ಕುರುಕ್ಷೇತ್ರ (ಹರಿಯಾಣ): ಇಲ್ಲಿನ ಕುರುಕ್ಷೇತ್ರದ ಪವಿತ್ರ ಭೂಮಿಯಲ್ಲಿ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಸಾಗಿದೆ. ನವೆಂಬರ್ 18 ರಿಂದ ಆರಂಭವಾದ ಈ ಹಬ್ಬ ಡಿಸೆಂಬರ್ 15ರವರೆಗೆ ನಡೆಯಲಿದೆ. ಡಿಸೆಂಬರ್ 11ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಹಿನ್ನೆಲೆ ಬ್ರಹ್ಮಸರೋವರದ ಪುರುಷೋತ್ತಮಪುರ ಬಾಗ್‌ನಲ್ಲಿ ಭರದ ಸಿದ್ಧತೆಗಳು ಸಾಗಿದೆ. ಈಗಾಗಲೇ ಗೀತಾ ಮಹೋತ್ಸವ ಮಹತ್ವ ಸಾರುವ ಅನೇಕ ಪುಸ್ತಕಗಳ ಮಳಿಗೆ ಸ್ಥಾಪಿಸಲಾಗಿದೆ. ಇದರಲ್ಲಿ ಗುಜರಾತ್ ಮೂಲದ ಮಹಿಳೆಯ ಮಳಿಗೆ ಎಲ್ಲರ ಗಮನ ಸೆಳೆದಿದೆ.
50 ಕ್ಕೂ ಹೆಚ್ಚು ಉತ್ಪನ್ನಗಳ ಸಿದ್ಧತೆ: ಗುಜರಾತ್ನ ಮಹಿಳೆ ಸಿಮ್ರಾನ್ ಆರ್ಯ ತಮ್ಮ ಮಳಿಗೆ ಮೂಲಕ ಜನರಿಗೆ ಗೋವಿನ ಮಹತ್ವ ಸಾರುತ್ತಿದ್ದಾರೆ. ಗುಜರಾತ್ನಲ್ಲೂ ಗೋಶಾಲೆ ಹೊಂದಿರುವ ಅವರು ಮುಖ್ಯ ಉದ್ದೇಶ ಜನರಿಗೆ ಗೋವಿನ ಮಹತ್ವವ ಹಾಗೂ ಅವುಗಳ ಮಹತ್ವವನ್ನು ತಿಳಿಸುವುದಾಗಿದೆ. ಗೋವಿನ ಪಂಚಗವ್ಯದಿಂದ ತಯಾರಿಸಿದ 50 ಕ್ಕೂ ಹೆಚ್ಚು ಉತ್ಪನ್ನಗಳನ್ನು ಸಂಸ್ಥೆ ಮೂಲಕ ಅವರು ತಯಾರಿಸುತ್ತಿದ್ದಾರೆ.
ಪಂಚಗವ್ಯದಲ್ಲಿ ಹಸುವಿನ ಹಾಲು, ಮೊಸರು, ತುಪ್ಪ ಮತ್ತು ಗೋಮೂತ್ರ ಸೇರಿವೆ. ಪಂಚಗವ್ಯದಿಂದ ಅಗರಬತ್ತಿ, ಕೆಮ್ಮು ಸಿರಪ್, ಸಾಬೂನು, ದಿಯಾ, ಫೇಸ್ ಪ್ಯಾಕ್, ಎಣ್ಣೆ ಸೇರಿದಂತೆ ಸುಮಾರು 50 ಉತ್ಪನ್ನಗಳನ್ನು ಸಿದ್ಧಪಡಿಸಲಾಗಿದೆ. ಹಸುವಿನ ತ್ಯಾಜ್ಯಗಳ ವಿಲೇವಾರಿ ಸುಲಭ ಹಾಗೂ ಇವು ಪರಿಸರವನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತಿದೆ ಎಂದರು.