ಅಮರಾವತಿ (ಮಹಾರಾಷ್ಟ್ರ): ಟೆಂಪೋ ಟ್ರಾವೆಲರ್ಗೆ ಸಿಮೆಂಟ್ ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಯ ನಂದಗಾಂವ್ ಖಂಡೇಶ್ವರ ಸಮೀಪದ ಶನಿ ಶಿಂಗ್ಣಾಪುರದಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಭೀಕರ ಅಪಘಾತದಲ್ಲಿ ಶ್ರೀಹರಿ ರಾವುತ್, ಆಯುಷ್ ಬಹಲೆ, ಸುಯಶ್ ಅಂಬಾರ್ತೆ, ಸಂದೇಶ್ ಪದಾರ್ ಎಂಬ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಮೃತರನ್ನು ಅಮರಾವತಿ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ ಯುವಕರೆಲ್ಲರೂ ಅಮರಾವತಿಯಿಂದ ಯವತ್ಮಾಲ್ನಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಟೆಂಪೋ ಟ್ರಾವೆಲರ್ನಲ್ಲಿ ತೆರಳುತ್ತಿದ್ದರು. ಬೆಳಗ್ಗೆ 9 ಗಂಟೆ ಸುಮಾರಿಗೆ ನಂದಗಾಂವ್ ಖಂಡೇಶ್ವರದಿಂದ ಸ್ವಲ್ಪ ದೂರದಲ್ಲಿರುವ ಶನಿಶಿಂಗ್ಣಾಪುರ ಫೋರ್ಕ್ ಬಳಿ ವೇಗವಾಗಿ ಬಂದ ಸಿಮೆಂಟ್ ಕಾಂಕ್ರಿಟ್ ಮಿಕ್ಸರ್ ಟ್ರಕ್ವೊಂದು ಟೆಂಪೋ ಟ್ರಾವೆಲರ್ಗೆ ಡಿಕ್ಕಿ ಹೊಡೆದಿದೆ.