ಹೈದರಾಬಾದ್ (ತೆಲಂಗಾಣ): ಬಿಸಿಲಿನ ಝಳಕ್ಕೆ ತತ್ತರಿಸಿರುವ ನಗರದ ನಿವಾಸಿಗಳಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಭಾರೀ ಮಳೆಯಿಂದಾಗಿ ಹೈದರಾಬಾದ್‌ನಲ್ಲಿ ವಾತಾವರಣ ತಂಪಾಗಿದೆ. ಖೈರತಾಬಾದ್, ಕುಕಟ್ಪಲ್ಲಿ, ರಾಜೇಂದ್ರ ನಗರ, ಅತ್ತಾಪುರ, ಬಂಜಾರಾ ಹಿಲ್ಸ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದ ಕೆರೆಯಂತಾದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದ ಪ್ರಸಂಗ ಕಂಡ ಬಂತು. ಮಳೆಯಿಂದ ಜನರಿಗೆ ತೊಂದರೆಯಾಗದಂತೆ ಜಿಹೆಚ್‌ಎಂಸಿ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಹಾಗೂ ಚರಂಡಿ ತುಂಬಿ ಹರಿದ ಕಡೆ ಜನರಿಗೆ ತೊಂದರೆಯಾಗದಂತೆ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ಟೋಲಿಚೌಕಿಯಲ್ಲಿ ಬಿದ್ದ ಬೃಹತ್ ಮರ: ಹೈದರಾಬಾದ್ ನಗರದಲ್ಲಿ ಸುರಿದ ಭಾರಿ ಮಳೆಗೆ ನಗರವಾಸಿಗಳು ನಲುಗಿ ಹೋಗಿದ್ದಾರೆ. ಬಿರುಗಾಳಿ, ಗುಡುಗು ಸಹಿತ ಮಳೆಯಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಜೋರಾದ ಗಾಳಿಗೆ ಕೆಲವೆಡೆ ಮರಗಳು ಮುರಿದು ಬಿದ್ದಿವೆ. ಟೋಲಿಚೌಕ್ ಗೋಲ್ಕೊಂಡ ಎಂಡಿ ಲೈನ್ಸ್‌ನಲ್ಲಿ 200 ವರ್ಷಗಳಷ್ಟು ಹಳೆಯದಾದ ಮರವೊಂದು ಬಲವಾದ ಗಾಳಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಒಬ್ಬರ ತಲೆಗೆ ಗಾಯವಾಗಿದ್ದು, 4 ಬೈಕ್ಗಳು ಜಖಂಗೊಂಡಿವೆ.
ಮುಂಗಾರು ಅಬ್ಬರ: ಜೂನ್ ಮೊದಲ ವಾರದಲ್ಲಿ ನೈರುತ್ಯ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿದ್ದರಿಂದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಭಾಗ್ಯನಗರದ ನಾಂಪಲ್ಲಿ, ಬಶೀರ್ ಬಾಗ್, ಲಿಬರ್ಟಿ, ಹಿಮಾಯತ್ ನಗರ, ಲಖ್ಡಿಕಾಪುಲ್, ಖೈರತಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು, ದಾರಿಹೋಕರು ಪರದಾಡಿದರು.