ಕರ್ನಾಟಕ

karnataka

ETV Bharat / bharat

ವಿಧಾನಸಭೆ ಚುನಾವಣೆ ಫಲಿತಾಂಶ; ಹರಿಯಾಣದಲ್ಲಿ ಬಿಜೆಪಿ ಮುನ್ನಡೆ, ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿ ಕಮಾಲ್​

Assembly Polls Result: ಜಮ್ಮು ಮತ್ತು ಕಾಶ್ಮೀರ ಹಾಗು ಹರಿಯಾಣದಲ್ಲಿ ಮತ ಎಣಿಕೆ ನಡೆಯುತ್ತಿದೆ. ಆರಂಭದಿಂದ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಈಗ ಮುನ್ನಡೆ ಕಂಡಿದೆ. ಕಾಶ್ಮೀರದಲ್ಲಿ ಕಾಂಗ್ರೆಸ್​ ಮತ್ತು ಅದರ ಮಿತ್ರಪಕ್ಷಗಳು ಮುನ್ನಡೆ ಸಾಧಿಸಿವೆ.

By PTI

Published : 7 hours ago

Updated : 6 hours ago

TIGHT SECURITY  COUNTING OF VOTES BEGAN  ASSEMBLY CONSTITUENCIES  J AND K AND HARYANA
ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ ಮತ ಎಣಿಕೆ ಆರಂಭ (ANI)

Assembly Polls Result: ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಹರಿಯಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆರಂಭದಿಂದ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್​ ಅಲ್ಪ ಹಿನ್ನಡೆ ಕಂಡಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಮತ ಎಣಿಕೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಹರಿಯಾಣದಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್​ ಈಗ ಹಿನ್ನಡೆ ಅನುಭವಿಸಿದೆ. ಜಮ್ಮು ಕಾಶ್ಮೀರದಲ್ಲಿ ಎನ್​ ಸಿ ಮತ್ತು ಕಾಂಗ್ರೆಸ್​ ಮೈತ್ರಿ ಪಕ್ಷಗಳು ಮುನ್ನಡೆ ಕಾಯ್ದುಕೊಂಡಿವೆ.

ಹರಿಯಾಣದಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ಫಿಗರ್ 46 ಸೀಟ್​ಗಳನ್ನು ದಾಟಬೇಕು. ಜಮ್ಮು ಮತ್ತು ಕಾಶ್ಮೀರದಲ್ಲೂ 90 ವಿಧಾನಸಭಾ ಸ್ಥಾನಗಳಿವೆ. ರಾಜ್ಯಪಾಲರು ಐವರು ಶಾಸಕರನ್ನು ನಾಮನಿರ್ದೇಶನ ಮಾಡುತ್ತಾರೆ. ಆಗ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ 95ಕ್ಕೆ ಏರಲಿದೆ. ಚುನಾಯಿತ ಶಾಸಕರಿಗಷ್ಟೇ ಮತದಾನದ ಹಕ್ಕು ಇದ್ದು, ನಾಮನಿರ್ದೇಶಿತ ಸದಸ್ಯರಿಗೂ ನೀಡಿದರೆ ಸರ್ಕಾರ ರಚಿಸಲು 48 ಸದಸ್ಯರ ಬೆಂಬಲ ಬೇಕಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ ಎಣಿಕೆ: 90 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆಯಲ್ಲಿ ಎನ್​ಸಿ - 42 ಸ್ಥಾನ, ಕಾಂಗ್ರೆಸ್​ - 9 ಮತ್ತು ಬಿಜೆಪಿ 23 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸರ್ಕಾರ ರಚನೆ ವಿಶ್ವಾಸ:ಇಂದಿನ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ರಾಜ್ಯಾಧ್ಯಕ್ಷ ರವಿಂದರ್​ ರೈನಾ, ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆದು ಕಣಿವೆ ರಾಜ್ಯದಲ್ಲಿ ಸರ್ಕಾರ ರಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಲಿತಾಂಶದ ದಿನವಾದ ಇಂದು ಅವರು ಯಾಗದಲ್ಲಿ ಪಾಲ್ಗೊಂಡು, ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ಸ್ವತಂತ್ರವಾಗಿ 30 ರಿಂದ 35 ಸ್ಥಾನಗಳನ್ನು ಗೆಲ್ಲಲಿದ್ದು, ಸರ್ಕಾರ ರಚಿಸಲು ತಮ್ಮ ಮಿತ್ರ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಕೋರುವುದಾಗಿ ಅವರು ತಿಳಿಸಿದರು.

ಚುನಾವಣಾ ಆಯೋಗದ ಅಧಿಕಾರಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ 20 ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ 90 ಕ್ಷೇತ್ರಗಳಲ್ಲಿ ಒಟ್ಟು 873 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 63.45 ರಷ್ಟು ಮತದಾನವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು.

ಹರಿಯಾಣದಲ್ಲಿ ಮತ ಎಣಿಕೆ ಕಾರ್ಯ: ಮುಂದಿನ 5 ವರ್ಷಗಳವರೆಗೆ ಹರಿಯಾಣವನ್ನು ಯಾರು ಆಳುತ್ತಾರೆ ಎಂದ ಸ್ಪಷ್ಟ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಆರಂಭಿಕ ಫಲಲಿತಾಂಶದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್​ ಭರ್ಜರಿ ಮುನ್ನಡೆ ಸಾಧಿಸಿತ್ತು. ಆದರೆ ಫಲಿತಾಂಶದ ಹಾವು ಏಣಿ ಆಟದಲ್ಲಿ ಸದ್ಯ ಕೈ ಪಡೆ ಹಿನ್ನಡೆ ಕಂಡಿದೆ. ಈಗ ಬಿಜೆಪಿ ಕಮಾಲ್​ ಮಾಡುತ್ತಿದ್ದು, 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಅಕ್ಟೋಬರ್ 5 ರಂದು ಹರಿಯಾಣದ ಎಲ್ಲಾ 90 ಸ್ಥಾನಗಳಲ್ಲಿ 67.90 ಶೇಕಡಾ ಮತದಾನವಾಗಿತ್ತು. ಹರಿಯಾಣ ಚುನಾವಣೆಯಲ್ಲಿ ಒಟ್ಟು 1,031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 464 ಸ್ವತಂತ್ರ ಅಭ್ಯರ್ಥಿಗಳು ಮತ್ತು 101 ಮಹಿಳೆಯರು ಸೇರಿದ್ದಾರೆ.

ಹರಿಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆ ತಲೆಕೆಳಗಾಗಿದೆ. ಆಡಳಿತ ವಿರೋಧಿ ಅಲೆ ಕಂಡುಬಂದಿದೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳ ಭರವಸೆ ಇಲ್ಲೂ ಕೂಡ ಕಾಂಗ್ರೆಸ್ ಕೈಹಿಡಿದಿದೆ. ಅಧಿಕಾರ ತಮ್ಮದಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.

ಓದಿ:ಇಂದು ಹರಿಯಾಣ, ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ: ಯಾರಿಗೆ ಸಿಹಿ-ಕಹಿ? - ELECTION RESULTS

Last Updated : 6 hours ago

ABOUT THE AUTHOR

...view details