ಹೈದರಾಬಾದ್: ಇಂದು ದೇಶ 25ನೇ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದೆ. ಇದು ವೈರಿ ಪಾಕಿಸ್ತಾನದ ಶತ್ರುಗಳನ್ನು ಬಗ್ಗುಬಡಿದು ಭಾರತೀಯ ಯೋಧರು 'ಅಪರೇಷನ್ ವಿಜಯ' ಯಶಸ್ವಿಗೊಳಿಸಿದ ದಿನ. ಭಾರತದ ಭೂಪ್ರದೇಶದೊಳಗೆ ನುಸುಳಿದ್ದ ಶತ್ರುಗಳನ್ನು ಕೆಚ್ಚೆದೆಯ ಸೈನಿಕರು ಹಿಮ್ಮೆಟ್ಟಿಸಿ ಕಾರ್ಗಿಲ್ ಶಿಖರದ ಮೇಲೆ ತಿರಂಗ ಹಾರಿಸಿದ್ದೇ ಒಂದು ರೋಚಕ ಇತಿಹಾಸ.
ವೈರಿ ರಾಷ್ಟ್ರದ ಯೋಧರು ಭಾರತದೊಳಗೆ ನುಸುಳಿದ್ದರು. ಇವರನ್ನು ಬಗ್ಗುಬಡಿಯಲೆಂದು ಭಾರತ 'ಅಪರೇಷನ್ ವಿಜಯ'ದ ಕಹಳೆ ಮೊಳಗಿಸಿತ್ತು. ಇದಕ್ಕೂ ಮುನ್ನ ನಡೆದ ಕೆಲ ಪ್ರಮುಖ ಘಟನೆಗಳು ಪಾಕಿಸ್ತಾನದ ನೈಜ ಬಣ್ಣ, ಕುತಂತ್ರ ಹಾಗೂ ಹುನ್ನಾರಗಳನ್ನು ಬಯಲುಗೊಳಿಸಿದೆ.
- ಲಾಹೋರ್ ಶೃಂಗಸಭೆಗೆ ಮೊದಲು ನವೆಂಬರ್ 1998ರ ಕೊನೆಗೆ ಕಾರ್ಯಾಚರಣೆ ಆರಂಭ.
- 1998ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸಿಯಾಚಿನ್ ಕುರಿತ ಪಾಕಿಸ್ತಾನ-ಭಾರತ ಮಾತುಕತೆ ಬಿಕ್ಕಟ್ಟಿನಲ್ಲಿ ಅಂತ್ಯ.
- 1998ರ ಅಕ್ಟೋಬರ್ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನಾಗಿ ಮುಷರಫ್ ಅವರನ್ನು ನೇಮಿಸಿದ ಪ್ರಧಾನಿ ನವಾಜ್ ಷರೀಫ್.
ಪಾಕ್ ಆಕ್ರಮಿಸಿದ್ದ ಪ್ರದೇಶಗಳು: ಪಾಕಿಸ್ತಾನಿ ಸೈನಿಕರು ಝೋಜಿಲಾ ಮತ್ತು ಲೇಹ್ ನಡುವಿನ ಮುಷ್ಕೋಹ್, ದ್ರಾಸ್, ಕಾರ್ಗಿಲ್, ಬಟಾಲಿಕ್ ಮತ್ತು ತುರ್ತುಕ್ ಉಪ ವಲಯಗಳ ಒಳಗೆ ನುಗ್ಗಿದರು. ಗಡಿ ನಿಯಂತ್ರಣ ರೇಖೆಯನ್ನು ದಾಟಿ 4-10 ಕಿ.ಮೀ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಿದ್ದರು. ಚಳಿಗಾಲದಿಂದ ಖಾಲಿಯಾಗಿದ್ದ 130 ಭಾರತೀಯ ಪೋಸ್ಟ್‌ಗಳನ್ನು ಆಕ್ರಮಿಸಿಕೊಂಡಿದ್ದರು.
ಒಳನುಸುಳುವಿಕೆ ಯೋಜನೆ: ಯುದ್ಧತಂತ್ರದ ಯೋಜನೆಯೊಂದಿಗೆ ಪಾಕಿಸ್ತಾನ ಒಳನುಸುಳುವಿಕೆ ಯೋಜನೆ ರೂಪಿಸಿತ್ತು. ಇದು ಭಾರತೀಯ ಸೇನೆಗೆ ಸಂಪೂರ್ಣ ಆಶ್ಚರ್ಯ ಉಂಟುಮಾಡಿತ್ತು. ಪಾಕ್ ಕಾರ್ಯಾಚರಣೆಗಳ ಆರಂಭಿಕ ಹಂತವು ದ್ರಾಸ್-ಮುಷ್ಕೋ ಕಣಿವೆಯ ಎತ್ತರದಲ್ಲಿ ಮತ್ತು ಬಟಾಲಿಕ್- -ಯಲ್ಡೋರ್- ಚೋರ್ಬಟ್ಲಾ ಮತ್ತು ಟರ್ಟೋಕ್ ಆಕ್ಷಿಸ್ ಉದ್ದಕ್ಕೂ ಸಾಗಿತ್ತು.
- ದ್ರಾಸ್ ಮತ್ತು ಮುಷ್ಕೋಹ್ ಕಣಿವೆಯು ಗಡಿಗೆ ಹತ್ತಿರದಲ್ಲಿದ್ದು, ಪಾಕಿಸ್ತಾನಿ ಪಡೆಗಳು ಈ ಪ್ರದೇಶದ ತುದಿಯನ್ನು ಆಕ್ರಮಿಸಿಕೊಂಡಿದ್ದವು. ಮುಸ್ಕೊಹ್‌ನಲ್ಲಿ ಸ್ಥಾಪಿಸಲಾದ ಪೋಸ್ಟ್‌ಗಳನ್ನು ಕಾಶ್ಮೀರ ಕಣಿವೆ, ಕಿಶ್ತ್ವಾರ್-ಭದೇರ್ವಾ ಮತ್ತು ಹಿಮಾಚಲ ಪ್ರದೇಶದ ನೆರೆಹೊರೆಯ ಪ್ರದೇಶಗಳಿಗೆ ನುಸುಳಲು ನೆಲೆ ಮತ್ತು ಉಡಾವಣಾ ಪ್ಯಾಡ್‌ನಂತೆ ಬಳಸಿದ್ದರು.
- ಬಟಾಲಿಕ್-ಯಲ್ಡೋರ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಪಡೆಗಳು ಸಿಂಧೂ ನದಿಯ ಮೇಲೆ ಪ್ರಾಬಲ್ಯ ಸಾಧಿಸುವ ಯುದ್ಧತಂತ್ರದಿಂದ ತುದಿಯನ್ನು ಆಕ್ರಮಿಸಲು ಬಂದಿದ್ದರು. ಇದರಿಂದಾಗಿ ಈ ವಲಯವನ್ನು ಲೇಹ್‌ನಿಂದ ಪ್ರತ್ಯೇಕಿಸುವ ಹುನ್ನಾರವಾಗಿತ್ತು.
- ಚೋರ್ಬಟ್ಲಾ ಟರ್ಟೋಕ್ ಆಕ್ಷಿಸ್ ಉದ್ದಕ್ಕೂ ಪೋಸ್ಟ್‌ಗಳ ಆಕ್ರಮಣವು ಟರ್ಟೋಕ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಅನುಕೂಲವಾಗುವಂತೆ ಮತ್ತು ಈ ಪ್ರದೇಶದಲ್ಲಿ ಉಗ್ರಗಾಮಿತ್ವವನ್ನು ಸ್ಥಾಪಿಸುವುದಾಗಿತ್ತು.
- ಕಾರ್ಯಾಚರಣೆಯ ನಂತರದ ಮತ್ತೊಂದು ಹಂತವು ಹೆಚ್ಚು ಮಹತ್ವಾಕಾಂಕ್ಷೆಯದ್ದಾಗಿತ್ತು. ಇದರಲ್ಲಿ ದ್ರಾಸ್-ಮುಷ್ಕೋಹ್-ಕಕ್ಸರ್ ವಲಯಗಳಲ್ಲಿ ಒಳನುಗ್ಗುವಿಕೆಯೂ ಸೇರಿತ್ತು. ಆ ಮೂಲಕ ಭೂಪ್ರದೇಶದ ಮೇಲೆ ಹಿಡಿದ ಸಾಧಿಸುವುದು ಮತ್ತು ಶ್ರೀನಗರ-ಲೇಹ್ ಹೆದ್ದಾರಿಯನ್ನು ಸಂಪೂರ್ಣವಾಗಿ ರದ್ದು ಮಾಡುವ ಕುತಂತ್ರವಾಗಿತ್ತು.
- ಒಳನುಸುಳಿಕೆಯನ್ನು ಎಫ್ಸಿಎಸ್ಎ (ಫೋರ್ಸ್ ಕಮಾಂಡ್ ನಾರ್ದರ್ನ್ ಪ್ರದೇಶ) ಪಡೆಯೊಂದಿಗೆ ಲಭ್ಯವಿರುವ ತುಕುಡಿಗಳ ಮೂಲಕ ನಡೆಸಲಾಗಿತ್ತು. ಎಫ್‌ಸಿಎನ್‌ಎ ಹೊರಗಿನ ಬೆಟಾಲಿಯನ್‌ಗಳನ್ನು ಒಳನುಗ್ಗುವ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ನಂತರದ ಹಂತದಲ್ಲಿ ನಾರ್ದರ್ನ್ ಲೈಟ್ ಪದಾತಿದಳದ ಬೆಟಾಲಿಯನ್‌ಗಳು ಭಾರೀ ಗಾಯಗಳನ್ನು ಅನುಭವಿಸಿದ್ದವು.
- ಈ ಪ್ರದೇಶದಲ್ಲಿ ಫಿರಂಗಿ ನಿರ್ಮಾಣ ಮಾಡಲಾಗಿತ್ತು. ಇದು ಮುಂಬರುವ ಕಾರ್ಯಾಚರಣೆಯ ಉತ್ತಮ ಸೂಚಕವಾಗಿತ್ತು. ಟ್ರಾನ್ಸ್-ಎಲ್‌ಸಿ ಗುಂಡಿನ ದಾಳಿ ನೆಪದಲ್ಲಿ ಪಾಕಿಸ್ತಾನವು ತುಂಬಾ ಸಮಯದವರೆಗೆ ಸಾಕಷ್ಟು ಫಿರಂಗಿಗಳನ್ನು ನಿರ್ಮಿಸಿತ್ತು.
- ಇದರ ಜೊತೆಗೆ, ಪಾಕಿಸ್ತಾನ ಉತ್ತಮ ರೇಡಿಯೊ ಲೈನ್ ಸಂವಹನಗಳ ಬಳಕೆಯಿಂದಲೂ ಆಶ್ಚರ್ಯವನ್ನುಂಟು ಮಾಡಿತ್ತು. ಸಂವಹನ ಸಂದರ್ಭದಲ್ಲಿ ಭಾರತೀಯರು ಅಡ್ಡಿಪಡಿಸುತ್ತಿದ್ದರು. ಆದರೆ, ಉಪಭಾಷೆಯ ಸಂಭಾಷಣೆಯಿಂದ ಅದು ಅರ್ಥವಾಗುತ್ತಿರಲಿಲ್ಲ.