ಕರ್ನಾಟಕ

karnataka

ETV Bharat / bharat

ಇಂದು 55ನೇ ಜಿಎಸ್​ಟಿ ಸಭೆ; ಪೂರ್ವಭಾವಿ ಬಜೆಟ್​ ಸಭೆಯಲ್ಲಿ ಹಲವು ಬೇಡಿಕೆಗಳನ್ನು ಕೇಂದ್ರದ ಮುಂದಿಟ್ಟ ರಾಜ್ಯಗಳು - GST COUNCIL MEETING IN JAISALMER

ಪೂರ್ವ ಬಜೆಟ್​​ ಸಭೆಯಲ್ಲಿ ಎಲ್ಲ ರಾಜ್ಯಗಳು ತಮ್ಮ ಬೇಡಿಕೆ ಪ್ರಸ್ತಾವನೆಗಳನ್ನು ಮಂಡಳಿ ಮುಂದಿಟ್ಟಿದ್ದರು.

Pre-budget meeting was held in Jaisalmer
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ (ಐಎಎನ್​ಎಸ್​)

By ETV Bharat Karnataka Team

Published : 5 hours ago

ಜೈಸಲ್ಮೇರ್, ರಾಜಸ್ಥಾನ​: 55ನೇ ಜಿಎಸ್​ಟಿ ಮಂಡಳಿ ಸಭೆ ಇಂದಿನಿಂದ ರಾಜಸ್ಥಾನದ ಜೆಸಲ್ಮೇರ್​ನಲ್ಲಿ ನಡೆಯುತ್ತಿದ್ದು, ಶುಕ್ರವಾರ ಅಂದರೆ ಡಿಸೆಂಬರ್​ 20ರಂದು ಇಲ್ಲಿನ ಹೊಟೇಲ್​ನಲ್ಲಿ ಪೂರ್ವಭಾವಿ ಬಜೆಟ್​ ಸಭೆ ನಡೆಸಲಾಗಿದೆ. ಈ ಸಭೆ ಗಳಿಕ ಮಾತನಾಡಿರುವ ರಾಜಸ್ಥಾನ ಉಪ ಮುಖ್ಯಮಂತ್ರಿ ದಿಯಾ ಕುಮಾರಿ, ರಾಜಸ್ಥಾನದ ವಿವಿಧ ಪ್ರವಾಸಿ ಸ್ಥಳಗಳ ಸೌಲಭ್ಯ ವಿಸ್ತರಿಸಲು ಪೂರ್ವ ಬಜೆಟ್​ ಸಭೆಯಲ್ಲಿ 150 ಕೋಟಿ ಅನುದಾನ ಸಿಕ್ಕಿದೆ ಎಂದರು.

ಇದೇ ವೇಳೆ, ಸ್ವದೇಶ್ ದರ್ಶನದಲ್ಲಿ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳಲ್ಲಿ ಸಾಧ್ಯವಾದಷ್ಟು ಬೆಂಬಲ ಪಡೆಯಲು ಪ್ರಸ್ತಾವನೆಗಳನ್ನು ನೀಡಿದ್ದೇವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಲ್ಲಿ ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಾಗಿದ್ದು, ಇದರ ಅನುಮೋದನೆ ಪಡೆಯಲಾಗಿದೆ. ಬಜೆಟ್​ ಪೂರ್ವ ಸಭೆಯಲ್ಲಿ ಎಲ್ಲ ರಾಜ್ಯಗಳು ತಮ್ಮ ಬೇಡಿಕೆ ಪ್ರಸ್ತಾವನೆಗಳನ್ನು ಮಂಡಳಿ ಮುಂದಿಟ್ಟಿದ್ದರು. ಇದೀಗ ತಮ್ಮ ರಾಜ್ಯದ ಪ್ರಸ್ತಾವನೆಗಳು ಕೂಡ ಬಜೆಟ್​​ನಲ್ಲಿ ಬರಲಿದ ಎಂಬ ಭರವಸೆಯಲ್ಲಿ ರಾಜ್ಯಗಳಿವೆ ಎಂದು ಮಾಹಿತಿ ನೀಡಿದರು.

ರಾಜಸ್ಥಾನದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಡಬಲ್ ಎಂಜಿನ್ ಸರ್ಕಾರವು ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ರಾಜಸ್ಥಾನದೊಂದಿಗೆ ಪ್ರಧಾನಿಗೆ ವಿಶೇಷ ನಂಟಿದೆ. ಇದೇ ಕಾರಣಕ್ಕೆ ಅವರು ರಾಜಸ್ಥಾನದ ಪ್ರತಿಕ್ಷೇತ್ರದಲ್ಲಿ ಸಾಕಷ್ಟು ಬೆಂಬಲ ನೀಡಲಾಗುತ್ತಿದೆ ಎಂದ ಅವರು, ಜೈಸಲ್ಮೇರ್‌ನಿಂದ ಭಾರತ-ಪಾಕ್ ಗಡಿಯಲ್ಲಿರುವ ಮಾಟೇಶ್ವರಿ ತನೋಟ್ ಮಾತಾ ದೇವಾಲಯವನ್ನು ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಾಗುವುದು ಎಂದರು.

ಹಲವು ವಿಷಯಗಳ ಕುರಿತು ಚರ್ಚೆ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಜೊತೆ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಗೋವಾ ಸಿಎಂ ಪ್ರಮೋದ್​ ಸಾವಂತ್​, ಬಜೆಟ್ ಪೂರ್ವ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಪ್ರತಿ ರಾಜ್ಯಕ್ಕೆ ನೀಡಿರುವ ಅನುದಾನ ನಿರೀಕ್ಷೆಗಿಂತ ಉತ್ತಮವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಪ್ರತಿ ರಾಜ್ಯಕ್ಕೆ ನೀಡಿರುವ ಅನುದಾನ ನಿರೀಕ್ಷೆಗಿಂತ ಉತ್ತಮವಾಗಿದೆ ಎಂದರು.

ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಹರಿಯಾಣ ಸಿಎಂ ನೈಬ್​ ಸಿಂಗ್​, ಹರಿಯಾಣ ಅಭಿವೃದ್ಧಿಯನ್ನು ಮೂರು ಪಟ್ಟು ವೇಗಗೊಳಿಸಲು ಬದ್ದವಾಗಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೆಲಸ ಮಾಡಲಾಗುತ್ತಿದೆ. ಅಭಿವೃದ್ಧಿ ಕುರಿತು ಹಲವು ಸಲಹೆ ನೀಡಿದ್ದು, ಬಜೆಟ್​ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪರಿಹಾರದ ಭರವಸೆಯಲ್ಲಿ ಅರುಣಾಚಲ ಪ್ರದೇಶ:ಅರುಣಾಚಲ ಪ್ರದೇಶ ಡಿಸಿಎಂ ಚೌನಾ ಮೈನ್ ಮಾತನಾಡಿ, ನಮ್ಮ ರಾಜ್ಯದ ಸಮಸ್ಯೆ ಕುರಿತು ಪ್ರಸ್ತಾಪಿಸಲಾಗಿದ್ದು, ಪರಿಹಾರ ಸಿಗುವ ಭರವಸೆ ಇದೆ ಎಂದರು.

ಕೈಗಾರಿಕಾ ಪ್ಯಾಕೇಜ್​​ಗೆ ಪಂಜಾಬ್​ ಒತ್ತಾಯ:ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ಸಭೆಯಲ್ಲಿ ಕೈಗಾರಿಕಾ ಪ್ಯಾಕೇಜ್‌ಗೆ ಒತ್ತಾಯಿಸಿದರು, ಗಡಿಯಾಚೆಗಿನ ಡ್ರೋನ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು 1000 ಕೋಟಿ ರೂ.ಗಳ ಪ್ಯಾಕೇಜ್‌ಗೂ ಬೇಡಿಕೆ ಇಡಲಾಗಿದೆ.

ಇದನ್ನೂ ಓದಿ: ಜೈಸಲ್ಮೇರ್​ನಲ್ಲಿ ನಾಳೆ ಜಿಎಸ್​ಟಿ ಕೌನ್ಸಿಲ್ ಸಭೆ: ಯಾವೆಲ್ಲ ವಸ್ತುಗಳ ಬೆಲೆ ಏರುತ್ತೆ, ಇನ್ಯಾವುದು ಇಳಿಯುತ್ತೆ?

ABOUT THE AUTHOR

...view details