ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಉಸಿರಾಡುವುದೂ ಕಷ್ಟ! ಕಳಪೆ ವರ್ಗದಲ್ಲೇ ಮುಂದುವರೆದ ವಾಯು ಗುಣಮಟ್ಟ

ದೆಹಲಿಯ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಇದಕ್ಕನುಗುಣವಾಗಿ ನಾಲ್ಕು ಹಂತಗಳಿಗೆ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ ಜಾರಿ ಮಾಡಲಾಗುತ್ತಿದೆ.

GRAP Stage 3 measures  activated in Delhi NCR due to a rise in the AQI level
ದೆಹಲಿ ವಾಯುಗುಣಮಟ್ಟ (ANI)

By ETV Bharat Karnataka Team

Published : 5 hours ago

Updated : 5 hours ago

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು, ಎಕ್ಯೂಐ ತೀವ್ರ ಕಳಪೆ ವರ್ಗದಲ್ಲಿದೆ. ಒಂದು ರೀತಿಯಲ್ಲಿ ಉಸಿರಾಡಲೂ ಕಷ್ಟವೆಂಬಂತಹ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಜಿಆರ್​ಎಪಿ ಮೂರನೇ ಹಂತದ ಕ್ರಮಕ್ಕೆ ಶುಕ್ರವಾರದಿಂದ ಚಾಲನೆ ನೀಡಿದೆ.

ಜಿಆರ್​ಎಪಿ ಮೂರನೇ ಹಂತದಲ್ಲಿ ಅಗತ್ಯ ಸರ್ಕಾರಿ ಯೋಜನೆಗಳು, ಗಣಿಗಾರಿಕೆ ಮತ್ತು ಕಲ್ಲು ಪುಡಿ ಮಾಡುವಿಕೆ ಮತ್ತು ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಎಸ್​2 ಪೆಟ್ರೋಲ್ ಮತ್ತು ಬಿಎಸ್​4 ಡೀಸೆಲ್ ವಾಹನಗಳ ಮೇಲಿನ ನಿಷೇಧ ಹೊರತುಪಡಿಸಿ ನಿರ್ಮಾಣ ಮತ್ತು ತೆರವು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ದೆಹಲಿಯ ವಾಯು ಗುಣಮಟ್ಟಕ್ಕೆ ಅನುಗುಣವಾಗಿ ನಾಲ್ಕು ಹಂತಗಳಿಗೆ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ ಜಾರಿ ಮಾಡಲಾಗುತ್ತದೆ. ನವೆಂಬರ್​ 14ರಂದು ನಡೆದ ತುರ್ತು ಪರಿಶೀಲನಾ ಸಭೆಯ ನಂತರದ ಸಿಎಕ್ಯೂಎಂ ಉಪ ಸಮಿತಿ ದೆಹಲಿ ವಾಯುಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ ಎಂದಿದ್ದು, ಮುಂದಿನ ದಿನಗಳಲ್ಲಿ ತೀವ್ರ ಕಳಪೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಉಪಸಮಿತಿ ಜಿಆರ್​ಎಪಿಯ ಮೂರನೇ ಹಂತದ ಕ್ರಮ ಜಾರಿಗೆ ತರಲು ನಿರ್ಧರಿಸಿದೆ. ನವೆಂಬರ್​ 15ರಿಂದ ಬೆಳಗ್ಗೆ 8ಕ್ಕೆ ನಗರದಲ್ಲಿ ಜಿಆರ್​ಎಪಿ ಮೂರನೇ ಹಂತದ ಜಾರಿಗೆ ಆದೇಶಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕೊಂಚ ತಡವಾಗಿಯೇ ರಾಜಧಾನಿಯಲ್ಲಿ ಜಿಆರ್​ಎಪಿ ಮೂರನೇ ಹಂತದ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಳೆದ ವರ್ಷ ನವೆಂಬರ್​ 2ರಿಂದಲೇ ಕಾರ್ಯಾಚರಣೆ ಯೋಜನೆಯನ್ನು ಎನ್​ಸಿಆರ್​ನಲ್ಲಿ ಜಾರಿಗೆ ತರಲಾಗಿತ್ತು.

ಮೂರನೇ ಹಂತದಲ್ಲಿ 11 ಕಾರ್ಯ ಯೋಜನೆಯ ಅಂಶಗಳಿದೆ. ಅತೀ ಹೆಚ್ಚು ಟ್ರಾಫಿಕ್​ ಇರುವ ಪ್ರದೇಶದಲ್ಲಿ ನೀರು ಸಿಂಪಡನೆ ಮತ್ತು ಟ್ರಾಫಿಕ್​ ಕಡಿಮೆ ಮಾಡುವ ಉದ್ದೇಶದಿಂದ ವಿಭಿನ್ನ ದರದೊಂದಿಗೆ ಸಾರ್ವಜನಿಕ ಸಾರಿಗೆ ಸೇವೆ ಬಳಕೆಗೆ ಪ್ರೋತ್ಸಾಹ ನೀಡುವುದು ಸೇರಿದೆ.

ಇದರ ಜೊತೆಗೆ ಆರೋಗ್ಯ ಯೋಜನೆ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣದಲ್ಲಿ ಕಟ್ಟುನಿಟ್ಟಿನ ಪರಿಸರ ನಿಯಂತ್ರಣದ ಹೊರತಾಗಿ ಧೂಳಿಗೆ ಕಾರಣವಾಗುವ ಕಟ್ಟಡ ನಿರ್ಮಾಣ ಮತ್ತು ಕಟ್ಟಡ ತೆರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವುದು ಸೇರಿದೆ. ಮಾಲಿನ್ಯಕಾರಕ ಕೈಗಾರಿಕೆ, ಕಲ್ಲು ಗಣಿಗಾರಿಕೆ, ಬಿಎಸ್​3 ಪೆಟ್ರೋಲ್​ ಮತ್ತು ಬಿಎಸ್​ 4 ಡೀಸೆಲ್​ ವಾಹನವನ್ನು ದೆಹಲಿ ಮತ್ತು ಸುತ್ತಮುತ್ತಲ ಜಿಲ್ಲೆಯಲ್ಲಿ ನಿರ್ಬಂಧಿಸಲಾಗುವುದು. ಪರಿಸರದ ಗುಣಮಟ್ಟವನ್ನು ಪೂರೈಸದ ಅಂತಾರಾಜ್ಯ ಬಸ್‌ಗಳು ನಗರ ಪ್ರವೇಶಿಸುವುದನ್ನೂ ಸಹ ನಿರ್ಬಂಧಿಸಲಾಗುತ್ತದೆ.

ಇದನ್ನೂ ಓದಿ: ಮದುವೆ ಮನೆಗೆ ಬಂದ ಊಹಿಸದ ಅತಿಥಿ: ಭಯದಲ್ಲಿ ಜನರು ರನ್ನಿಂಗೋ ರನ್ನಿಂಗ್​!

Last Updated : 5 hours ago

ABOUT THE AUTHOR

...view details