ಕರ್ನಾಟಕ

karnataka

ETV Bharat / bharat

75ನೇ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನ: ಒಡಿಶಾಗೆ ಮೊದಲ ಬಹುಮಾನ - ಒಡಿಶಾ

ಜನವರಿ 26ರ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಸ್ತಬ್ಧಚಿತ್ರ ಪ್ರದರ್ಶನ ವಿಜೇತರ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

Odisha Tableau
ಒಡಿಶಾ ಸ್ತಬ್ಧ ಚಿತ್ರ

By PTI

Published : Jan 31, 2024, 9:12 AM IST

ನವದೆಹಲಿ:ಇಲ್ಲಿಯ ಕರ್ತವ್ಯ ಪಥದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮಹಿಳಾ ಸಬಲೀಕರಣ ಹಾಗೂ ರಾಜ್ಯದ ಶ್ರೀಮಂತ ಕರಕುಶಲ ಮತ್ತು ಕೈಮಗ್ಗ ಕ್ಷೇತ್ರವನ್ನು ಪ್ರದರ್ಶಿಸಿದ ಒಡಿಶಾದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ. ಹಾಗೆಯೇ ಧೋರ್ಡೊ ಪ್ರವಾಸೋದ್ಯಮ ಗ್ರಾಮ ಕುರಿತಾದ ಗುಜರಾತ್​ನ ಸ್ತಬ್ಧಚಿತ್ರ ಜನರ ಆಯ್ಕೆಯ ವಿಭಾಗದಲ್ಲಿ ಮೆಚ್ಚುಗೆ ಪಡೆದಿದೆ. ಪಥ ಸಂಚಲನದಲ್ಲಿ ಅತ್ಯುತ್ತಮ ಸ್ಥಬ್ಧಚಿತ್ರ ವಿಜೇತರ ಪಟ್ಟಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿತು. ದೆಹಲಿಯ ಕಂಟೋನ್ಮೆಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಗಣರಾಜ್ಯೋತ್ಸವಕ್ಕೆ ವಿವಿಧ ಸಚಿವಾಲಯ, ಇಲಾಖೆಗಳು ವಿವಿಧ ಥೀಮ್‌ಗಳಲ್ಲಿ ಟ್ಯಾಬ್ಲೋ ಸಿದ್ಧಪಡಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸಂಸ್ಕೃತಿ ಸಚಿವಾಲಯ ತಯಾರಿಸಿದ್ದ 'ಪ್ರಜಾಪ್ರಭುತ್ವ ತಾಯಿ ಭಾರತ' ವಿಷಯವನ್ನೊಳಗೊಂಡ ಸ್ತಬ್ಧಚಿತ್ರ ಪ್ರಥಮ ಬಹುಮಾನ ಪಡೆದಿದೆ. 'ವಿಶೇಷ ಗ್ರಾಮಗಳು' ಎಂಬ ಗೃಹ ಸಚಿವಾಲಯದ ಸ್ತಬ್ಧಚಿತ್ರಕ್ಕೆ 2ನೇ ಬಹುಮಾನ ದೊರೆತಿದೆ.

ಈ ಬಾರಿ ಒಟ್ಟು 16 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡಿವೆ. ಅರುಣಾಚಲ ಪ್ರದೇಶ, ಹರಿಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಖ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಸ್ತಬ್ಧಚಿತ್ರ ಪ್ರದರ್ಶಿಸಿದ್ದವು. ಈ ಪೈಕಿ 9 ಸ್ಥಬ್ಧಚಿತ್ರಗಳು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಮತ್ತು ಇಲಾಖೆಗಳಿಂದ ಸಿದ್ಧಪಡಿಸಲಾಗಿತ್ತು.

ಜನರ ಆಯ್ಕೆ ವಿಭಾಗದಲ್ಲಿ ಉತ್ತರ ಪ್ರದೇಶ ಎರಡನೇ ಸ್ಥಾನ ಹಾಗೂ ಆಂಧ್ರಪ್ರದೇಶ ಮೂರನೇ ಸ್ಥಾನ ಪಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರ ಆಯ್ಕೆಯ ವಿಭಾಗದಲ್ಲಿ ಉತ್ತಮ ಸ್ತಬ್ಧ ಚಿತ್ರ ಪ್ರದರ್ಶಿಸಿದ ರಾಜ್ಯವನ್ನು ಆಯ್ಕೆ ಮಾಡಲು MyGov ವೇದಿಕೆಯ ಮೂಲಕ ಸಾರ್ವಜನಿಕ ಮತದಾನ ನಡೆಸಲಾಗಿತ್ತು.

ಇದನ್ನೂ ಓದಿ:ಭಾರತ ಸಂವಿಧಾನದ ರಚನೆ ಮತ್ತು ವಿಶೇಷತೆಗಳು: ಒಂದು ಅವಲೋಕನ

ABOUT THE AUTHOR

...view details