ಕರ್ನಾಟಕ

karnataka

ETV Bharat / bharat

ಕಡಿಮೆ ದರದಲ್ಲಿ ತಿರುಪತಿಗೆ ಹೋಗಬೇಕೆಂದು ಬಯಸಿದ್ದೀರಾ?: ಹಾಗಾದ್ರೆ ಇಲ್ಲಿದೆ ನೋಡಿ IRCTC ಬೆಸ್ಟ್​ ಪ್ಯಾಕೇಜ್​ - Tirupati Tour Package - TIRUPATI TOUR PACKAGE

ಐಆರ್​ಸಿಟಿಸಿ ಕಡಿಮೆ ದರದಲ್ಲಿ 3 ದಿನಗಳ ಕಾಲ ತಿರುಪತಿ ಪ್ರವಾಸದ ಪ್ಯಾಕೇಜ್​ ಘೋಷಿಸಿದೆ. ​

IRCTC ತಿರುಪತಿ ಪ್ಯಾಕೇಜ್
IRCTC ತಿರುಪತಿ ಪ್ಯಾಕೇಜ್

By ETV Bharat Karnataka Team

Published : Apr 25, 2024, 2:01 PM IST

ಹೈದರಾಬಾದ್​:ಕಡಿಮೆ ಖರ್ಚಿನಲ್ಲಿ ತಿರುಪತಿಗೆ ಹೋಗಲು ಬಯಸಿದ್ದವರು ಐಆರ್​ಸಿಟಿಸಿಯ ಈ ಹೊಸ ಪ್ಯಾಕೆಜ್​ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. "ಗೋವಿಂದಂ" ಹೆಸರಿನಲ್ಲಿ ಹೈದರಾಬಾದ್‌ನಿಂದ ತಿರುಪತಿಗೆ ವಿಶೇಷ ಟೂರ್ ಪ್ಯಾಕೇಜ್ ಅನ್ನು ಐಆರ್​ಸಿಟಿಸಿ ಘೋಷಿಸಿದೆ.

ಗೋವಿಂದಂ ತಿರುಪತಿ ಟೂರ್ ಪ್ಯಾಕೇಜ್: 'ಗೋವಿಂದಂ' ಹೆಸರಿನ ಈ ಟೂರ್ ಪ್ಯಾಕೇಜ್ 2 ರಾತ್ರಿ ಸೇರಿ 3 ದಿನಗಳನ್ನು ಒಳಗೊಂಡಿದೆ. ಇದರಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನ, ಪದ್ಮಾವತಿ ದೇವಸ್ಥಾನ, ಗೋವಿಂದರಾಜ ಸ್ವಾಮಿ ದರ್ಶನವು ಇರಲಿದೆ. ಹಾಗೆಯೇ ಶ್ರೀವಾರಿ ವಿಶೇಷ ದರ್ಶನಂ ಟಿಕೆಟ್ ಕೂಡ ಇದು ಹೊಂದಿದೆ. ಈ ಪ್ರಯಾಣವು ಹೈದರಾಬಾದ್‌ನ ಲಿಂಗಂಪಲ್ಲಿ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದೆ.

ಪ್ರವಾಸದ ಮೊದಲ ದಿನ:ಹೈದರಾಬಾದ್‌ನ ಲಿಂಗಂಪಲ್ಲಿ ರೈಲು ನಿಲ್ದಾಣದಿಂದ ಸಂಜೆ 5 ಗಂಟೆ 25 ನಿಮಿಷಕ್ಕೆ ಟ್ರೈನ್ ಹೊರಡುತ್ತದೆ. ನಂತರ 6 ಗಂಟೆ 10 ನಿಮಿಷಕ್ಕೆ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣ, 7.38 ನಿಮಿಷಕ್ಕೆ ನಲ್ಗೊಂಡಕ್ಕೆ ತಲುಪಲಿದೆ. ನಂತರ ಇಡೀ ರಾತ್ರಿ ಪ್ರಯಾಣ ಮುಂದುವರೆಯುತ್ತದೆ.

ಎರಡನೇ ದಿನ: ಬೆಳಗ್ಗೆ 5:55ಕ್ಕೆ ರೈಲು ತಿರುಪತಿ ತಲುಪಲಿದೆ. ಅಲ್ಲಿಂದ ಐಆರ್‌ಸಿಟಿಸಿ ಬಸ್​ನಲ್ಲಿ ಪ್ರಯಾಣಿಕರನ್ನು ತ್ರಿಸ್ಟಾರ್ ಹೋಟೆಲ್‌ಗೆ ಕರೆದೊಯ್ಯುಲಾಗುತ್ತದೆ. ಎಸಿ ಕೊಠಡಿ ಸೌಲಭ್ಯವೂ ಉಂಟು. ಹೋಟೆಲ್‌ನಲ್ಲಿ ಫ್ರಶಪ್​, ಟಿಫಿನ್ ಮುಗಿದ ನಂತರ, ಬೆಳಗ್ಗೆ 8 ಗಂಟೆಗೆ ಶ್ರೀವಾರಿ ವಿಶೇಷ ದರ್ಶನಕ್ಕಾಗಿ ತಿರುಮಲಕ್ಕೆ ಕರೆದೊಯ್ಯಲಾಗುತ್ತದೆ. ದರ್ಶನ ಮುಗಿದ ಬಳಿಕ ಊಟಕ್ಕೆ ಪುನಃ ತಿರುಪತಿಯಲ್ಲಿನ ಹೋಟೆಲ್​ಗೆ ಕರೆ ತರಲಾಗುತ್ತದೆ. ನಂತರ ತಿರುಚಾನೂರ್ ಪದ್ಮಾವತಿ ದೇವಸ್ಥಾನಕ್ಕೆ ದರ್ಶನಕ್ಕೆ ಕರೆದೊಯ್ಯಲಾಗುತ್ತದೆ. ಅದೇ ದಿನ, ತಿರುಪತಿ ರೈಲು ನಿಲ್ದಾಣದಿಂದ ಸಂಜೆ 6:25ಕ್ಕೆ ರಿಟರ್ನ್​ ಜರ್ನಿ ಆರಂಭವಾಗಲಿದ್ದು ಮರು ದಿನ ಬೆಳಗ್ಗೆ 6.55 ನಿಮಿಷಕ್ಕೆ ಲಿಂಗಪಲ್ಲಿಗೆ ತಲುಪುವ ಮೂಲಕ ಪ್ರವಾಸವು ಕೊನೆಗೊಳ್ಳಲಿದೆ.

ಟಿಕೆಟ್ ದರ:ಈ ಪ್ರವಾಸದ ದರವೂ ಒಬ್ಬ ವ್ಯಕ್ತಿಗೆ 3,800 ರೂಪಾಯಿ ನಿಗದಿಪಡಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ್ಳಿಗೆ ಉಚಿತ. ಈ ಪ್ರವಾಸಕ್ಕೆ ತೆರಳುವವರು ಕಡ್ಡಾಯವಾಗಿ ಒರಿಜಿನಲ್​ ಆಧಾರ್ ಕಾರ್ಡ್ ಹೊಂದಿರಲೇಬೇಕು.

ಇದನ್ನೂ ಓದಿ:F77 Mach-2 ಎಲೆಕ್ಟ್ರಿಕ್ ಮೋಟರ್ ಸೈಕಲ್ ಬಿಡುಗಡೆ: ವಿಶೇಷತೆ, ವಿನ್ಯಾಸ, ಬೆಲೆ- ಸಂಪೂರ್ಣ ವಿವರ - Electric Motorcycle

ABOUT THE AUTHOR

...view details