ಪಲಮು (ಜಾರ್ಖಂಡ್): ಲತೇಹಾರ್‌ನ ಕುಮುಂಡಿಹ್‌ನಲ್ಲಿ ಸಂಭವಿಸಿದ ರೈಲು ಅಪಘಾತ ನಡೆದ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ಚಹಾ ಮಾರುವ ವ್ಯಕ್ತಿ, ರೈಲಿನಲ್ಲಿ ಸಿಲುಕಿಕೊಂಡಿದ್ದ ಅನೇಕ ಪ್ರಯಾಣಿಕರನ್ನು ದೇವರಂತೆ ಕಾಪಾಡಿದ್ದಾನೆ. ಹೌದು, ಚಹಾ ಮಾರುವವನು ಅನೇಕ ಪ್ರಯಾಣಿಕರ ಜೀವ ಉಳಿಸಿದ್ದಾನೆ.
ಜಾರ್ಖಂಡ್ನ ಲತೇಹರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ರೈಲು ಅಪಘಾತ ನಡೆದಿದೆ. ಈ ಘಟನೆಯಲ್ಲಿ ಈವರೆಗೆ ಇಬ್ಬರು ಪುರುಷರು, ಒಬ್ಬ ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ಧಾರೆ. ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಬನಾರಸ್- ರಾಂಚಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಇಲ್ಲಿನ ಕುಮಾಂಡಿಹ್ ರೈಲು ನಿಲ್ದಾಣ ತಲುಪಿದ ತಕ್ಷಣವೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ವ್ಯಕ್ತಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ, ಇತರರಿಗೆ ಎಚ್ಚರಿಸಿದ್ದಾರೆ. ಈ ವಿಚಾರ ಕಾಳ್ಗಿಚ್ಚಿನಂತೆ ಹಬ್ಬಿದ್ದರಿಂದ ಪ್ರಯಾಣಿಕರು ಆತಂಕದಿಂದ ರೈಲಿನಿಂದ ಕೆಳಗಿಳಿದು ಓಡಲಾರಂಭಿಸಿದ್ದಾರೆ.
ಇದೇ ಸಮಯದಲ್ಲಿ ಎದುರುಗಡೆಯಿಂದ ಗೂಡ್ಸ್ ರೈಲು ಬಂದಿದೆ. ವದಂತಿ ಕೇಳಿ ನೂಕುನುಗ್ಗಲು ಉಂಟಾಗಿದೆ. ಕೆಲವರು ರೈಲಿನಿಂದ ಕೆಳಗಿಳಿದು ಪಕ್ಕದ ಹಳಿಗೆ ತೆರಳಿದ್ದಾರೆ. ಆಗ ಪಕ್ಕದ ಹಳಿಯಲ್ಲಿ ಹಾದು ಹೋಗುತ್ತಿದ್ದ ಗೂಡ್ಸ್ ಟ್ರೈನ್ ಪ್ರಯಾಣಿಕರಿಗೆ ಢಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ.