IRCTC Magical Madhya Pradesh Package: ಮಧ್ಯಪ್ರದೇಶ ದೇಶದ ಅತ್ಯುತ್ತಮ ಪ್ರವಾಸಿ ರಾಜ್ಯಗಳಲ್ಲಿ ಒಂದು. ಇಲ್ಲಿ ವೀಕ್ಷಿಸಲು ಅನೇಕ ಆಧ್ಯಾತ್ಮಿಕ, ಐತಿಹಾಸಿಕ, ವಿಶ್ವ ಪರಂಪರೆಯ ತಾಣಗಳು, ನೈಸರ್ಗಿಕ ಸೌಂದರ್ಯ ತಾಣ ಮತ್ತು ವನ್ಯಜೀವಿ ಅಭಯಾರಣ್ಯಗಳಿವೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಈ ಕೆಲವು ಸ್ಥಳಗಳನ್ನು ವೀಕ್ಷಿಸಲು ಟೂರ್ ಪ್ಯಾಕೇಜ್ ಘೋಷಿಸಿದೆ. ಮತ್ತು ಈ ಪ್ಯಾಕೇಜ್ ಯಾವಾಗ ಪ್ರಾರಂಭವಾಗುತ್ತದೆ? ಟೂರ್ ಪ್ಯಾಕೇಜ್‌ನ ಬೆಲೆ ಎಷ್ಟು? ಯಾವ ಸ್ಥಳಗಳನ್ನು ನೋಡಬಹುದು ಎಂಬುದರ ವಿವರಗಳು ಹೀಗಿವೆ.
ಪ್ಯಾಕೇಜ್‌ನ ಒಟ್ಟು ಅವಧಿ 5 ರಾತ್ರಿ ಮತ್ತು 6 ದಿನ. ಹೈದರಾಬಾದ್‌ನಿಂದ ರೈಲು ಪ್ರಯಾಣದ ಮೂಲಕ ನೀವು ಮಧ್ಯಪ್ರದೇಶದ ಸುತ್ತಲೂ ಪ್ರಯಾಣಿಸಬಹುದು. ಭೋಪಾಲ್, ಜಬಲ್ಪುರ್, ಪಚ್ಮರ್ಹಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.
ಹೀಗಿರುತ್ತೆ ಟೂರ್:
- ಸಂಪರ್ಕ ಕ್ರಾಂತಿ ರೈಲು ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣದಿಂದ ಮೊದಲ ದಿನ ಸಂಜೆ 4.40ಕ್ಕೆ ಹೊರಡಲಿದೆ. ಇಡೀ ರಾತ್ರಿ ಪ್ರಯಾಣ ಇರುತ್ತದೆ.
- ಎರಡನೇ ದಿನ ಬೆಳಗ್ಗೆ 8 ಗಂಟೆಗೆ ರೈಲು ಭೋಪಾಲ್ ತಲುಪುಲಿದೆ. ನಿಮ್ಮನ್ನು ಅಲ್ಲಿಂದ ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಫ್ರೆಶ್ ಆದ ನಂತರ ಸಾಂಚಿಗೆ ತೆರಳುವುದು. ಸಾಂಚಿ ಸ್ತೂಪಕ್ಕೆ ಭೇಟಿ.
- ನಂತರ ಭೋಜೇಶ್ವರ ಮಹಾದೇವ ದೇವಸ್ಥಾನಕ್ಕೆ ಭೇಟಿ. ಭೋಪಾಲ್ಗೆ ಹಿಂತಿರುಗಿ ಸಂಜೆ ಬುಡಕಟ್ಟು ವಸ್ತು ಸಂಗ್ರಹಾಲಯಕ್ಕೆ ಭೇಟಿ. ಅಂದು ರಾತ್ರಿ ಭೋಪಾಲ್ನಲ್ಲಿ ತಂಗುವುದು.
- ಮೂರನೇ ದಿನ, ಹೋಟೆಲ್‌ನಲ್ಲಿ ಉಪಹಾರದ ನಂತರ, ಪಚ್ಮರ್ಹಿಗೆ ಹೊರಡಬೇಕಾಗುತ್ತದೆ. ಅಲ್ಲಿಯ ಹೋಟೆಲ್‌ನಲ್ಲಿ ಚೆಕ್ ಔಟ್ ಆದ ನಂತರ ಬಿಡುವಿನ ವೇಳೆಯಲ್ಲಿ ಅಲ್ಲಿನ ಸ್ಥಳಗಳನ್ನು ನೋಡಬಹುದು. ಅದರ ನಂತರ, ರಾತ್ರಿ ಹೋಟೆಲ್‌ನಲ್ಲಿ ತಂಗಬೇಕಾಗುತ್ತದೆ.
- ನಾಲ್ಕನೇ ದಿನ, ಉಪಹಾರದ ನಂತರ, ಪಂಚ ಪಾಂಡವ್ ಗುಹೆಗಳು ಮತ್ತು ಜಟಾ ಶಂಕರ್ ದೇವಾಲಯ ಭೇಟಿ. ಬಿ ಫಾಲ್ಸ್ ಮತ್ತು ಸನ್‌ಸೆಟ್ ಪಾಯಿಂಟ್‌ಗಳ ವೀಕ್ಷಣೆ. ಅದರ ನಂತರ ಹೋಟೆಲ್‌ಗೆ ಹಿಂತಿರುಗಿ ರಾತ್ರಿ ಅಲ್ಲಿಯೇ ತಂಗುವುದು.
- ಐದನೇ ದಿನದ ಉಪಹಾರದ ನಂತರ, ಜಬಲ್ಪುರಕ್ಕೆ ಹೊರಡುವುದು. ಹೋಟೆಲ್ ಚೆಕ್ ಔಟ್ ಆದ ನಂತರ ಮಧ್ಯಾಹ್ನ ಮಾರ್ಬಲ್ ರಾಕ್ಸ್ ಮತ್ತು ಧುಂಧರ್ ಜಲಪಾತಗಳಿಗೆ ಭೇಟಿ ನೀಡುವುದು.
- ಬಳಿಕ ಜಬಲ್‌ಪುರ ರೈಲು ನಿಲ್ದಾಣದಲ್ಲಿ ಬಿಡುತ್ತಾರೆ. ಅಲ್ಲಿಂದ ಸಿಕಂದರಾಬಾದ್‌ಗೆ ಹಿಂದಿರುಗುವ ಪ್ರಯಾಣ 2 ಗಂಟೆಗೆ ಪ್ರಾರಂಭವಾಗಲಿದೆ.
- ಆರನೇ ದಿನ ರಾತ್ರಿ 10 ಗಂಟೆಗೆ ಸಿಕಂದರಾಬಾದ್ ತಲುಪುವ ಮೂಲಕ ಪ್ರವಾಸ ಪೂರ್ಣಗೊಳ್ಳಲಿದೆ.