ಕರ್ನಾಟಕ

karnataka

ETV Bharat / bharat

ಎರಡನೇ ದಿನವೂ ಸದ್ದು ಮಾಡಿದ ಅದಾನಿ ಲಂಚ ಆರೋಪ ಪ್ರಕರಣ; ಉಭಯ ಸದನ ಮುಂದೂಡಿಕೆ - ADANI ISSUE

ಸೋಮವಾರ ಕೂಡ ರಾಜ್ಯಸಭೆಯಲ್ಲಿ ಅದಾನಿ ವಿಚಾರ ಚರ್ಚೆಗೆ ಅವಕಾಶ ನೀಡದ ಕ್ರಮ ಖಂಡಿಸಿ ರಾಜ್ಯಸಭೆಯನ್ನು ಬುಧವಾರ ಮುಂಡೂಡಲಾಗಿತ್ತು. ಇಂದು ಮತ್ತೆ ಸದನವು ಗದ್ದಲದಲ್ಲೇ ಅಂತ್ಯಗೊಂಡಿತು.

lok-sabha-proceedings-adjourned-for-the-day
ರಾಜ್ಯಸಭೆ (ANI)

By PTI

Published : Nov 27, 2024, 1:55 PM IST

ನವದೆಹಲಿ: ಅದಾನಿ ಲಂಚ ಪ್ರಕರಣ ಮತ್ತು ಉತ್ತರ ಪ್ರದೇಶದ ಸಂಭಾಲ್​ ಹಿಂಸಾಚಾರ ಘಟನೆ ವಿರುದ್ಧ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯಿಂದ ಉಂಟಾದ ಗದ್ದಲದಿಂದಾಗಿ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ,​ ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಆದರೆ, ಪ್ರತಿಪಕ್ಷಗಳು ಅದಾನಿ ವಿವಾದ ಮತ್ತು ಸಂಭಾಲ್​ ಹಿಂಸಾಚಾರ ಕುರಿತು ಚರ್ಚೆಗೆ ಒತ್ತಾಯಿಸಿದರು ಇದರಿಂದ ಸದನದಲ್ಲಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಯಿತು. ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಲಾರಂಭಿಸಿದರು. ಈ ಹಿನ್ನೆಲೆ ನಾಳೆಗೆ ಸದನ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಅದೇ ವಿಷಯ:ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಅದಾನಿ ವಿವಾದ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಅಪರಾಧ ಘಟನೆ ಸೇರಿದಂತೆ ಅನೇಕ ವಿಷಯಗಳ ಕುರಿತು ಸದಸ್ಯರು ಪ್ರತಿಭಟನೆಗೆ ಮುಂದಾದರು. ಈ ವೇಳೆ 11.30ಕ್ಕೆ ಮುಂದೂಡಲಾಯಿತು. ಸಭೆ ಮತ್ತೆ ಆರಂಭವಾಗುತ್ತಿದ್ದಂತೆ, ಸಭಾಧ್ಯಕ್ಷರಾದ ಜಗದೀಪ್​ ಧನಕರ್​ ನಿಯಮ 267ರ ಅಡಿಯಲ್ಲಿ 18 ವಿಚಾರಗಳ ಚರ್ಚೆಗೆ ನಿರಾಕರಸಿದರು. ಈ ಸಂಬಂಧ ನೋಟಿಸ್​ ಅನ್ನು ಕೂಡ ಅವರು ಸ್ವೀಕರಿಸಲಿಲ್ಲ. ಇದರಿಂದಾಗಿ ವಿಪಕ್ಷ ನಾಯಕರು ಪ್ರತಿಭಟನೆಗೆ ಮುಂದಾದರು. ಸಭೆಯಲ್ಲಿ ಗದ್ದಲದ ಪರಿಣಾಮವನ್ನು ನಾಳೆಗೆ ಸದನವನ್ನು ಮುಂದೂಡಲಾಯಿತು.

ಸೋಮವಾರ ಕೂಡ ರಾಜ್ಯಸಭೆಯಲ್ಲಿ ಅದಾನಿ ವಿಚಾರ ಚರ್ಚೆಗೆ ಅವಕಾಶ ನೀಡದ ಕ್ರಮ ಖಂಡಿಸಿ ಸದನವನ್ನು ಬುಧವಾರ ಮುಂಡೂಡಲಾಗಿತ್ತು. ಇಂದು ಮತ್ತೆ ಸದನವು ಗದ್ದಲದಲ್ಲೇ ಅಂತ್ಯಗೊಂಡಿತು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಅದಾನಿ ಲಂಚ ಆರೋಪದ ಸದ್ದು: ಬುಧವಾರಕ್ಕೆ ಸದನ ಮುಂದೂಡಿಕೆ

ABOUT THE AUTHOR

...view details