ಕರ್ನಾಟಕ

karnataka

ETV Bharat / bharat

ಕುಡಿದ ಅಮಲಿನಲ್ಲಿ ರಾಂಗ್​ ರೂಟ್​​​​​ನಲ್ಲಿ ಟ್ರಕ್​ ಚಲಾಯಿಸಿದ ಡ್ರೈವರ್​; ಐವರ ಸಾವು, ಆರು ಮಂದಿಗೆ ಗಾಯ - HARYANA ROAD ACCIDENT

ಕುಡಿತದ ನಶೆಯಲ್ಲಿ ವಾಹನ ಚಲಾಯಿಸುತ್ತಿದ್ದ ಟ್ರಕ್​ ಡ್ರೈವರ್​ ನಿಯಂತ್ರಣ ತಪ್ಪಿ ತಪ್ಪು ಮಾರ್ಗದಲ್ಲಿ ಬಂದಿದ್ದು, ಮೂರು ಕಡೆ ಅಪಘಾತ ನಡೆಸಿ ಮುಂದೆ ಸಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

haryana-road-accident-five-people-died-in-panipat-elevated-highway
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

By ETV Bharat Karnataka Team

Published : Nov 14, 2024, 4:56 PM IST

ಪಾಣಿಪತ್​ (ಹರಿಯಾಣ):ಕುಡಿದ ಮತ್ತಿನಲ್ಲಿ ಲಾರಿ ಚಾಲಕ ರಾಂಗ್​​ ಸೈಡ್​​​ನಲ್ಲಿ ವಾಹನ ಚಲಾಯಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿರುವ ಭೀಕರ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ.

ಕುಡಿತದ ನಶೆಯಲ್ಲಿಯೇ ವಾಹನ ಚಲಾಯಿಸಿದ ಟ್ರಕ್​ ಡ್ರೈವರ್​​​​​​​​​​​ ನಿಯಂತ್ರಣ ತಪ್ಪಿ ವಿರುದ್ಧ ರೂಟ್​​ನಲ್ಲಿ ಬಂದಿದ್ದು, ಮೂರು ವಿಭಿನ್ನ ಸ್ಥಳಗಳಲ್ಲಿ ಅಪಘಾತ ನಡೆಸಿ ಐವರ ಸಾವಿಗೆ ಕಾರಣನಾಗಿದ್ದಾನೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡರವನ್ನು ತಕ್ಷಣಕ್ಕೆ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಕುರಿತು ಮಾಹಿತಿ ಪಡೆದ ತಕ್ಷಣ, ಟ್ರಕ್​ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಡಿತದಿಂಧ ನಡೆದ ಅಪಘಾತ:ಟ್ರಕ್​ ಚಾಲಕ ಹೆದ್ದಾರಿಯಲ್ಲಿ ವಿರುದ್ಧ ರೂಟ್​​ನಲ್ಲಿ ಬರುತ್ತಿದ್ದಂತೆ ಟ್ರಾಫಿಕ್​ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮೊದಲಿಗೆ ಸಿವ್ಹಾ ಸೇತುವೆ ಬಳಿ ಸಾಗುತ್ತಿದ್ದ ಇಬ್ಬರು ಬೈಕ್​ ಚಾಲಕರ ಮೇಲೆ ಟ್ರಕ್​ ಹರಿದಿದೆ. ಬಳಿಕವೂ ಚಾಲನೆ ಮುಂದುವರೆಸಿದ ಚಾಲಕ ಮಲಿಕ್​ ಪೆಟ್ರೋಲ್​ ಪಂಪ್​ ಬಳಿ ಮತ್ತಿಬ್ಬರು ಬೈಕ್​ ಚಾಲಕರ ಮೇಲೆ ಟ್ರಕ್​ ಚಲಾಯಿಸಿದ್ದಾನೆ. ಮೂರನೇ ಅಪಘಾತ ಗುರುದ್ವಾರದ ಮುಂದೆ ನಡೆದಿದ್ದು ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮತ್ತೊರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ರೊಹ್ಟಕ್​ ಪಿಜಿಐಗೆ ಸ್ಥಳಾಂತರಿಸಲಾಗಿದೆ. ಈ ಭೀಕರ ಅಪಘಾತದಿಂದ ಹೆದ್ದಾರಿಯಲ್ಲಿ ಮೃತದೇಹಗಳು ಬಿದ್ದ ಪರಿಣಾಮ ಕೆಲ ಕಾಲ ಟ್ರಾಫಿಕ್​ ಸಮಸ್ಯೆ ಉಂಟಾಯಿತು.

ನಿಯಂತ್ರಣ ತಪ್ಪಿದ ಟ್ರಕ್​ ಚಾಲಕ ಮೂರು ಕಡೆ ಅಪಘಾತಕ್ಕೆ ಕಾರಣವಾಗಿದ್ದಾನೆ. ತೆಹ್ಸಿಲ್​ ಕ್ಯಾಂಪ್​ ಬಳಿ ಅಂತಿಮವಾಗಿ ಚಾಲಕ ಬ್ರೇಕ್​ ಹಾಕಿದ್ದಾನೆ. ಇದಕ್ಕೆ ಮುನ್ನ ಆತ ಬೊಲೆರೋ ಕಾರ್​​ಗೆ ಡಿಕ್ಕಿಯಾಗಿದ್ದು, ಕಾರು ಜಖಂ ಆಗಿದೆ. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕೂಡ ಚಾಲಕ ಅಮಲಿನಲ್ಲಿದ್ದು, ಸರಿಯಾಗಿ ನಿಲ್ಲಲು ಆಗಿರಲಿಲ್ಲ. ಇದೇ ನಶೆಯುಲ್ಲಿ ಆತ ಆರು ಕಿ. ಮೀ ಸಾಗಿ ನಾಲ್ವರ ಜೀವ ತೆಗೆದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್‌ ಸಿಲಿಂಡರ್‌ ಸ್ಫೋಟ: 150 ಅಡಿ ಎತ್ತರಕ್ಕೆ ಹಾರಿದ ಆಂಬ್ಯುಲೆನ್ಸ್‌, ಕೂದಲೆಳೆ ಅಂತರದಲ್ಲಿ ಗರ್ಭಿಣಿ ಪಾರು

ABOUT THE AUTHOR

...view details