ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಚುನಾವಣೆ ವೀಕ್ಷಣೆಗೆ ವಿದೇಶಿ ರಾಜತಾಂತ್ರಿಕರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿರುವ ಕ್ರಮಕ್ಕೆ ಒಮರ್ ಒಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಗಳು ಭಾರತದ ಆಂತರಿಕ ವಿಷಯವಾಗಿದ್ದು, ನಮಗೆ ಯಾವುದೇ ರೀತಿಯ ಪ್ರಮಾಣ ಪತ್ರ ಬೇಕಾಗಿಲ್ಲ. ಇಲ್ಲಿನ ಚುನಾವಣೆಯನ್ನು ಪರೀಕ್ಷಿಸಲು ಹಾಗೂ ವೀಕ್ಷಿಸಲು ವಿದೇಶಿಯರನ್ನು ಏಕೆ ಕೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದು ಮಾರ್ಗದರ್ಶಿ ಪ್ರವಾಸವಾಗಿದ್ದರೆ, ಇದು ಒಳ್ಳೆಯ ಲಕ್ಷಣವಲ್ಲ. ಈ ಚುನಾವಣೆಯಲ್ಲಿ ಜನರು ಭಾಗವಹಿಸುವಿಕೆ ಕುರಿತು ಕೇಂದ್ರವೂ ಪ್ರಶಂಸೆ ಪಡೆಯಲು ಬಯಸುತ್ತಿದೆ. ಈ ಮೂಲಕ ಇಲ್ಲಿನ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದಲ್ಲಿ ಎರಡನೇ ಹಂತದ ಚುನಾವಣೆ:ಜಮ್ಮು ಮತ್ತು ಕಾಶ್ಮೀರದ 6 ಜಿಲ್ಲೆಗಳ 26 ಸ್ಥಾನಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಚುನಾವಣೆಗಳನ್ನು ವೀಕ್ಷಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಹ್ವಾನದ ಮೇರೆಗೆ 16 ರಾಜತಾಂತ್ರಿಕರ ನಿಯೋಗ ಆಗಮಿಸಿದೆ.
ಈ ಕುರಿತು ಟೀಕೆ ವ್ಯಕ್ತಪಡಿಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಅಬ್ಧುಲ್ಲಾ, ಅವರು ಜನರನ್ನು ಅವಮಾನ ಮಾಡುತ್ತಿದ್ದು, ಜನರನ್ನು ಬಂಧಿಸಿ ಮತ್ತು ಕಿರುಕುಳ ನೀಡಲು ಸರ್ಕಾರ ತನ್ನ ಎಲ್ಲ ತಂತ್ರಗಳನ್ನು ಬಳಸುತ್ತಿದೆ. ಜನರು ಚುನಾವಣೆಯಲ್ಲಿ ಭಾಗಿಯಾಗುತ್ತಿರುವುದನ್ನು ಭಾರತ ಸರ್ಕಾರ ಒತ್ತಿ ಹೇಳುವು ಅವಶ್ಯಕತೆ ಇಲ್ಲ. ಆದರೆ, ಸರ್ಕಾರ ಅದನ್ನು ಮಾಡುತ್ತಿದೆ ಎಂದರು.