ಕರ್ನಾಟಕ

karnataka

ETV Bharat / bharat

ಭಾರತ ಅಧಿಕೃತವಾಗಿ 'ಕಡು ಬಡತನ' ನಿರ್ಮೂಲನೆ ಮಾಡಿದೆ: ಬ್ರೂಕಿಂಗ್ಸ್ ವರದಿ - ಥಿಂಕ್ ಟ್ಯಾಂಕ್ ಬ್ರೂಕಿಂಗ್ಸ್ ವರದಿ

ಭಾರತ ಅಧಿಕೃತವಾಗಿ ಕಡು ಬಡತನವನ್ನು ನಿರ್ಮೂಲನೆ ಮಾಡಿದೆ ಎಂದು ಅಮೆರಿಕದ ಥಿಂಕ್ ಟ್ಯಾಂಕ್ ಬ್ರೂಕಿಂಗ್ಸ್ ವರದಿ ತಿಳಿಸಿದೆ.

india-has-officially-eliminated-extreme-poverty-says-us-report
ಭಾರತ ಅಧಿಕೃತವಾಗಿ 'ಕಡು ಬಡತನ' ನಿರ್ಮೂಲನೆ ಮಾಡಿದೆ: ಬ್ರೂಕಿಂಗ್ಸ್ ವರದಿ

By ETV Bharat Karnataka Team

Published : Mar 2, 2024, 8:30 PM IST

ನವದೆಹಲಿ: ಭಾರತವು ಈಗ ಅಧಿಕೃತವಾಗಿ 'ತೀವ್ರ ಅಥವಾ ಕಡು ಬಡತನವನ್ನು ನಿರ್ಮೂಲನೆ ಮಾಡಿದೆ, ಇದನ್ನು ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯ ಅನುಪಾತ(headcount poverty ratio)ದಲ್ಲಿನ ತೀವ್ರ ಕುಸಿತ ಮತ್ತು ಗೃಹ ಬಳಕೆಯ ತೀವ್ರ ಹೆಚ್ಚಳದ ಮೂಲಕ ಗಮನಿಸಬಹುದು ಎಂದು ಅಮೆರಿಕದ ಥಿಂಕ್ ಟ್ಯಾಂಕ್ ಬ್ರೂಕಿಂಗ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಸುರ್ಜಿತ್ ಭಲ್ಲಾ ಮತ್ತು ಕರಣ್ ಭಾಸಿನ್ ಅವರು ತಯಾರಿಸಿದ ವರದಿ ಸರ್ಕಾರ ಸಂಪನ್ಮೂಲಗಳ ಮರುಹಂಚಿಕೆಗೆ ರೂಪಿಸಿದ ನೀತಿಯ ಪರಿಣಾಮ ಮತ್ತು ಕಳೆದ ದಶಕದಲ್ಲಿ ಭಾರತದಲ್ಲಿ ಅಂತರ್ಗತ ಬೆಳವಣಿಗೆ ಇದಕ್ಕೆ ಕಾರಣ ಎಂದು ಹೇಳಿದೆ.

ಭಾರತವು 2022-23ರ ಅಧಿಕೃತ ಬಳಕೆಯ ವೆಚ್ಚದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಇದು ಹತ್ತು ವರ್ಷಗಳಲ್ಲಿ ಭಾರತಕ್ಕೆ ಮೊದಲ ಅಧಿಕೃತ ಸಮೀಕ್ಷೆ ಆಧಾರಿತ ಬಡತನದ ಅಂದಾಜನ್ನು ಒದಗಿಸುತ್ತದೆ. ಈ ಅಂಕಿ- ಅಂಶಗಳ ಪ್ರಕಾರ, 2011-12 ರಿಂದ ನೈಜ ತಲಾ ಬಳಕೆಯ ಬೆಳವಣಿಗೆಯು ವರ್ಷಕ್ಕೆ ಶೇಕಡಾ 2.9 ರಷ್ಟಿದೆ. ಇದರ ಅಡಿ, ಗ್ರಾಮೀಣ ಬೆಳವಣಿಗೆಯು ಶೇಕಡಾ 3.1 ರಷ್ಟಿದ್ದು, ನಗರ ಬೆಳವಣಿಗೆಯ ಶೇಕಡಾ 2.6 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಅಂಕಿ - ಅಂಶಗಳು ನಗರ ಮತ್ತು ಗ್ರಾಮೀಣ ಅಸಮಾನತೆಯಲ್ಲಿ ಅಭೂತಪೂರ್ವ ಕುಸಿತವನ್ನು ಪ್ರಸ್ತುತಪಡಿಸಿವೆ.

ನಗರ ಮತ್ತು ಗ್ರಾಮೀಣ ಅಸಮಾನತೆಯಲ್ಲೂ ಅಭೂತಪೂರ್ವ ಕುಸಿತ ಕಂಡು ಬಂದಿದೆ ಎಂದು ವರದಿ ಹೇಳಿದೆ. ಅಸಮಾನತೆ ಅಳೆಯುವ ಸೂಚ್ಯಂಕವು ನಗರದಲ್ಲಿ 36.7 ರಿಂದ 31.9 ಕ್ಕೆ ಇಳಿದಿದೆ ಮತ್ತು ಗ್ರಾಮೀಣದಲ್ಲಿ 28.7 ರಿಂದ 27.0.ಕ್ಕೆ ಇಳಿದಿದೆ. ಬ್ರೂಕಿಂಗ್ಸ್ ಪ್ರಕಾರ, ಹೆಚ್ಚಿನ ಬೆಳವಣಿಗೆ ಮತ್ತು ಅಸಮಾನತೆಯ ಕುಸಿತವು ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಪರ್ಚೇಸಿಂಗ್ ಪವರ್ ಪ್ಯಾರಿಟಿ USD 1.9 ಬಡತನ ರೇಖೆಗೆ ಕಾರಣವಾಗಿದೆ ಎಂದಿದೆ.

2011ರ PPP(ಪರ್ಚೇಸಿಂಗ್ ಪವರ್ ಪ್ಯಾರಿಟಿ ) USD 1.9 ಬಡತನ ರೇಖೆಗೆ ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯ ಅನುಪಾತ (HCR) 2011-12 ರಲ್ಲಿ 12.2 ಶೇಕಡಾದಿಂದ 2022-23 ರಲ್ಲಿ 2 ಶೇಕಡಾಕ್ಕೆ ಇಳಿದಿದೆ. ಇದು ಪ್ರತಿ ವರ್ಷಕ್ಕೆ 0.93 ಶೇಕಡಾವಾರು ಅಂಕಗಳಿಗೆ (ppt) ಸಮನಾಗಿದೆ. ಗ್ರಾಮೀಣ ಬಡತನ ಶೇ.2.5ರಷ್ಟಿದ್ದರೆ, ನಗರ ಬಡತನ ಶೇ.1ಕ್ಕೆ ಇಳಿದಿದೆ. ಪಿಪಿಪಿ 3.2 ಯುಎಸ್​ಡಿ ಲೈನ್​ನಲ್ಲಿ, ಹೆಚ್​ಸಿಆರ್​ ಶೇಕಡಾ 53.6 ರಿಂದ 20.8 ಕ್ಕೆ ಕುಸಿದಿದೆ. ಗಮನಾರ್ಹವಾಗಿ, ಈ ಅಂದಾಜುಗಳು ಜನಸಂಖ್ಯೆಯ ಸರಿಸುಮಾರು ಮೂರನೇ ಎರಡರಷ್ಟು ಜನರಿಗೆ ಸರ್ಕಾರವು ಪೂರೈಸುವ ಉಚಿತ ಆಹಾರವನ್ನು (ಗೋಧಿ ಮತ್ತು ಅಕ್ಕಿ) ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಸಾರ್ವಜನಿಕ ಆಸ್ಪತ್ರೆ ಮತ್ತು ಶಾಲೆಗಳ ಶಿಕ್ಷಣ ಸೌಲಭ್ಯ ಪಡೆಯುವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಥಿಂಕ್ ಟ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

ವಿಶ್ವಬ್ಯಾಂಕ್ ಅಂದಾಜಿಸಿದ್ದಕ್ಕಿಂತ ಭಾರತದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಬ್ರೂಕಿಂಗ್ಸ್ ವರದಿಯ ಅಂಕಿ - ಅಂಶಗಳು ತೋರಿಸುತ್ತವೆ.

ಇದನ್ನೂ ಓದಿ:ಫೆಬ್ರವರಿಯಲ್ಲಿ ₹1.68 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ: ನಾಲ್ಕನೇ ಅತ್ಯಧಿಕ ಸಂಗ್ರಹದ ದಾಖಲೆ

ABOUT THE AUTHOR

...view details