ಕರ್ನಾಟಕ

karnataka

ETV Bharat / bharat

ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪಾರದರ್ಶಕ ಚರ್ಚೆಯಾಗಲಿ: ಒಮರ್ ಅಬ್ದುಲ್ಲಾ - ONE NATION ONE ELECTION

ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರದಲ್ಲಿ ವಿವಿಧ ಪಕ್ಷಗಳ ನಾಯಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ (IANS)

By ETV Bharat Karnataka Team

Published : Dec 13, 2024, 7:27 PM IST

ನವದೆಹಲಿ:'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತಾಗಿ ಪಾರದರ್ಶಕ ಚರ್ಚೆ ನಡೆಯಬೇಕೆಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರ ಹೇಳಿದ್ದಾರೆ. ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಪಾರದರ್ಶಕವಾಗಿ ಚರ್ಚೆ ನಡೆಯಲಿ ಮತ್ತು 2019ರಲ್ಲಿ 370 ನೇ ವಿಧಿಯೊಂದಿಗೆ ಮಾಡಿದಂತೆ ಇದನ್ನೂ ಮಾಡಬಾರದು ಎಂದು ಅವರು ಆಗ್ರಹಿಸಿದರು.

ಒಂದು ರಾಷ್ಟ್ರ, ಒಂದು ಚುನಾವಣೆ ಸಾಧ್ಯವಿಲ್ಲ: ಏತನ್ಮಧ್ಯೆ ಇದೇ ವಿಷಯದ ಬಗ್ಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ವಿಧಾನಸಭೆಯ ಸದಸ್ಯ ಜಿ.ಎ.ಮಿರ್, 'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನಾತೀತವಾಗಿದೆ. ಇದನ್ನು ಭಾರತದಂಥ ದೊಡ್ಡ ದೇಶದಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದರು. ಇಂತಹ ವಿಷಯಗಳನ್ನು ಮುನ್ನೆಲೆಗೆ ತಂದು ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಮಿರ್ ಆರೋಪಿಸಿದರು

"ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯು ಕಲ್ಪನೆಗೂ ಮೀರಿದೆ ಮತ್ತು ಭಾರತದಂತಹ ದೊಡ್ಡ ದೇಶದಲ್ಲಿ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಮತ್ತು ಎಲ್ಲಾ ಪಕ್ಷಗಳು ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಲಿವೆ. ಆದರೆ, ಇದು ಸಣ್ಣ ದೇಶವಲ್ಲ. ಇದು ದೊಡ್ಡ ಪ್ರಜಾಪ್ರಭುತ್ವದ ದೇಶ. ಸಂಸತ್ತು, ವಿಧಾನಸಭೆಗಳು, ಪಂಚಾಯತ್​ಗಳು ಅಥವಾ ಪುರಸಭೆಗಳು ಸೇರಿದಂತೆ ಈ ದೇಶದಲ್ಲಿ ನಾವು ಎಲ್ಲಾ ಚುನಾವಣೆಗಳನ್ನು ಒಂದೇ ಸಮಯದಲ್ಲಿ ನಡೆಸುವುದನ್ನು ಊಹಿಸಲೂ ಸಾಧ್ಯವಿಲ್ಲ" ಎಂದು ಮಿರ್ ಸುದ್ದಿಗಾರರಿಗೆ ತಿಳಿಸಿದರು.

ದೇಶಕ್ಕೆ ಒಳ್ಳೆಯದು ಎಂದ ಪ್ರಶಾಂತ್ ಕಿಶೋರ್: ಇನ್ನು ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರಾಜಕೀಯ ತಂತ್ರಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕಿಶೋರ್, ಸದುದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತಂದರೆ ಒಂದು ರಾಷ್ಟ್ರ ಒಂದು ಚುನಾವಣೆ ದೇಶಕ್ಕೆ ಪ್ರಯೋಜನಕಾರಿಯಾಗಬಹುದು ಎಂದು ಹೇಳಿದರು.

"ಕನಿಷ್ಠ 1960 ರ ದಶಕದವರೆಗೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಮತ್ತೊಮ್ಮೆ ಅದೇ ರೀತಿಯಾದರೆ ಅದು ದೇಶಕ್ಕೆ ಒಳ್ಳೆಯದು. ಆದರೆ ಪರಿವರ್ತನೆಯು ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಂಥ ಬದಲಾವಣೆಯನ್ನು ರಾತ್ರೋರಾತ್ರಿ ತರಲು ಪ್ರಯತ್ನಿಸಬಾರದು" ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ನಡೆಸುತ್ತಿರುವ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಲು ಒಂದು ರಾಷ್ಟ್ರ ಒಂದು ಚುನಾವಣೆ ಅನ್ನು ಬಳಸಬಹುದು ಎಂದು ರಾಜಕೀಯ ವಲಯಗಳಲ್ಲಿ ಅನುಮಾನಗಳ ಹಿನ್ನೆಲೆಯಲ್ಲಿ ಕಿಶೋರ್ ಅವರ ಹೇಳಿಕೆ ಮಹತ್ವ ಪಡೆದಿದೆ.

ಇದನ್ನೂ ಓದಿ : ಬಿಜೆಪಿ ವಿರುದ್ಧ ವಾಗ್ದಾಳಿ, ಜಾತಿ ಗಣತಿಗೆ ಬೆಂಬಲ: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಚೊಚ್ಚಲ ಭಾಷಣ - PRIYANKA GANDHI SPEECH IN LOK SABHA

ABOUT THE AUTHOR

...view details