ಕರ್ನಾಟಕ

karnataka

ETV Bharat / bharat

ವಿಶೇಷ ಸ್ಥಾನಮಾನ ಮರು ಸ್ಥಾಪನೆ; ಕೇಂದ್ರದ ಮುಂದೆ ನಿರ್ಣಯ ಪ್ರಸ್ತುತಪಡಿಸಲಿರುವ J&K ಸರ್ಕಾರ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ನಿರ್ಣಯವನ್ನು ಕೇಂದ್ರ ಸರ್ಕಾರದ ಪರಿಗಣನೆಗೆ ನೀಡಲು ಜೆ & ಕೆ ಸರ್ಕಾರ ಮುಂದಾಗಿದೆ.

Chief Minister Omar Abdullah
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (ANI and ETV Bharat)

By ETV Bharat Karnataka Team

Published : Nov 9, 2024, 4:20 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸೆಕ್ರೆಟರಿಯೇಟ್ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಪರಿಗಣನೆಗೆ ನೀಡುವ ಮೊದಲು 'ಅಗತ್ಯ ಕ್ರಮ'ಕ್ಕಾಗಿ ಮುಖ್ಯ ಕಾರ್ಯದರ್ಶಿ ಮುಂದಿಡಲಾಗಿದೆ.

ಉಪ ಮುಖ್ಯಮಂತ್ರಿ ಸುರಿಂದರ್​ ಚೌಧರಿ, ಮಧ್ಯಂತರ ಅಧಿವೇಶನದಲ್ಲಿ ಮಂಗಳವಾರ ವಿಶೇಷ ಸ್ಥಾನಮಾನ ಮರುಸ್ಥಾಪನೆ ಕುರಿತು ನಿರ್ಣಯ ಮಂಡಿಸಿದ್ದರು. 90 ಸದಸ್ಯರ ಶಾಸಕಾಂಗ ಸಭೆಯಲ್ಲಿ ಬಹುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯವು ಆರ್ಟಿಕಲ್ 370 ಮರುಸ್ಥಾಪಿಸಲು ಪ್ರಯತ್ನಿಸಿತು. ಇದನ್ನು ಆಗಸ್ಟ್ 2019 ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಏಕಪಕ್ಷೀಯವಾಗಿ ರದ್ದುಗೊಳಿಸಿತ್ತು.

ಜಮ್ಮು ಮತ್ತು ಕಾಶ್ಮೀರದ ಚುನಾಯಿತ ಪ್ರತಿನಿಧಿಗಳೊಂದಿಗೆ ಈ ಪ್ರದೇಶದ ಸಾಂವಿಧಾನಿಕ ಸುರಕ್ಷತೆಗಳನ್ನು ಮರುಸ್ಥಾಪಿಸಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ರೂಪಿಸಲು, ಭಾರತ ಸರ್ಕಾರವು ಸಂವಾದವನ್ನು ಪ್ರಾರಂಭಿಸುವಂತೆ ಒತ್ತಾಯಿಸಿದೆ.

ಒಂದು ಮೂಲದ ಪ್ರಕಾರ, ಜಮ್ಮು & ಕಾಶ್ಮೀರ ಸರ್ಕಾರ ನಿರ್ಣಯವನ್ನು ಕೇಂದ್ರ ಸರ್ಕಾರದ ಎದುರು ಪ್ರಸ್ತುತಪಡಿಸುವ ವಿಧಾನಗಳ ಕುರಿತು ಇನ್ನೂ ಕೆಲಸ ಮಾಡಬೇಕಿದೆ ಮತ್ತು ಈ ಬಗ್ಗೆ ಮುಂದಿನ ವಾರ ನಿರ್ಧರಿಸಲಾಗುತ್ತದೆ. ನಿರ್ಣಯ ಅಂಗೀಕಾರದ ವಿರುದ್ಧ ಭಾರತೀಯ ಜನತಾ ಪಕ್ಷದ ಶಾಸಕರ ಗದ್ದಲದ ನಡುವೆಯೇ ಆರು ವರ್ಷಗಳ ಅವಧಿಯ ನಂತರ ವಿಧಾನಸಭೆಯ ಚೊಚ್ಚಲ ಐದು ದಿನಗಳ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದೆ.

"ಅದನ್ನು ಕಳುಹಿಸುವ ಪ್ರಕ್ರಿಯೆಯನ್ನು (ರೆಸಲ್ಯೂಶನ್) ಮುಂದಿನ ವಾರ ನಿರ್ಧರಿಸಲಾಗುತ್ತದೆ" ಎಂದು ಮೂಲವೊಂದು ಈಟಿವಿ ಭಾರತ್​​ಗೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದೆ ಮಂಡನೆ: ಕಳೆದ ತಿಂಗಳು, ಸರ್ಕಾರದ ಚೊಚ್ಚಲ ಕ್ಯಾಬಿನೆಟ್ ಸಭೆಯಲ್ಲಿ ಅಂಗೀಕರಿಸಿದ ರಾಜ್ಯ ಸ್ಥಾನಮಾನದ ನಿರ್ಣಯವನ್ನು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಮಂಡಿಸಿದರು.

ಅಂತೆಯೇ, ಈ ಬಾರಿ ಅಬ್ದುಲ್ಲಾ ಸರ್ಕಾರದ ಕೆಲವು ಪ್ರತಿನಿಧಿಗಳು ಅದನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತುತಪಡಿಸಲು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಶಾಸಕಾಂಗದ ಅಸಮ್ಮತಿ: ಸದನದ ನಿಯಮ 188 ರ ಅಡಿ ಅಂಗೀಕರಿಸಲಾದ ನಿರ್ಣಯಕ್ಕೆ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಅನುಮತಿ ಅಗತ್ಯವಿಲ್ಲ ಎಂದು ಕಾನೂನು ತಜ್ಞ ಮುಹಮ್ಮದ್ ಇಶಾಕ್ ಖಾದ್ರಿ ವಿವರಿಸಿದ್ದಾರೆ. ಅವರ ಪ್ರಕಾರ, ನಿರ್ಣಯವು ಜನರನ್ನು ಪ್ರತಿನಿಧಿಸುವ ಶಾಸಕಾಂಗದ ಅಸಮ್ಮತಿಯನ್ನು ಪ್ರತಿಬಿಂಬಿಸುತ್ತದೆ. ಇನ್ನು ಆಗಸ್ಟ್ 2019 ರಲ್ಲಿ ಸಂಸತ್ತು 370 ನೇ ವಿಧಿಯನ್ನು ರದ್ದುಗೊಳಿಸಿತ್ತು.

ಇದನ್ನೂ ಓದಿ :ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 3ನೇ ದಿನವೂ ಗದ್ದಲ; ಪ್ರತಿಪಕ್ಷಗಳ 12 ಶಾಸಕರನ್ನು ಹೊರಹಾಕಿದ ಸ್ಪೀಕರ್

ABOUT THE AUTHOR

...view details