ಹೈದರಾಬಾದ್: ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ತಿರುಪತಿಯಲ್ಲಿ ಭಾರೀ ಮಳೆಯಾಗುತ್ತಿದೆ. ತಿರುಪತಿಯಲ್ಲೂ ಮಳೆ ಅಬ್ಬರಿಸುತ್ತಿರುವುದರಿಂದ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಪ್ರಕಾರ ಟಿಟಿಡಿಯು ಯಾತ್ರಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಟಿಟಿಡಿ ಶ್ರೀವಾರಿ ಮೆಟ್ಟು ಪಾದ ಮಾರ್ಗವನ್ನು (ಮೆಟ್ಟಿಲು ಸೇವೆ) ಮುಚ್ಚಲಾಗಿದೆ. ಜೊತೆಗೆ ಘಾಟ್ನಲ್ಲಿ ಕೂಡ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಲಾಗಿದ್ದು, ದೇವರ ದರ್ಶನಕ್ಕಾಗಿ ಭಕ್ತರಿಗೆ ಸುಗಮ ಅವಕಾಶ ಕಲ್ಪಿಸಲು ವ್ಯವಸ್ಥೆಗಳನ್ನು ಮಾಡಿದೆ.
ಮಳೆಗೆ ಜನರು ತತ್ತರ: ನೆಲ್ಲೂರು, ರಾಯಲಸೀಮಾ ಮತ್ತು ಪ್ರಸಮ್ ಜಿಲ್ಲೆಗಳಲ್ಲಿ ಭಾರೀ ಮಳೆಯು ಜನಜೀವನ ಅಸ್ತವ್ಯವಸ್ತಕ್ಕೆ ಕಾರಣವಾಗಿದೆ. ಹೆಚ್ಚಿನ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ನಿಂತಿದ್ದು, ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ. ಈ ನಡುವೆ ಮಳೆಯ ಹೊಡೆತಕ್ಕೆ ಟೊಮೆಟೊ ಕೂಡ ಹಾನಿಗೊಂಡಿದ್ದು, ತಂಬಾಕು ಸೇರಿದಂತೆ ಇತರೆ ಬೆಳೆಗಳು ಕೂಡ ಹಾನಿಯಾಗಿವೆ.
ಉಕ್ಕಿ ಹರಿಯುತ್ತಿರುವ ನದಿಗಳು (ETV Bharat) ವಿಪರೀತ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ರಸ್ತೆಗಳು ಜಲವೃತ್ತಗೊಂಡಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನೆಲ್ಲೂರು, ಕಡಪ, ತಿರುಪತಿ, ನಂದಯಲಾ ಮತ್ತು ಇತರೆ ನಗರಗಳಲ್ಲಿ ಪ್ರವಾಹದ ರೀತಿ ವಾತವಾರಣ ಸೃಷ್ಟಿಯಾಗಿದೆ. ನೆಲ್ಲೂರಿನ ಮುತ್ತುಕುರ್ ಮತ್ತು ಕನಕಮಹಲ್ ಕೇಂದ್ರ ಹಾಗೂ ಮಗುಂಟಾ ಲೇಔಟ್ಗಳು ವಲಾವೃತವಾಗಿವೆ.
ಅಪಾಯದ ಮಟ್ಟದಲ್ಲಿ ಕೆರೆ-ಕಟ್ಟೆಗಳು (ETV Bharat) ಉಕ್ಕಿ ಹರಿಯುತ್ತಿರುವ ಕೆರೆ-ಕಟ್ಟೆಗಳು: ತಿರುಪತಿಯಲ್ಲಿ ಜ್ಯೋತಿರಾವ್ ಫುಲೆ ಮತ್ತು ರೆನಿಗುಂಟಾ ಕಾಲೋನಿ ಹಾಗೂ ಆಟೋನಗರ್, ಭಗತ್ಸಿಂಗ್, ಪುಲವನಿಗುಂಟಾ, ಗೊಲ್ಲವನಿಗುಂಟಾ ಪ್ರದೇಶಗಳಲ್ಲಿ ಕೂಡ ಮಳೆ ನೀರಿನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿರುಪತಿಯ ಅನೇಕ ಕಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅನೇಕ ಕಡೆ ರಸ್ತೆಗಳು ನದಿಗಳಂತೆ ಆಗಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ತಗ್ಗು ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮಳೆಗೆ ಜಲಾವೃತವಾದ ರಸ್ತೆಗಳು (ETV Bharat) ಗೋವರ್ಧನಪುರಂ ಜಿಲ್ಲೆಯಲ್ಲಿ ಕಾಲುವೆ ನೀರು ಉಕ್ಕಿ ಹರಿಯುತ್ತಿದೆ. ರೆನಿಗುಂಟಾ- ಮಮಂದುರ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ಶ್ರಿಕಾಳ ಹಸ್ತಿ ಮಂಡಲದ ಮುಲ್ಲಪುಡಿ ಬುಡಕಟ್ಟು ಕಾಲೋನಿಯ ಮನೆಗಳಿಗೆ ನೀರು ನುಗ್ಗಿದೆ. ಪ್ರಕಾಶಂ ಜಿಲ್ಲೆಯಲ್ಲಿನ ನಗುಲುಪ್ಪಲಪಡು ಮಂಡಲದ ಛಡಲವಡಾದ ರಮನ್ನಾ ಕೆರೆ ಒಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 216ರಲ್ಲಿ ನೀರು ಹರಿದಿದೆ. ಇದರಿಂದಾಗಿ ಸಂಚಾರ ಮಾರ್ಗಕ್ಕೆ ತೊಂದರೆಯಾಗಿದ್ದು, ವಾಹನದ ಸಂಚಾರದ ಮಾರ್ಗ ಬದಲಾಯಿಸಲಾಗಿದೆ.
ಕರವಡಿ- ಗುಟ್ಟಿಕೊಂಡವರಿಪಲೆಮ್ ಗ್ರಾಮದಲ್ಲಿ ಮುಡಿಗೊಂಡಾದಲ್ಲಿ ಕಳೆದೆರಡು ದಿನಗಳಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಮಳೆಗೆ ವಿಶಾಖಪಟ್ಟಣದ ಮರಳುಪ್ರದೇಶಗಳು ಜಲಾವೃತಗೊಂಡಿವೆ. ಉಪ್ಪಡಾ ಕರಾವಳಿ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಮಳೆಗೆ ಅನೇಕ ಕಾರು ಮತ್ತು ಬೈಕ್ಗಳು ಮುಳುಗಿವೆ.
ಇದನ್ನೂ ಓದಿ: ಇಂದು ಮಹರ್ಷಿ ವಾಲ್ಮೀಕಿ ಜಯಂತಿ: ದೆಹಲಿಯ ವಾಲ್ಮೀಕಿ ಮಂದಿರದಲ್ಲಿ ರಾಹುಲ್ ಗಾಂಧಿ ವಿಶೇಷ ಪೂಜೆ