ಕೋಲ್ಕತ್ತಾ(ಪಶ್ಚಿಮ ಬಂಗಾಳ):ದೇಶದ ಮೊದಲ ಜಲ ಸುರಂಗದ ಮೆಟ್ರೋ ಸೇವೆ ಮಾ.6 ರಂದು ಆರಂಭವಾಗಲಿದೆ. ಹೂಗ್ಲಿ ನದಿಯೊಳಗಿನ ಸುರಂಗ ಮಾರ್ಗದ ಮೂಲಕ ಹೌರಾ ಮತ್ತು ಎಸ್‌ಪ್ಲೇನೇಡ್ ನಡುವೆ ಮೆಟ್ರೋ ರೈಲು ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಯನ್ನು ಉದ್ಘಾಟಿಸಲಿದ್ದಾರೆ.
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕೋಲ್ಕತ್ತಾ ನಗರದಲ್ಲಿ ಮೆಟ್ರೋ ರೈಲು ಸೇವೆ ಅಕ್ಟೋಬರ್ 24 ರಂದು1984ರಲ್ಲಿ ಆರಂಭವಾಗಿತ್ತು. ಇದು ಮಹಾನಗರದ ಜೀವನಾಡಿಯಾಗಿ ಮಾರ್ಪಟ್ಟಿತು. ಮೆಟ್ರೋ ಅಧಿಕಾರಿಗಳ ಬಳಿ ಲಭ್ಯವಿರುವ ದಾಖಲೆಗಳ ಪ್ರಕಾರ, 1921 ರಲ್ಲಿ ಟ್ಯೂಬ್ ರೈಲ್ವೆ ಸೇವೆಯ ಮೂಲಕ ಹೌರಾವನ್ನು ಕೋಲ್ಕತ್ತಾದೊಂದಿಗೆ ಸಂಪರ್ಕಿಸುವ ಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿದವರು ಬ್ರಿಟಿಷರು. ಆದರೆ, ಆ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ನಂತರ 1969 ರಲ್ಲಿ ಮೆಟ್ರೋಪಾಲಿಟನ್ ಸಾರಿಗೆ ಯೋಜನೆ ಪರಿಕಲ್ಪನೆ ಪರಿಚಯಿಸಲಾಯಿತು. ಹಲವು ಚರ್ಚೆಗಳ ಬಳಿಕ, ಐದು ಪ್ರತ್ಯೇಕ ಮಾರ್ಗಗಳನ್ನು ಕೋಲ್ಕತ್ತಾದ ಮೆಟ್ರೋ ಜಾಲ ಎಂದು ನಿರ್ಧರಿಸಲಾಯಿತು.
ಹವುಗಳಲ್ಲಿ ಮೊದಲ ಮಾರ್ಗವು ಉತ್ತರ-ದಕ್ಷಿಣ ಕಾರಿಡಾರ್ ಆಗಿತ್ತು, ಇದು ಇಂದು ಉತ್ತರದಲ್ಲಿ ದಕ್ಷಿಣೇಶ್ವರದಿಂದ ದಕ್ಷಿಣದಲ್ಲಿ ನ್ಯೂ ಗರಿಯಾದವರೆಗೆ ವಿಸ್ತರಿಸಿದೆ, ಒಟ್ಟು 33 ಕಿ.ಮೀ. ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ಗೆ 2008ರಲ್ಲಿ ಕೇಂದ್ರದಲ್ಲಿನ ಯುಪಿಎ ಸರ್ಕಾರವು ಅನುಮೋದನೆ ನೀಡಿತ್ತು.
ಪೂರ್ವ - ಪಶ್ಚಿಮ ಮೆಟ್ರೋ ಕಾರಿಡಾರ್: ಈ ಕಾರಿಡಾರ್ನ ಹೊಸ ಮಾರ್ಗವನ್ನು ಸಾಲ್ಟ್ ಲೇಕ್ ಸೆಕ್ಟರ್ ಮತ್ತು ಹೌರಾ ಮೈದಾನದ ನಡುವೆ ಅಂದಾಜು 16.55 ಕಿ.ಮೀ. ಹೂಗ್ಲಿ ನದಿಗೆ ಅಡ್ಡಲಾಗಿ ಕೋಲ್ಕತ್ತಾ ಮತ್ತು ಹೌರಾ ಸೇರುವ ಮೊದಲ ಕಾಂಕ್ರೀಟ್ ಸೇತುವೆ ನಿರ್ಮಾಣ ಮಾಡಲಾಯಿತು.
ಹೌರಾ ಮೆಟ್ರೋ ನಿಲ್ದಾಣ: ಪೂರ್ವ-ಪಶ್ಚಿಮ ಕೋಲ್ಕತಾ ಮೆಟ್ರೋ ಕಾರಿಡಾರ್ ನ ಅತ್ಯಂತ ಆಳವಾದ ನಿಲ್ದಾಣ ಎಂದರೆ ಅದು ಹೌರಾ ಮೆಟ್ರೋ ನಿಲ್ದಾಣ. ಈ ನಿಲ್ದಾಣವು ಸುಮಾರು 10 ಅಂತಸ್ತಿನ ಕಟ್ಟಡದ ಎತ್ತರವಾಗಿದೆ. ಭಾರತದ ಹೌರಾ ಮೆಟ್ರೋ ನಿಲ್ದಾಣಕ್ಕಿಂತ ಆಳವಾದ ಏಕೈಕ ನಿಲ್ದಾಣ ಎಂದರೆ ದೆಹಲಿ ಮೆಟ್ರೋದ ಹೌಜ್ ಖಾಸ್ ನಿಲ್ದಾಣವಾಗಿದೆ.
ನೀರಿನೊಳಗೆ ಮೆಟ್ರೋ ವಿಸ್ತರಣೆ: ಹೂಗ್ಲಿ ನದಿಯ ಅಡಿಯಲ್ಲಿ ರೈಲುಗಳು ಚಲಿಸುವ ಸುರಂಗ ವ್ಯವಸ್ಥೆಯನ್ನು ಸಬ್‌ಕ್ವೆಯಸ್ ಸುರಂಗಗಳು ಎಂದು ಕರೆಯಲಾಗುತ್ತದೆ. ಸುರಂಗವನ್ನು ಬೋರಿಂಗ್ ಯಂತ್ರಗಳ ಸಹಾಯದಿಂದ ಎರಡು ಸಮಾನಾಂತರ ಸುರಂಗಗಳನ್ನು ಅಗೆಯಲಾಯಿತು, ನಂತರ ಭೂಮಿಯ ಒತ್ತಡವನ್ನು ನೀರಿನ ದ್ರವ್ಯರಾಶಿಯೊಂದಿಗೆ ಸಮತೋಲನಗೊಳಿಸಲಾಯಿತು. ಈ ಸುರಂಗದ ಉದ್ದ 520 ಮೀಟರ್ ಆಗಿದೆ ಮತ್ತು ಮೆಟ್ರೋ ರೈಲುಗಳು ಸುರಂಗದಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಬಹುದು. ಆರಂಭಿಕ ರೈಲ್ವೆ ಅಂದಾಜಿನ ಪ್ರಕಾರ, ಪೀಕ್ ಅವರ್ಗಳಲ್ಲಿ ಈ ಸುರಂಗದ ಮೂಲಕ ಸುಮಾರು 30,000 ಪ್ರಯಾಣಿಕರು ಪ್ರಯಾಣಿಸಲಿದ್ದಾರೆ ಮತ್ತು ನೀರಿನೊಳಗಿನ ಸರಾಸರಿ ಪ್ರಯಾಣದ ಸಮಯ 45 ಸೆಕೆಂಡುಗಳಾಗಿರಲಿದೆ.
ತುರ್ತು ಪರಿಸ್ಥಿತಿಯಿಂದ ಪಾರಾಗಲು ಇದೇ ವ್ಯವಸ್ಥೆ: ನೀರಿನೊಳಗಿನ ಮೆಟ್ರೋ ವಿಸ್ತರಣೆಯ ಪರಿಕಲ್ಪನೆಯನ್ನು ರೂಪಿಸುವಾಗ ತುರ್ತು ಸಂದರ್ಭಗಳು ಮತ್ತು ಪ್ರಯಾಣಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಯು ವಿನ್ಯಾಸಕರು ಮತ್ತು ಯೋಜಕರ ಮನಸ್ಸಿನಲ್ಲಿತ್ತು. ಹೀಗಾಗಿ ಎರಡೂ ಸುರಂಗಗಳ ಬದಿಗಳಲ್ಲಿ ಕಾಲುದಾರಿಗಳಿವೆ. ತುರ್ತು ಪರಿಸ್ಥಿತಿಯಲ್ಲಿ, ಪ್ರಯಾಣಿಕರನ್ನು ಕಾಲುದಾರಿಗಳನ್ನು ಬಳಸಿಕೊಂಡು ಸ್ಥಳಾಂತರಿಸಬಹುದು. ಸುರಂಗದ ಒಳಗೆ ಎಂಟು ಅಡ್ಡ ಮಾರ್ಗಗಳಿವೆ ಮತ್ತು ಸುಲಭ ಸ್ಥಳಾಂತರಕ್ಕಾಗಿ ಸುರಂಗಗಳೊಂದಿಗೆ ಪರಸ್ಪರ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ.
ಪೂರ್ವ-ಪಶ್ಚಿಮ ಮೆಟ್ರೋ ಸಂಪರ್ಕವು ಕೋಲ್ಕತ್ತಾದ ಪ್ರಮುಖ ಮೆಟ್ರೋ ಸಂಪರ್ಕಗಳಲ್ಲಿ ಒಂದಾಗಿದೆ. ಇದು ಮೆಟ್ರೋ ರೈಲಿನಲ್ಲಿ ನೀರೊಳಗಿನ ಪ್ರಯಾಣದ ವಿಶಿಷ್ಟ ಅನುಭವವನ್ನು ಒದಗಿಸುವುದಲ್ಲದೇ, ಈ ಮಾರ್ಗವು ಸೀಲ್ಡಾ ಮತ್ತು ಹೌರಾ ರೈಲ್ವೆ ಟರ್ಮಿನಲ್ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಇದು ಪ್ರಯಾಣಿಕರ ಸಂಖ್ಯೆಯಿಂದಾಗಿ ದೇಶದ ಎರಡನೇ ಅತ್ಯಂತ ಜನನಿಬಿಡ ನಿಲ್ದಾಣ ಎಂದು ಹೆಸರು ಪಡೆದಿದೆ.
ಇದನ್ನೂ ಓದಿ:ತೆಲಂಗಾಣ: ₹7,200 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ, ಶಂಕುಸ್ಥಾಪನೆ