ಜಬಲ್ಪುರ(ಮಧ್ಯಪ್ರದೇಶ): ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನವನ್ನು ಇಂದು ಮತ್ತು ನಾಳೆ ಜಬಲ್ಪುರದಲ್ಲಿ ಆಯೋಜಿಸಲಾಗಿದೆ. ದೇಶಾದ್ಯಂತ 350 ಶ್ವಾನಗಳು ಡಾಗ್ ಶೋನಲ್ಲಿ ಭಾಗವಹಿಸುತ್ತಿವೆ. ಇಲ್ಲಿಗೆ ದೇಶದ ಹಲವು ರಾಜ್ಯಗಳಿಂದ ಶ್ವಾನಗಳು ಆಗಮಿಸುತ್ತಿರುವುದು ವಿಶೇಷವಾಗಿದೆ.
ಶ್ವಾನ ಪ್ರದರ್ಶನಕ್ಕೆ ಭಾರತದ ಇಬ್ಬರು ಮತ್ತು ಆಸ್ಟ್ರೇಲಿಯಾದ ಒಬ್ಬರು ತೀರ್ಪುಗಾರರಾಗಿದ್ದಾರೆ. ಪ್ರದರ್ಶನದಲ್ಲಿ ಭಾರತದಲ್ಲಿ ಕಂಡುಬರುವ ಸುಮಾರು 35 ದೇಶಿ ಮತ್ತು ವಿದೇಶಿ ತಳಿಯ ಸುಮಾರು 300ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸುತ್ತಿವೆ. ಜಬಲ್ಪುರದ ಕೆನಾಲ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶ್ವಾನ ಪ್ರದರ್ಶನ ನಡೆಯುತ್ತಿದೆ.
ಕೆನಾಲ್ ಕ್ಲಬ್ ಕಾರ್ಯದರ್ಶಿ ಡಾ.ಅಂಕುರ್ ಚೌಧರಿ ಮಾತನಾಡಿ, "ಈ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಶೆಫರ್ಡ್ ಶ್ವಾನ ಭಾಗವಹಿಸುತ್ತಿದೆ. ರಾಂಪುರ್ ಗ್ರೇಹೌಂಡ್ ತಳಿಯ ಶ್ವಾನಗಳು ಪ್ರಯಾಗ್ರಾಜ್ನಿಂದ ಬರುತ್ತಿವೆ. ದಕ್ಷಿಣ ಭಾರತದ ರಾಜಪಾಳ್ಯಂ ಶ್ವಾನಗಳು ಪ್ರದರ್ಶನಕ್ಕೆ ಆಗಮಿಸುತ್ತಿವೆ" ಎಂದು ತಿಳಿಸಿದರು.
ಪಂಜಾಬ್‌ನ ಯೋಗೇಶ್ ತುತೇಜಾ ಅವರನ್ನು ವಿವಿಧ ತಳಿಯ ಶ್ವಾನ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ. ಅವರು ದೇಶ ಮತ್ತು ವಿದೇಶಗಳಲ್ಲಿ ಅನೇಕ ಶ್ವಾನ ಪ್ರದರ್ಶನಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಜಬಲ್ಪುರ್ ಶ್ವಾನ ಪ್ರರ್ದಶನ (ಕೆನಾಲ್ ಕ್ಲಬ್) ತೀರ್ಪುಗಾರ ಯೋಗೇಶ್ ತುತೇಜಾ ಮಾತನಾಡಿ, "ಶ್ವಾನ ಸಾಕಣೆ ಆಧ್ಯಾತ್ಮಿಕ ಅಭ್ಯಾಸವಿದ್ದಂತೆ, ಶ್ವಾನ ತಳಿಯನ್ನು ಆಯ್ಕೆ ಮಾಡುವಾಗ ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಶ್ವಾನಗಳನ್ನು ಮನೆಯೊಳಗೆ ಅಥವಾ ಮನೆಯ ಹೊರಗೆ, ತೋಟಗಳಲ್ಲಿ ಸಾಕಲು ಬಯಸುತ್ತೇವೆಯೇ ಮತ್ತು ಶ್ವಾನದ ಉತ್ತಮ ತಳಿಯದ್ದೇ ಎಂದು ನಿರ್ಣಯಿಸಬೇಕಾಗುತ್ತದೆ. ಪ್ರದರ್ಶನದಲ್ಲಿ ಶ್ವಾನ ಆರೋಗ್ಯ ಮತ್ತು ಅದರ ಶಿಸ್ತನ್ನು ಸಹ ಪರೀಕ್ಷಿಸಲಾಗುತ್ತದೆ. ಇದರ ಆಧಾರದ ಮೇಲೆ, ಯಾವ ಶ್ವಾನ ವಿಶೇಷ ಎಂದು ನಿರ್ಧರಿಸಲಾಗುತ್ತದೆ" ಎಂದರು.
"ಹಿಂದೆ ಶ್ವಾನಗಳನ್ನು ಬೇಟೆ, ಕಾವಲು ಸೇರಿದಂತೆ ಮುಂತಾದ ಅವಶ್ಯಕತೆಗಾಗಿ ಸಾಕುತ್ತಿದ್ದರು, ಆದರೆ ಈಗ ಅದು ಹವ್ಯಾಸವಾಗಿ ಮಾರ್ಪಟ್ಟಿದೆ. ಶ್ವಾನಗಳನ್ನು ಸಾಕುವ ಆಸಕ್ತಿ ಹೊಂದಿರುವವರಿಗೆ ಇಂತಹ ಶ್ವಾನ ಪ್ರದರ್ಶನಗಳು ಮಾಹಿತಿ ನೀಡಲಿವೆ. ಒಳ್ಳೆಯ ಸಂಗತಿ ಎಂದರೆ, ದೇಶಿ ತಳಿಯ ಶ್ವಾನಗಳನ್ನೂ ಜನರು ಪ್ರೀತಿಯಿಂದ ಸಾಕುತ್ತಿದ್ದಾರೆ. ಇವುಗಳಿಗೆ ದೇಶ ಮಾತ್ರವಲ್ಲದೆ, ಹೊರ ದೇಶಗಳಲ್ಲೂ ಬೇಡಿಕೆ ಹೆಚ್ಚಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಹಿಳೆಯರು: ಪ್ರಕರಣ ದಾಖಲು