ಹೈದರಾಬಾದ್: ಕುವೈತ್ನಲ್ಲಿ ನಡೆದ ಬಹುಮಹಡಿ ಕಟ್ಟಡದ ಅಗ್ನಿ ದುರಂತದಲ್ಲಿ 40 ಜನ ಭಾರತೀಯರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಬಹುತೇಕ ಕೇರಳದವರೇ ಆಗಿದ್ದು, ಉಳಿದಂತೆ ತಮಿಳುನಾಡು ಸೇರಿ ಇತರೆ ಭಾರತೀಯರಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ಕಾಸರಗೋಡಿನ ವ್ಯಕ್ತಿಯೊಬ್ಬರು ಅಚ್ಚರಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಕ್ಷಿಣ ಕುವೈತ್ನಲ್ಲಿ ಬುಧವಾರ ಏಳು ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತು. ಕಟ್ಟಡದಲ್ಲಿ ಸುಮಾರು 195 ವಲಸಿಗ ಕಾರ್ಮಿಕರಿದ್ದರು. ಬೆಳಗಿನ ಜಾವ 4 ಗಂಟೆಗೆ ಅಡುಗೆ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಪರಿಣಾಮ 40 ಮಂದಿ ಭಾರತೀಯರು ಸೇರಿ 49 ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಅಂದಾಜು 50 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
24 ಕೇರಳಿಗರು ಸಾವು: ಮೃತಪಟ್ಟ ಭಾರತೀಯರಲ್ಲಿ ಬಹುತೇಕರು ಕೇರದವರು. ಇದುವರೆಗೆ ಈ ರಾಜ್ಯದವರ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇದರಲ್ಲಿ 16 ಜನರ ಗುರುತು ಪತ್ತೆ ಹಚ್ಚಲಾಗಿದೆ.
ಶಮೀರ್ ಉಮರುದ್ದೀನ್ (30 ವಯಸ್ಸು - ಸೂರನಾಡ್, ಕೊಲ್ಲಂ), ಕೆ.ರಂಜಿತ್ (34 ವಯಸ್ಸು - ಚೆಂಗಳ, ಕಾಸರಗೋಡು), ಕೇಳು ಪೊನ್ಮಲೇರಿ (58 ವಯಸ್ಸು - ಪಿಲಿಕೋಡು, ಕಾಸರಗೋಡು), ಸ್ಟೆಫಿನ್ ಅಬ್ರಹಾಂ ಸಾಬು (29 ವಯಸ್ಸು, ಪಂಪಾಡಿ, ಕೊಟ್ಟಾಯಂ), ಆಕಾಶ್ ಶಶಿಧರನ್ ನಾಯರ್ (31 ವಯಸ್ಸು, ಪತ್ತನಂತಿಟ್ಟ), ಸಾಜನ್ ಜಾರ್ಜ್ (29 ವಯಸ್ಸು, ಪುನಲೂರು, ಕೊಲ್ಲಂ), ಸಾಜು ವರ್ಗೀಸ್ (56 ವಯಸ್ಸು - ಕೊನ್ನಿ, ಪತ್ತನಂತಿಟ್ಟ), ಪಿ.ವಿ.ಮುರಳೀಧರನ್ (68 ವಯಸ್ಸು, ವಾಜಮುತ್ತಂ, ಪತ್ತನಂತಿಟ್ಟ), ಲೂಕೋಸ್ ಸಾಬು (48 ವಯಸ್ಸು - ವೆಲಿಚಿಕ್ಕಲ, ಕೊಲ್ಲಂ), ಥಾಮಸ್ ಉಮ್ಮನ್ (37 ವಯಸ್ಸು - ತಿರುವಲ್ಲಾ, ಪತ್ತನಂತಿಟ್ಟ), ವಿಶ್ವಾಸ್ ಕೃಷ್ಣನ್ ಧರ್ಮದಂ (ಕಣ್ಣೂರು), ನೂಹ್ (40 ವಯಸ್ಸು, ತಿರೂರ್ - ಮಲಪ್ಪುರಂ), ಎಂ.ಪಿ. ಬಾಹುಲೇಯನ್ (36 ವಯಸ್ಸು - ಪುಲಮಂತೋಳ್, ಮಲಪ್ಪುರಂ), ಶ್ರೀಹರಿ ಪ್ರದೀಪ್ (27 ವಯಸ್ಸು - ಚಂಗನಾಶ್ಶೇರಿ, ಕೊಟ್ಟಾಯಂ), ಮ್ಯಾಥ್ಯೂ ಜಾರ್ಜ್ (54 ವಯಸ್ಸು - ನಿರಣಂ, ಪತ್ತನಂತಿಟ್ಟ), ಸಿಬಿನ್ ಟಿ ಅಬ್ರಹಾಂ (31 ವಯಸ್ಸು - ಕೀಜ್ವೈಪುರ, ಪತ್ತನಂತಿಟ್ಟ) ಮೃತರೆಂದು ಗುರುತಿಸಲಾಗಿದೆ.