ನವದೆಹಲಿ:2024ರಲೋಕಸಭೆ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಎಲ್ಲ ಏಳು ಹಂತಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ಪ್ರಾರಂಭವಾಗಲಿದೆ. ಮೊದಲು ಅಂಚೆ ಮತಪತ್ರಗಳ ಎಣಿಕೆಯೊಂದಿಗೆ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಮಧ್ಯಾಹ್ನದ ವೇಳೆ ಚುನಾವಣಾ ಫಲಿಂತಾಶದ ಚಿತ್ರಣ ದೊರಯಲಿದೆ. ಸಂಜೆ ವೇಳೆ ಸ್ಪಷ್ಟತೆ ಸಿಗಲಿದೆ.
ಮತ ಎಣಿಕೆ ಹಿನ್ನೆಲೆ ಪೊಲೀಸರು ಮತ್ತು ಅರಸೇನಾ ಪಡೆಗಳು ಗಸ್ತು ನಡೆಸಿದ್ದು, ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿಭದ್ರತೆ ಹೆಚ್ಚಿಸಲಾಗಿದೆ. ಭಾರತದ ಚುನಾವಣಾ ಆಯೋಗವು ನಿಯಮ ಹೊರಡಿಸಿದ್ದು, ಮತ ಎಣಿಕೆ ನಡೆಯಲಿರುವ ಕೇಂದ್ರಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಪಾಸ್ ಇಲ್ಲದೆ, ಮತಗಟ್ಟೆ ಅಥವಾ ಏಜೆಂಟರನ್ನು ಹೊರತುಪಡಿಸಿ ಯಾರಿಗೂ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಮತ ಎಣಿಕೆ ಕೇಂದ್ರದಿಂದ 100 ಮೀಟರ್‌ಗಳವರೆಗೆ ಯಾರೂ ಪಾಸ್ ಇಲ್ಲದೇ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
ಇಂದು ಬೆಳಗ್ಗೆ ಇಂದಲೇ ದೇಶದಾದ್ಯಂತ ಚುನಾವಣಾ ಫಲಿತಾಂಶ ಹಿನ್ನೆಲೆ ಕೆಲ ಅಭ್ಯರ್ಥಿಗಳು ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರೆ, ಗೆಲುವಿನ ನಿರೀಕ್ಷೆಯಲ್ಲಿರುವವರು ಈಗಾಗಲೇ ಸಹಿ ತಿನಿಸುಗಳನ್ನು ತಯಾರಿಸಿ ಸಂಭ್ರಮಾಚರಣೆಗೆ ಸಿದ್ದತೆ ನಡೆಸಿದ್ದಾರೆ. ಚಾಂದಿನಿ ಚೌಕ್‌ನ ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಂಡೇಲ್ವಾಲ್ ದೆಹಲಿಯ ಗೌರಿ ಶಂಕರ ದೇವಸ್ಥಾನದಲ್ಲಿ ಚುನಾವಣೆ ಫಲಿತಾಂಶ ಹಿನ್ನೆಲೆ ಪ್ರಾರ್ಥನೆ ಸಲ್ಲಿಸಿದರು.