ಕರ್ನಾಟಕ

karnataka

ETV Bharat / bharat

ಮತದಾರರಿಗೆ ಕಾಂಗ್ರೆಸ್‌ ಕಿಟ್​, ಹಣ, ಮದ್ಯ ಆಮಿಷ: ವಯನಾಡ್‌ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ - WAYANAD BJP CANDIDATE

ವಯನಾಡ್‌ನಲ್ಲಿ ಕಾಂಗ್ರೆಸ್​​ಗೆ ಸೋಲುವ ಭಯ ಎದುರಾಗಿದೆ. ಇದೇ ಕಾರಣಕ್ಕೆ ಅವರು ಮತದಾರರಿಗೆ ಕಿಟ್​, ಹಣ ಹಾಗು ಮದ್ಯ ಸೇರಿದಂತೆ ಅನೇಕ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂದು ನವ್ಯಾ ಹರಿದಾಸ್ ಆರೋಪಿಸಿದ್ದಾರೆ.

wayanad-bjp-candidate-navya-haridas-accuses-congress-party-accusing-it-of-using-various-tactics-to-sway-voters
ವಯನಾಡ್‌ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ (ANI)

By ANI

Published : Nov 13, 2024, 12:43 PM IST

ವಯನಾಡ್​(ಕೇರಳ): ಮತದಾರರನ್ನು ಸೆಳೆಯಲು ಕಾಂಗ್ರೆಸ್​ ಪಕ್ಷ ಅನೇಕ ರೀತಿಯ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ನವ್ಯಾ ಹರಿದಾಸ್​ ಆರೋಪಿಸಿದರು.

ಮತದಾನದ ದಿನವಾದ ಇಂದು ಬೆಳಗ್ಗೆ ಶ್ರೀ ಅಯ್ಯಪ್ಪ ಮಹಾಕ್ಷೇತ್ರಂ ದೇಗುಲಕ್ಕೆ ಭೇಟಿ ನೀಡಿದ ಅವರು, ತಮ್ಮ ಚುನಾವಣಾ ಪ್ರಚಾರ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ವಯನಾಡ್‌ಗೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿ ಬೇಕು. ತಮ್ಮ ಸಮಸ್ಯೆಗಳನ್ನು ಸಂಸತ್ತಿನಲ್ಲಿ ತಿಳಿಸಿ, ಅದಕ್ಕೆ ಪರಿಹಾರ ದೊರಕಿಸಿಕೊಡುವವರು ಬೇಕು ಎಂದರು.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್​​ಗೆ​ ಈ ಬಾರಿ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದೆ. ಇದೇ ಕಾರಣಕ್ಕೆ ಅವರು ಮತದಾರರಿಗೆ ಕಿಟ್​, ಹಣ, ಮದ್ಯ ಸೇರಿದಂತೆ ಅನೇಕ ಆಮಿಷಗಳನ್ನೊಡ್ಡಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕ್ಷೇತ್ರದ ಮತದಾರರಿಂದ ಸಕಾರಾತ್ಮಕ ಅಭಿಪ್ರಾಯ ದೊರೆಯುತ್ತಿರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಅವರು, ಸ್ಥಳೀಯರ ಬೆಂಬಲದಿಂದ ಬಿಜೆಪಿ ಮತ್ತಷ್ಟು ಬಲಶಾಲಿಯಾಗಿದೆ. ಸಾರ್ವಜನಿಕ ಸಭೆಗಳಲ್ಲೂ ಇದನ್ನು ನಾವು ಕಂಡಿದ್ದೇವೆ. ಮೊದಲಿಗಿಂತ ಈ ಬಾರಿ ಸಮಾವೇಶಗಳಲ್ಲಿ ಹೆಚ್ಚಿನ ಬೆಂಬಲ ಸಿಕ್ಕಿದೆ ಎಂದರು.

ಇದೇ ವೇಳೆ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಅವರು, ಸಂಸತ್ತಿನಲ್ಲಿ ವಯನಾಡ್‌ನ ಸಮಸ್ಯೆಗಳನ್ನು ತಿಳಿಸಲು ಅವರು ವಿಫಲರಾದರು. ಪ್ರಿಯಾಂಕಾ ಗಾಂಧಿ ಒಂದು ವೇಳೆ ಗೆದ್ದರೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಅವರು ಇಲ್ಲಿನ ಜನರ ಅವಶ್ಯಕತೆಗಳಿಗೆ ಅಥವಾ ಅವರ ಸಮಸ್ಯೆಗೆ ಸಂಸತ್ತಿನಲ್ಲಿ ಧ್ವನಿಯಾಗಿಲ್ಲ. ಇಲ್ಲಿನ ಜನರೊಂದಿಗೆ ಅವರು ಬೆರೆತಿಲ್ಲ ಎಂದರು.

ವಕ್ಫ್​ ಬೋರ್ಡ್​ ವಿವಾದದ ಕುರಿತು ಮಾತನಾಡಿ, ಈ ಪ್ರದೇಶದ ಕುಟುಂಬಗಳಲ್ಲಿ ಇದು ತೀವ್ರ ಆತಂಕಕ್ಕೆ ಕಾರಣವಾದ ವಿಷಯ. ಇತ್ತೀಚಿನ ನೋಟಿಫಿಕೇಷನ್​ನಿಂದಾಗಿ ಜನರು ತಮ್ಮ ಆಸ್ತಿ ಕಳೆದುಕೊಳ್ಳುವ ಭಯ ಮೂಡಿದೆ. ಈ ರೀತಿ ಆಗಬಾರದು. ಕೇಂದ್ರ ಸರ್ಕಾರ ಯಾವಾಗಲೂ ನಿಮ್ಮ ಜೊತೆಗಿದೆ. ನಾವೂ ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದರು.

ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿಂಪಡೆಯಬೇಕು ಎಂಬುದು ಬಹುದಿನಗಳ ಬೇಡಿಕೆ. ಈ ವಿಚಾರದಲ್ಲಿ ಕಾಂಗ್ರೆಸ್​ ಏನೂ ಮಾಡಲಿಲ್ಲ. ರಾಹುಲ್​ ಗಾಂಧಿ ಎಂದೂ ಮಧ್ಯಪ್ರವೇಶಿಸಲಿಲ್ಲ. ಜನರಿಗೆ ಕೇವಲ ಭರವಸೆ ನೀಡದರೇ ಹೊರತು ಅದಕ್ಕೆ ಬದ್ಧನಾಗಲಿಲ್ಲ ಎಂದು ಹೇಳಿದರು.

ಎನ್​ಎಚ್​ 766 ಕರ್ನಾಟಕ ಮತ್ತು ಕೇರಳದಲ್ಲಿ ಹಾದುಹೋಗುತ್ತದೆ. ಇಲ್ಲಿ ವನ್ಯಜೀವಿ ಸಂರಕ್ಷಣೆಯ ಉದ್ದೇಶದಿಂದ ರಾತ್ರಿ ಸಂಚಾರಕ್ಕೆ ನಿಷೇಧವಿದೆ. 2019ರಲ್ಲಿ ಸುಪ್ರೀ ಕೋರ್ಟ್​ ಕೂಡ ವಾಹನ ಸಂಚಾರ ನಿಷೇಧವನ್ನು ಎತ್ತಿ ಹಿಡಿದಿತ್ತು.

ಇದನ್ನೂ ಓದಿ: 10 ರಾಜ್ಯಗಳ 31 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ

ABOUT THE AUTHOR

...view details