ಇಂದೋರ್ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮಲ ತಂದೆಗೆ ತ್ರಿವಳಿ ಜೀವಾವಧಿ ಶಿಕ್ಷೆ ವಿಧಿಸಿ ಇಂದೋರ್ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಜೊತೆಗೆ ಅಪರಾಧಿಗೆ 30,000 ದಂಡವನ್ನು ವಿಧಿಸಿದೆ.
ಏನಿದು ಘಟನೆ?: 2023ರ ಜನವರಿಯಲ್ಲಿ ಇಂದೋರ್ನ ಅಜಾದ್ ನಗರದಲ್ಲಿ ಈ ಪ್ರಕರಣ ಬೆಳಕಿದೆ ಬಂದಿದೆ. ಪರೀಕ್ಷಾ ಸಮಯದಲ್ಲಿ ಸಂತ್ರಸ್ತ ಬಾಲಕಿ ಶಾಲೆಯಲ್ಲಿ ಸಂಕಟ ಪಡುತ್ತಿದ್ದನ್ನು ಕಂಡ ಶಿಕ್ಷಕಿ ಆಕೆಯ ಆರೋಗ್ಯ ವಿಚಾರಿಸಲು ತೆರಳಿದಾಗ ಬಾಲಕಿ ಈ ಕುರಿತು ಶಿಕ್ಷಕಿಗೆ ತಿಳಿಸಿದ್ದಾಳೆ. ಬಾಲಕಿ ಮೇಲೆ ಮಲ ತಂದೆಯಿಂದ ಆಗುತ್ತಿದ್ದ ಭಯನಕ ದೌರ್ಜನ್ಯ ತಿಳಿದ ಶಿಕ್ಷಕಿ ಈ ಕುರಿತು ಸಂತ್ರಸ್ತ ತಾಯಿಗೆ ತಿಳಿಸಿದ್ದು, ಬಳಿಕ ಈ ಕುರಿತು ಇಂದೋರ್ ಪೊಲೀಸರಿಗೆ ಕೂಡ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ಐಪಿಸಿಯ ಹಲವು ಸೆಕ್ಷನ್ ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತ ತಾಯಿಯ ದೂರಿನ ಮೇರೆಗೆ ಮಲತಂದೆ ಬಂಧಿಸಿ, ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು.