ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಕೊಂಡ ಬೆಂಕಿ; ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬಚಾವ್​ ಆದ ಭಕ್ತರು - Fire Incident - FIRE INCIDENT

Gurugram Fire Incident: ಹರಿಯಾಣದ ಗುರುಗ್ರಾಮ್‌ನಲ್ಲಿ ಚಲಿಸುತ್ತಿದ್ದ ಕಾರೊಂದು ಬೆಂಕಿಯಿಂದ ಹೊತ್ತಿ ಉರಿದಿದ್ದು, ಒಂದೇ ಕುಟುಂಬದ ಐವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್​ ಭಕ್ತರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

GURUGRAM CAR FIRE  FIRE BROKE OUT IN MOVING CAR  GURUGRAM SHEETLA MATA MANDIR
ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಕೊಂಡ ಬೆಂಕಿ

By ETV Bharat Karnataka Team

Published : Apr 10, 2024, 11:44 AM IST

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಕೊಂಡ ಬೆಂಕಿ

ಗುರುಗ್ರಾಮ್ (ಹರಿಯಾಣ):ನಗರದಲ್ಲಿ ಮಂಗಳವಾರ (ಏಪ್ರಿಲ್ 9) ತಡರಾತ್ರಿ ರಾಜಸ್ಥಾನದ ಭಿವಾಡಿಯಿಂದ ಬರುತ್ತಿದ್ದ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾಹನದಲ್ಲಿದ್ದವರಲ್ಲಿ ಆತಂಕ ಮನೆ ಮಾಡಿತ್ತು. ಸುಮಾರು 10 ನಿಮಿಷಗಳಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ಕಾರಿಗೆ ಬೆಂಕಿ: ಪೊಲೀಸರಿಂದ ಬಂದ ಮಾಹಿತಿ ಪ್ರಕಾರ, ನವರಾತ್ರಿಯ ಮೊದಲ ದಿನ ವಿವಿಧ ರಾಜ್ಯಗಳಿಂದ ಭಕ್ತರು ಗುರುಗ್ರಾಮದ ಪ್ರಸಿದ್ಧ ಶೀತಲ ಮಾತಾ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಅದೇ ರೀತಿ, ರಾಜಸ್ಥಾನದ ಭಿವಾಡಿಯಿಂದ ಗುರುಗ್ರಾಮದ ಮಾತಾ ಶೀತಲ ದೇವಸ್ಥಾನಕ್ಕೆ ಒಂದೇ ಕುಟುಂಬದ 5 ಮಂದಿ ಕಾರಿನಲ್ಲಿ ಬರುತ್ತಿದ್ದರು. ಅವರ ಕಾರು ಗುರುಗ್ರಾಮದ ದ್ವಾರಕಾ ಎಕ್ಸ್ ಪ್ರೆಸ್ ವೇ ಮೂಲಕ ಬಸಾಯಿ ಚೌಕ್ ತಲುಪಿದ ತಕ್ಷಣ ಕಾರಿನಿಂದ ಹೊಗೆ ಬರತೊಡಗಿತು. ಹೊಗೆಯನ್ನು ಕಂಡ ಪ್ರಯಾಣಿಕರು ಕೂಡಲೇ ಕಾರಿನಿಂದ ಇಳಿದರು. ಇದಾದ ಸ್ವಲ್ಪ ಸಮಯದ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ನೋಡು ನೋಡುತ್ತಿದ್ದಂತೆ ಬೆಂಕಿ ಇಡೀ ಕಾರಿಗೆ ಆವರಿಸಿದೆ. ಅಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರೊಳಗೆ ಕಾರು ಸುಟ್ಟು ಭಸ್ಮವಾಗಿತ್ತು.

ಟ್ರಾಫಿಕ್ ಜಾಮ್:ಕಾರಿನಲ್ಲಿದ್ದವರ ಪ್ರಕಾರ, ರಾತ್ರಿ 8:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ದ್ವಾರಕಾ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಸವಾರರು ಸಮಸ್ಯೆ ಎದುರಿಸಬೇಕಾಯಿತು. ಆದರೆ, ಈ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದು ಅದೃಷ್ಟ ಎಂದು ಕಾರಿನಲ್ಲಿದ್ದ ಪ್ರಯಾಣಿಕರು ಹೇಳಿದರು.

ಓದಿ:ಛತ್ತೀಸ್​ಗಢ ಬಸ್​ ಅಪಘಾತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ: 14 ಮಂದಿಗೆ ಗಾಯ, ರಾಷ್ಟ್ರಪತಿ - ಪ್ರಧಾನಿ ಸಂತಾಪ - durg accident

ABOUT THE AUTHOR

...view details