ಎಂದು ತಿಳಿಸಿದರು.

ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಬೇಕು. ದೇಶದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ನಾನು ಸರ್ವಾಧಿಕಾರ ವಿರುದ್ಧ ಮತ ಹಾಕಿದ್ದೇನೆ ಎಂದು ಹೇಳಿದರು.

ಅರವಿಂದ್​ ಕೇಜ್ರಿವಾಲ್​ ಅವರನ್ನು ಅಬಕಾರಿ ಹಗರಣದ ಪ್ರಕರಣದಲ್ಲಿ ನಡೆಸಲಾಗಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿ, ತಿಹಾರ್​ ಜೈಲಿನಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ:58 ಕ್ಷೇತ್ರಗಳಿಗೆ ಮತದಾನ ಆರಂಭ: ವಿದೇಶಾಂಗ ಸಚಿವ, ಕೇಂದ್ರ ಸಚಿವರಿಂದ ಮೊದಲ ಮತ - POLLING FOR LOK SABHA ELECTION

ABOUT THE AUTHOR

...view details