ಕರ್ನಾಟಕ

karnataka

ETV Bharat / bharat

ಪ್ರಧಾನಿ ಬಳಿ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ; ಇರುವುದು ಬರೀ 3.02ಕೋಟಿ ಚರಾಸ್ತಿ; ಅವರು ಓದಿದ್ದೆಷ್ಟು ಗೊತ್ತಾ? - KNOW ABOUT PM MODI ASSET

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ತಮ್ಮ ಆಸ್ತಿ ಸೇರಿದಂತೆ ಎಲ್ಲಾ ವಿವರಗಳ ಬಗ್ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿಯವರ ಅವರ ಆಸ್ತಿ ಎಷ್ಟು ಮತ್ತು ಎಷ್ಟು ಶಿಕ್ಷಣ ಪಡೆದಿದ್ದಾರೆ ಎಂಬುದನ್ನು ಪ್ರಮಾಣಪತ್ರದಲ್ಲಿ ಘೊಷಿಸಿಕೊಂಡಿದ್ದಾರೆ.

know-about-property-and-education-prime-minister-narendra-modi
ಪ್ರಧಾನಿ ಬಳಿ ಇಲ್ಲ ಯಾವುದೇ ಸ್ಥಿರಾಸ್ತಿ: ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ; ಇರುವುದು ಬರೀ 3.02ಕೋಟಿ ಚರಾಸ್ತಿ (ETV Bharat)

By ETV Bharat Karnataka Team

Published : May 14, 2024, 10:29 PM IST

Updated : May 14, 2024, 10:40 PM IST

ವಾರಾಣಸಿ, ಉತ್ತರಪ್ರದೇಶ: ಮೂರನೇ ಬಾರಿಗೆ ದೇಶದಲ್ಲಿ ಅಧಿಕಾರಕ್ಕೆ ಬರುವ ಸನ್ನಾಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಸ್ತಿ ವಿವರಗಳನ್ನು ಕೂಡಾ ಪ್ರಧಾನಿ ಮೋದಿ ಸಲ್ಲಿಕೆ ಮಾಡಿದ್ದಾರೆ. ಅವರು ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಪ್ರಧಾನಿ ಯಾವುದೇ ಸ್ಥಿರಾಸ್ತಿಯನ್ನು ಹೊಂದಿಲ್ಲ. 15 ವರ್ಷಗಳಿಂದ ಯಾವುದೇ ಆಭರಣವನ್ನೂ ಪ್ರಧಾನಿ ಖರೀದಿಸಿಲ್ಲ. ಅಲ್ಲದೇ ಸ್ವಂತ ಮನೆ, ಜಮೀನು ಅಥವಾ ಯಾವುದೇ ಕಾರನ್ನೂ ಕೂಡಾ ಹೊಂದಿಲ್ಲ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚರ ಆಸ್ತಿ 65.91 ಲಕ್ಷ ರೂ.ಗಳಾಗಿದ್ದು, 2019ರಲ್ಲಿ 1.41 ಕೋಟಿ ರೂ.ಗೆ ಏರಿಕೆಯಾಗಿತ್ತು. 2024ರಲ್ಲಿ ಅದು 3.02 ಕೋಟಿ ರೂ.ಗೆ ಹೆಚ್ಚಳಗೊಂಡಿದೆ.

ಪ್ರಧಾನಿ ಬಳಿ ಇಲ್ಲ ಯಾವುದೇ ಸ್ಥಿರಾಸ್ತಿ: ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ; ಇರುವುದು ಬರೀ 3.02ಕೋಟಿ ಚರಾಸ್ತಿ (ETV Bharat)

ಪ್ರಧಾನಿ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ: ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅವರ ಚರಾಸ್ತಿ 65.91 ಲಕ್ಷ ರೂ ಇತ್ತು. 2019 ರಲ್ಲಿ ಸ್ಥಿರಾಸ್ತಿಯ ಮೌಲ್ಯ 1 ಕೋಟಿ 10 ಲಕ್ಷ ಎಂದು ಹೇಳಲಾಗಿತ್ತು. 2014ರ ಅಫಿಡವಿಟ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ 32,700 ನಗದು ಇದ್ದರೆ, 2019 ರಲ್ಲಿ ಅದು 38,750 ಕ್ಕೆ ಏರಿಕೆ ಆಗಿತ್ತು. ಆದರೆ, 2024 ರಲ್ಲಿ ಅಫಿಡವಿಟ್‌ನಲ್ಲಿ ಪ್ರಧಾನಿ ಮೋದಿ ಅವರು ಸ್ಥಿರಾಸ್ತಿಯ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ. ಆದರೆ ಅವರ ಬಳಿ 52, 920 ರೂ ನಗದು ಇದೆ ಎಂದು ಅಫಿಡವಿಟ್​ನಲ್ಲಿ ಹೇಳಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ 2.86 ಕೋಟಿ ರೂ. : ಪ್ರಧಾನಿ ಮೋದಿ ಅಫಿಡವಿಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬ್ಯಾಂಕ್ ಖಾತೆಯಲ್ಲಿ 58 ಲಕ್ಷದ 54,000 ರೂ. ಇತ್ತು ಎಂದು ಪ್ರಕಟಿಸಿದ್ದರು. ಆದರೆ, 2019 ರಲ್ಲಿ 1.27 ಕೋಟಿ ರೂ. ಇತ್ತು ಎಂದು ಅಫಿಡವಿಟ್ ಸಲ್ಲಿಸಿದ್ದರು. 2024ರಲ್ಲಿ ಈ ಮೊತ್ತ 2.86 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅವರು ತಾವು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. 1967ರಲ್ಲಿ ಗುಜರಾತ್‌ನ ಎಸ್‌ಎಸ್‌ಸಿ ಬೋರ್ಡ್‌ನಲ್ಲಿ ಓದಿರುವ ಬಗ್ಗೆ ಪ್ರಧಾನಿ ವಿವರ ನೀಡಿದ್ದಾರೆ. 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಮತ್ತು 1983 ರಲ್ಲಿ ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾಲಯದಿಂದ MA ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಬಗ್ಗೆ ಅವರು ತಾವು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಮಾಹಿತಿ ಒದಗಿಸಿದ್ದಾರೆ.

ಚಿನ್ನದ ಉಂಗುರದ ಮೌಲ್ಯ 2.67 ಲಕ್ಷ: ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 2019 ರಲ್ಲಿ ಗುಜರಾತ್‌ನ ಗಾಂಧಿನಗರದಲ್ಲಿ ಮನೆ ಹೊಂದಿದ್ದರು. ಇದರ ಬೆಲೆ ಒಂದು ಕೋಟಿ ರೂಪಾಯಿ. ಆದರೆ ಈ ಬಾರಿ ಅವರು ಈ ಮನೆಯ ವಿವರವನ್ನು ನೀಡಿಲ್ಲ. ಚುನಾವಣಾ ಅಫಿಡವಿಟ್‌ನಲ್ಲಿ ಅವರು ಅಹಮದಾಬಾದ್​​ನ ವಿಳಾಸವನ್ನು ನೀಡಿದ್ದಾರೆ.

ಪತ್ನಿ ಹೆಸರು ಉಲ್ಲೇಖಿಸಿದ ಮೋದಿ:ಮೋದಿ ಅವರು ತಮ್ಮ ನಾಮಪತ್ರದಲ್ಲಿ ಜಶೋದಾಬೆನ್ ಅವರ ಹೆಸರನ್ನು ತಮ್ಮ ಪತ್ನಿ ಎಂದು ಉಲ್ಲೇಖಿಸಿದ್ದಾರೆ. ಆದರೆ ಅವರ ಆದಾಯದ ಮೂಲದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. 2002 ರಲ್ಲಿ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಭೂಮಿಯನ್ನು ಖರೀದಿಸಿದ್ದರು. ಆದರೆ ಅದನ್ನು ಅವರು ದೇಣಿಗೆ ನೀಡಿದ್ದಾರೆ ಎಂದು ನಮೂದಿಸಲಾಗಿದೆ. 2014 ಮತ್ತು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದರು. ಇದರ ತೂಕ 45 ಗ್ರಾಂ ಇದ್ದು, ಇದರ ಬೆಲೆ 1.30 ಲಕ್ಷ ಎಂದು ಹೇಳಲಾಗಿದೆ. ಆದರೆ ಈ ಬಾರಿ ಅವುಗಳ ಮೌಲ್ಯ 2.67 ಲಕ್ಷ ರೂ.ಗೆ ಏರಿಕೆಯಾಗಿದೆ. ಪ್ರಧಾನಿಯವರು ಯಾವುದೇ ಷೇರುಗಳನ್ನಾಗಲಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಾಗಲಿ ಹೂಡಿಕೆ ಮಾಡಿಲ್ಲ.

ಉಳಿದಂತೆ 2019 ರಲ್ಲಿ ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ 9,05,105 ರೂ. ಹಾಗೂ ಎಲ್‌ಐಸಿಯಲ್ಲಿ 1,89,305.ರೂ. ಹೂಡಿಕೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ಈ ಬಾರಿ ಆ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.

ಆದಾಯದ ಮೂಲ: ನರೇಂದ್ರ ಮೋದಿ ಹೆಸರಿನಲ್ಲಿ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳಿಲ್ಲ. ಆದಾಯದ ಮೂಲಗಳನ್ನು ಸರ್ಕಾರದ ಸಂಬಳ ಮತ್ತು ಬ್ಯಾಂಕ್‌ಗಳಿಂದ ಬರುವ ಬಡ್ಡಿ ಎಂದು ವಿವರಿಸಿದ್ದಾರೆ. ಯಾವುದೇ ರೀತಿಯ ಸಾಲ ಅಥವಾ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2014 ರಲ್ಲಿ ಅವರ ಒಟ್ಟು ಆಸ್ತಿ 1.65 ಕೋಟಿ ರೂ.ಗಳಾಗಿದ್ದು ಅದರ ಮೌಲ್ಯ 2019 ರಲ್ಲಿ 2.15 ಕೋಟಿ ರೂಗೆ ಏರಿಕೆ ಆಗಿತ್ತು. 2024ರ ಅಫಿಡವಿಟ್‌ನಲ್ಲಿ ಒಟ್ಟು ಆಸ್ತಿ 3.02 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ.

ಇದನ್ನು ಓದಿ:ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ; ಬ್ರಾಹ್ಮಣ, ದಲಿತ ಮತ್ತು ಒಬಿಸಿ ವರ್ಗದವರು ಸೂಚಕರಾಗಿ ಸಹಿ - PM Modi Nomination

Last Updated : May 14, 2024, 10:40 PM IST

ABOUT THE AUTHOR

...view details